
ಅತ್ಯಾ*ಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿಯಾಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ವಿವಾದಿತ ಧಾರ್ಮಿಕ ನಾಯಕ ಡೇರಾ ಸಚ್ಚಾ ಸೌದಾದ ರಾಮ್ ರಹೀಂಗೆ ಹರ್ಯಾಣ ಸರ್ಕಾರ 14ನೇ ಬಾರಿ ಪರೋಲ್ ನೀಡಿದೆ
ಚಂಡೀಗಢ: ಅತ್ಯಾ*ಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿಯಾಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ವಿವಾದಿತ ಧಾರ್ಮಿಕ ನಾಯಕ ಡೇರಾ ಸಚ್ಚಾ ಸೌದಾದ ರಾಮ್ ರಹೀಂಗೆ ಹರ್ಯಾಣ ಸರ್ಕಾರ 14ನೇ ಬಾರಿ ಪರೋಲ್ ನೀಡಿದೆ. ಹೀಗಾಗಿ ರಾಮ್ ರಹೀಂ ಮಂಗಳವಾರ ಜೈಲಿನಿಂದ ಹೊರ ನಡೆದಿದ್ದಾನೆ. 2017ರಲ್ಲಿ ಇಬ್ಬರು ಸಾದ್ವಿಯರ ಮೇಲೆ ಅತ್ಯಾ*ಚಾರ, 2019ರಲ್ಲಿ ಪತ್ರಕರ್ತರ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ರಾಮ್ ರಹೀಂಗೆ ಆ.15 ರಂದು ಹುಟ್ಟುಹಬ್ಬದ ನಿಮಿತ್ತ 40 ದಿನಗಳ ಪರೋಲ್ ನೀಡಲಾಗಿದೆ. ಇದು ವರ್ಷದ 3ನೇ, ಜೈಲು ಸೇರಿದ ಬಳಿಕ ಸಿಕ್ಕ 14ನೇ ಪರೋಲ್ ಆಗಿದೆ. ಈವರೆಗೆ ರಾಮ್ ರಹೀಂ 366 ದಿನಗಳು ಜೈಲಿನಿಂದ ಹೊರಗಿದ್ದಾನೆ.