Aug 10, 2022, 3:50 PM IST
ಅಧಿಕಾರದಲ್ಲಿರುವ ವೇಳೆ ರಾಜಕೀಯ ನಾಯಕರ ಆಸ್ತಿ ಗಣನೀಯ ಏರಿಕೆಯಾಗುವುದು ಸಹಜ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಆಸ್ತಿಯಲ್ಲಿ 84 ಲಕ್ಷ ರು.ನಷ್ಟುಇಳಿಕೆಯಾಗಿದೆ. ಕಳೆದ ವರ್ಷ 3.22 ಕೋಟಿ ರು. ಆಸ್ತಿ ಹೊಂದಿದ್ದ ಮೋದಿ ಅವರ ಆಸ್ತಿ ಮೊತ್ತ ಇದೀಗ 2.23 ಕೋಟಿ ರು.ಗೆ ಇಳಿದಿದೆ.
ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಾರಾ ಪ್ರಧಾನಿ ನರೇಂದ್ರ ಮೋದಿ?
ನರೇಂದ್ರ ಮೋದಿ ಅವರು ಮಾಡಿರುವ ತಮ್ಮ ಆಸ್ತಿ ಘೋಷಣೆ ಅನ್ವಯ ಅವರ ಬಳಿ 2022ರ ಮಾ.31ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕೈಯಲ್ಲಿ 35250 ರು. ನಗದು, 1.89 ಲಕ್ಷ ರು. ಮೌಲ್ಯದ ಜೀವವಿಮೆ, 9.05 ಲಕ್ಷ ರು. ಮೌಲ್ಯದ ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪತ್ರ, 1.73 ಲಕ್ಷ ರು. ಬೆಲೆಬಾಳುವ 4 ಚಿನ್ನದ ಉಂಗುರ ಇದೆ. ಉಳಿದಂತೆ ಬಹುತೇಕ ಬ್ಯಾಂಕ್‌ನಲ್ಲಿ ಇಡಲಾಗಿರುವ ಠೇವಣಿಗಳಾಗಿವೆ. ಮೋದಿ ಅವರ ಬಳಿ ಬಾಂಡ್, ಮ್ಯೂಚುವಲ್ ಫಂಡ್, ಷೇರು ಹೂಡಿಕೆ ಇಲ್ಲ. ಯಾವುದೇ ವೈಯಕ್ತಿಕ ವಾಹನವನ್ನು ಹೊಂದಿಲ್ಲ.