Sep 20, 2021, 3:17 PM IST
ಬೆಂಗಳೂರು(ಸೆ.20) ಚಿನ್ನ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಮಕ್ಕಳಿಗೆ ಈ ಹಳದಿ ಚಿನ್ನ ಅಂದ್ರೆ ಅದೇನೋ ವ್ಯಾಮೋಹ. ಆದರೆ ಚಿನ್ನ ಖರೀದಿಗೆ ಕೊಂಚ ಬ್ರೇಕ್ ಹಾಕುವಂತೆ ಮಾಡಿದ್ದು ಕೊರೋನಾ. ಈ ಸೋಂಕು ಯಾವಾಗ ಹಬ್ಬಿಕೊಂಡಿತೋ ಆಗಲೇ ಚಿನ್ನದ ದರವೂ ಏರಲಾರಂಭಿಸಿತ್ತು. ನಡುವೆ ಕೊಂಚ ಇಳಿಕೆಯಾದರೂ ಏರಿಳಿತದ ಆಟ ಮುಂದುವರೆದಿತ್ತು. ಆದರೀಗ ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿದೆ. ಅತ್ತ ಗಣೇಶ ಚತುರ್ಥಿ, ಗೌರಿ ಹಬ್ಬದ ಸಂಭ್ರಮವೂ ಮುಗಿದೆ. ಹೀಗಿರುವಾಗ ಇತ್ತ ಚಿನ್ನದ ದರವೂ ಇಳಿಕೆ ಕಂಡಿದೆ.
ಹೌದು 20 ಸೆಪ್ಟೆಂಬರ್ 2021ರ ಚಿನ್ನದ ದರ ಎಷ್ಟು ಎಂದು ನೋಡುವುದಾದರೆ, 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,300 ರೂ. ಆಗಿದೆ. ಇಷ್ಟೇ ಅಲ್ಲದೇ ಪೆಟ್ರೋಲ್, ಡೀಸೆಲ್ ಹಾಗೂ ಬೆಳ್ಳಿಯ ಬೆಲೆಯ ವಿವರವೂ ಇಲ್ಲಿದೆ ನೋಡಿ.