ಮೋದಿ ಕಳೆದುಕೊಂಡ ಆ 2.8 ಲಕ್ಷ ಕೋಟಿ ರೂ.: ಮರುಗಳಿಕೆಗೆ ಪ್ರಯತ್ನ ಶುರು!

Dec 27, 2019, 1:13 PM IST

ಬೆಂಗಳೂರು(ಡಿ.27): ಆರ್ಥಿಕ ಹಿಂಜರಿಕೆಯಿಂದ ಭಾರತವು 2.8 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಆರ್ಥಿಕ ಪ್ರಗತಿ ಅಥವಾ ಹಿನ್ನಡೆಯನ್ನು ಶೇಕಡಾವಾರು ಮಾನದಂಡದಲ್ಲಿ ಲೆಕ್ಕಹಾಕಲಾಗುತ್ತದೆ. ಆದರೆ, ವಾಸ್ತವಿಕ ಜಿಡಿಪಿ ಮತ್ತು ಸಂಭಾವ್ಯ ಜಿಡಿಪಿ ನಡುವಿನ ವ್ಯತ್ಯಾಸ ನೋಡಿದಾಗ, 2020ರ ಆರ್ಥಿಕ ವರ್ಷದಲ್ಲಿ 2.8 ಲಕ್ಷ ಕೋಟಿ ಕೊರತೆ ಕಂಡುಬರುತ್ತಿದೆ. ವಾಸ್ತವಿಕ ಜಿಡಿಪಿ ಮತ್ತು ಸಂಭಾವ್ಯ ಜಿಡಿಪಿ ನಡುವಿನ ವ್ಯತ್ಯಾಸವನ್ನು ಔಟ್‌ಪುಟ್ ಗ್ಯಾಪ್ ಎಂದು ಕರೆಯಲಾಗುತ್ತೆ. ಅದರ ಆಧಾರದಲ್ಲಿ, ಆರ್ಥಿಕ ವ್ಯವಸ್ಥೆಗೆ ಬೇಕಾಗಿರುವ ಹಣಕಾಸು ಅವಶ್ಯಕತೆಗಳನ್ನು ತಜ್ಞರು ನಿರ್ಧರಿಸುತ್ತಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..