
ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಭಾರತೀಯ ಉದ್ಯಮಗಳಿಗೆ ಹೆಚ್ಚಿನ ಲಾಭಗಳು ದೊರೆಯಲಿದೆ.
ಬೆಂಗಳೂರು (ಜು.25): ಭಾರತ ಹಾಗೂ ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ ಹಾಕಿದ್ದಾರೆ. ಉಭಯ ದೇಶಗಳ ವಾಣಿಜ್ಯ ಸಚಿವರು ಒಪ್ಪಂದಗಳಿಗೆ ಪ್ರಧಾನಿ ಸಮ್ಮುಖದಲ್ಲಿ ಸಹಿ ಮಾಡಿದರು.
ಕೇಂದ್ರ ಸರ್ಕಾರ vs ಉಪರಾಷ್ಟ್ರಪತಿ ಬೆಂಕಿ ಹೊತ್ತಿಕೊಂಡಿದ್ದೇಗೆ? ರಾಜೀನಾಮೆ ನೀಡಲು ಹಿಂದಿರುವ ಕಾರಣವೇನ
ಒಪ್ಪಂದದಿಂದ ಭಾರತದ ಉದ್ಯಮಗಳಿಗೆ ಹೆಚ್ಚು ಅನುಕೂಲ ಆಗಲಿದೆ. ದಶಕಗಳಿಂದ ಈ ಮುಕ್ತ ವ್ಯಾಪಾರ ಒಪ್ಪಂದ ನೆನೆಗುದಿಗೆ ಬಿದ್ದಿತ್ತು. ಟ್ರಂಪ್ ತೆರಿಗೆ ಯುದ್ಧದ ಸಂದರ್ಭದಲ್ಲಿ ಮಹತ್ವದ ಒಪ್ಪಂದ ಇದಾಗಿದೆ.
ಇದರಿಂದಾಗಿ ಬ್ರಿಟನ್‌ನ ಸ್ಕಾಚ್, ವಿಸ್ಕಿ ಬೆಲೆ ಇನ್ಮುಂದೆ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗಲಿದ್ದರೆ, ಬ್ರಿಟನ್‌ನ ಐಷಾರಾಮಿ ಕಾರ್‌ಗಳ ಮೇಲೆ ತೆರಿಗೆ ಇಳಿಕೆ ಆಗಲಿದೆ. ಭಾರತದ ಬಹುತೇಕ ವಸ್ತುಗಳಿಗೆ ಬ್ರಿಟನ್‌ನಲ್ಲಿ ಶೂನ್ಯ ತೆರಿಗೆ ಇರಲಿದೆ.