ಪೆಟ್ರೋಲ್ (Petrol Price) ಡಿಸೇಲ್ (Diesel) ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 6.4 ರೂ ನಷ್ಟು ಏರಿಕೆಯಾಗಿದೆ.
ಪೆಟ್ರೋಲ್ (Petrol Price) ಡಿಸೇಲ್ (Diesel) ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 6.4 ರೂ ನಷ್ಟು ಏರಿಕೆಯಾಗಿದೆ. ಮಾರ್ಚ್ 23 ರಿಂದ ಇಲ್ಲಿಯವರೆಗೆ 9 ಬಾರಿ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ (Bengaluru) ಪೆಟ್ರೋಲ್ ಲೀಟರ್‌ಗೆ 107.30 ರೂ, ಡೀಸೆಲ್ ಲೀಟರ್‌ಗೆ 91,27 ರೂ, ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ 107.05 ರೂ, ಡೀಸೆಲ್ ಲೀಟರ್‌ಗೆ 91.06 ರೂ ಇದೆ. ಇನ್ನು ಚಿನ್ನದ ಬೆಲೆ ನೋಡುವುದಾದರೆ, 10 ಗ್ರಾಂಗೆ 48,100 ರೂ ಇದೆ. ಬೆಳ್ಳಿ ಕೆಜಿಗೆ 71,700 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿಯೂ ಚಿನ್ನ 48,100 ರೂ ಇದೆ. ಚೆನ್ನೈನಲ್ಲಿ ಚಿನ್ನ 10 ಗ್ರಾಂಗೆ 48,340 ರೂ ಇದೆ.