ಬೆಳಗಾದರೆ ಕೇಂದ್ರ ಬಜೆಟ್: ‘ಸುವರ್ಣ ನಿರೀಕ್ಷೆ’ ತಿಳಿಯಿರಿ ಫಟಾಫಟ್!

Jul 4, 2019, 9:55 PM IST

ಬೆಂಗಳೂರು(ಜು.04): ನಾಳೆ(ಜು.05) ಮೋದಿ 2.0 ಸರ್ಕಾರದ ಮೊದಲ ವಾರ್ಷಿಕ ಬಜೆಟ್ ಮಂಡನೆಯಾಗಲಿದ್ದು, ಸಹಜವಾಗಿ ದೇಶದ ಜನತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ನಿರೀಕ್ಷೆಗಳನ್ನು ಹೊಂದಿದ್ದಾರೆ. ಕಳದ ವರ್ಷ ಚುನಾವಣಾ ಪುರ್ವ ಜನಪ್ರಿಯ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ, ಇದೀಗ ಕಳೆದ ಬಜೆಟ್’ನಲ್ಲಿ ಘೋಷಿಸಿದ್ದ ಯೋಜನೆಗಳನ್ನು ಮುಂದುವರೆಸುವ ಒತ್ತಡಕ್ಕೂ ಸಿಲುಕಿದೆ. 

ಈ ಮಧ್ಯೆ ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್’ನ ಹೂರಣ ಏನಿರಲಿದೆ?, ಜನತೆಯ ನಿರೀಕ್ಷೆಗಳೇನು?, ತೆರಿಗೆ ಪದ್ದತಿಯಲ್ಲಿ ಏನಾದರೂ ಹೊಸ ಬದಲಾವಣೆಗಳಾಗಲಿವೆಯೇ?, ಜನಪ್ರಿಯ ಘೋಷಣೆಗಳು ಹೊರ ಬೀಳಲಿವೆಯೇ?, ಇವೆಲ್ಲವುದರ ಕುರಿತು ನಿಮ್ಮ ಸುವರ್ಣನ್ಯೂಸ್ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ. ನಾಳಿನ ಕೇಂದ್ರ ಬಜೆಟ್ ಕುರಿತು  ಸುವರ್ಣನ್ಯೂಸ್’ನಲ್ಲಿ ಆರ್ಥಿಕ ತಜ್ಞರ ಅಭಿಮತದ ಸಂಪೂರ್ಣ ಚರ್ಚೆ ನಡೆದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...