ಫಟಾಫಟ್ ರೆಡಿ, ಬಾಯಿಗೂ ರುಚಿ ಎಂದು ಮ್ಯಾಗಿ ತಿನ್ನುವ ಮುನ್ನ ಈ ವರದಿ ಓದ್ಕೊಂಡು ಬಿಡಿ..!

Jun 4, 2021, 5:42 PM IST

ಬೆಂಗಳೂರು (ಜೂ. 04): ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಹೀಗೆ ಬಹುತೇಕ ಎಲ್ಲರಿಗೂ ಮ್ಯಾಗಿ ನೂಡಲ್ಸ್ ಅಂದ್ರೆ ಬಹಳ ಇಷ್ಟ. ವಿವಿಧ ಫ್ಲೇವರ್‌ಗಳಲ್ಲಿ ಬರುವ ಐದೇ ನಿಮಿಷದಲ್ಲಿ ತಯಾರಾಗುವ ಮ್ಯಾಗಿಗೆ ಭಾರೀ ಡಿಮ್ಯಾಂಡ್‌.  ಆದರೆ ಇದೇ ಮ್ಯಾಗಿಯ ಬಗ್ಗೆ ಅಘಾತಕಾರಿ ವಿಚಾರವೊಂದು ಹೊರ ಬಿದ್ದಿದೆ. 

ಉದ್ಯಮಕ್ಕೆ ಹೊಡೆತ: ಕಳೆದ ವರ್ಷ ಸಂಬಳವೇ ಪಡೆದಿಲ್ಲ ಮುಕೇಶ್ ಅಂಬಾನಿ

ನೆಸ್ಲೆಯು ಆಂತರಿಕ ವರದಿಯಲ್ಲಿ ತಾನು ತಯಾರಿಸುವ ಶೇ 70 ಕ್ಕೂ ಅಧಿಕ ಆಹಾರ ಮತ್ತು ಪಾನೀಯಗಳು  ಆರೋಗ್ಯದ ವ್ಯಾಖ್ಯಾನಕ್ಕನುಗುಣವಾಗಿ ತಯಾರಾಗುತ್ತಿಲ್ಲ ಎಂಬ ಅಂಶ ಉಲ್ಲೇಖಿಸಿದೆ. ವಿಶ್ವದ ಅತಿದೊಡ್ಡ ಆಹಾರ ಉತ್ಪಾದಕ ಕಂಪನಿಯು "ನಾವು ಎಷ್ಟು ನವೀಕರಿಸಿದರೂ" ಕೆಲ ಆಹಾರ ಉತ್ಪನ್ನಗಳು "ಎಂದಿಗೂ ಆರೋಗ್ಯಕರವಾಗಿರಲು ಸಾಧ್ಯವಿಲ್ಲ" ಎಂಬುವುದನ್ನೂ ಒಪ್ಪಿಕೊಂಡಿವೆ.