ಹಳ್ಳಹಿಡಿದ ಖಾಸಗಿ ಸಾರಿಗೆ ಉದ್ಯಮ: ವಾಹನ ನಿರ್ವಹಣೆ ಮಾಡಲಾರದೆ ಸಮಸ್ಯೆ!

Sep 15, 2021, 5:18 PM IST

ಕೊಡಗು(ಸೆ.15): ಕೊರೋನಾದಿಂದಾಗಿ ಸಂಕಷ್ಟ ಎದುರಿಸದ ಸಮೂಹವೇ ಇಲ್ಲ ಅನ್ಬೋದು. ಎಲ್ಲಾ ವರ್ಗದ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ಕೋವಿಡ್‍ನ ಕರಾಳ ಛಾಯೆ ತಟ್ಟಿದೆ. ಅದರಲ್ಲೂ ಖಾಸಗಿ ಬಸ್‍ಗಳಂತೂ ಇನ್ನೂ ಚೇತರಿಸಿಕೊಂಡಿಲ್ಲ. ಪರಿಣಾಮ ಅರ್ಧದಷ್ಟು ಬಸ್‍ಗಳು ಮಾತ್ರ ರಸ್ತೆಗಿಳಿದಿವೆ, ಹೀಗಾಗಿ ಗ್ರಾಮೀಣ ಪ್ರದೇಶಗಳೆಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೊಡಗು ಜಿಲ್ಲೆಯಲ್ಲಿ 160 ಖಾಸಗಿ ಬಸ್‍ಗಳಿವೆ. ಎಲ್ಲವೂ ಗ್ರಾಮೀಣ ಭಾಗಗಳಿಗೆ ಸೇವೆ ಒದಗಿಸುವ ಬಸ್‍ಗಳು. ಜಿಲ್ಲೆಯಾದ್ಯಂತ ಈಗ 70 ಬಸ್‍ಗಳು ಮತ್ತೆ ರಸ್ತೆಗಿಳಿದಿವೆ. ಅನೇಕರು ಬಸ್ ಟ್ಯಾಕ್ಸ್ ಕಟ್ಟೋದಕ್ಕೆ ಸಾಧ್ಯವಾಗದೆ RTOಗೆ ಸರಂಡರ್ ಮಾಡಿದ್ದಾರೆ. RTOಗೆ ಸರಂಡರ್ ಮಾಡಿದ್ರೆ ಟ್ಯಾಕ್ಸ್ ಕಟ್ಟುವ ಪ್ರಮೇಯ ಬರೋದಿಲ್ಲ. ಹೀಗಾಗಿ ಬಹುತೇಕರು ಈ ಕ್ರಮವನ್ನ ಅನುಸರಿಸಿದ್ದಾರೆ. ಈ ಕಾರಣಕ್ಕೆ ಅನೇಕ ಬಸ್‍ಗಳು ನಿಂತಲ್ಲೇ ಇವೆ. ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಧೂಳು ಹಿಡಿದಿರುವ ಪರಿಸ್ಥಿತಿ ಖಾಸಗಿ ಬಸ್‍ಗಳದ್ದು. ಕೆಲವರು ಬಸ್ ರಿಲೀಸ್ ಮಾಡಿಕೊಂಡಿದ್ರೂ ನಿರೀಕ್ಷಿತ ಲಾಭವಾಗುತ್ತಿಲ್ಲ.