ಹಳೆ 100 ರೂ ನೋಟು ಮಾರ್ಚ್‌ಗೆ ಅಮಾನ್ಯ : ನಿಮ್ಮ ಮುಂದಿರುವ ಆಯ್ಕೆ ಇದು.!

Jan 23, 2021, 4:15 PM IST

ಬೆಂಗಳೂರು (ಜ. 23): 100 ರು. ಮುಖಬೆಲೆಯ ಹಳೆಯ ನೋಟುಗಳು ಮಾರ್ಚ್‌ನಲ್ಲಿ ಅಮಾನ್ಯಗೊಳ್ಳಲಿವೆ.  ಸ್ವಚ್ಛವಾದ ಹೊಸ ಸೀರಿಸ್‌ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ ಹಳೆಯ ಸೀರಿಸ್‌ನ ಎಲ್ಲ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ. ನೋಟು ವಾಪಸ್‌ ಕಾರಣಕ್ಕೆ ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ.  

ಕೊರೊನಾ ಮಹಾಮಾರಿ, ಕೃಷಿಕಾಯ್ದೆ ಮೋದಿ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿತಾ? ಸಮೀಕ್ಷೆ ಹೇಳೋದೇ ಬೇರೆ!

ಹಳೆಯ ನೋಟುಗಳಂತೆ ಕಾಣುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ 100ರ ಮುಖಬೆಲೆಯ ಹಳೆಯ ಸೀರಿಸ್‌ನ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ ಈ ಹಿಂದೆಯೇ ಮುದ್ರಣಗೊಂಡುರುವ ಈ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದು ಆರ್‌ಬಿಐ ಉದ್ದೇಶವಾಗಿದೆ. ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಾ ಬರಲಾಗಿದೆ. ಮಾಚ್‌ರ್‍ ಅಂತ್ಯಕ್ಕೆ ಇದು ಪೂರ್ಣವಾಗಲಿದೆ' ಎಂದು ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್‌ ಸ್ಪಷ್ಟಪಡಿಸಿದ್ದಾರೆ.