ಚಿನ್ನಕ್ಕೆ `ಹಾಲ್ ಮಾರ್ಕ್' ಕಡ್ಡಾಯ: ತಲೆಮಾರಿಂದ ಬಂದ ಹಳದಿ ಲೋಹದ ಕತೆ ಏನು?

Jun 17, 2021, 9:49 AM IST

ನವದೆಹಲಿ(ಜೂ.17): ಇನ್ಮುಂದೆ ಪ್ರತೀ ಚಿನ್ನಕ್ಕೂ ಇರ್ಲೇ ಬೇಕು ಹಾಲ್‌ ಮಾರ್ಕ್. ಅದಿಲ್ಲವೆಂದಾದರೆ ಮಾರುವಂತಿಲ್ಲ, ಖರೀದಿಸುವಂತೆಯೂ ಇಲ್ಲ. ಹೊಸ ಚಿನ್ನಕ್ಕೇನೋ ಮಾರ್ಕ್ ಬಿತ್ತು ಸರಿ. ಆದ್ರೆ ಮನೆಯಲ್ಲಿರೋ ಚಿನ್ನದ ಕತೆ ಏನು? ಪ್ರತೀ ಗ್ರಾಂ ಚಿನ್ನಕ್ಕೂ ಸರ್ಕಾರ ಕೇಳ್ತಿದೆ ಲೆಕ್ಕ. ಹಾಗಾದ್ರೆ ತಲೆಮಾರಿಂದ ಚಿನ್ನಕ್ಕೆ ಎಲ್ಲಿಂದ ಲೆಕ್ಕ ತರೋದು? 

ಕೇಂದ್ರ ಸರ್ಕಾರವು 2021 ರ ಜೂನ್ 15 ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ. 14, ಎಲ್ 8 ಮತ್ತು 22 ಕ್ಯಾರೆಟ್ ಚಿನ್ನದ ಮೂರು ಶ್ರೇಣಿಗಳಲ್ಲಿ ಆಭರಣಗಳು ಮಾರಾಟವಾಗಲಿವೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಎಂದು ತಿಳಿಸಿದೆ.

ಇದು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುತ್ತದೆ ಮತ್ತು ಆಭರಣ ವ್ಯಾಪಾರಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಪೂರೈಕೆದಾರರ ಗುಣಮಟ್ಟ ಮತ್ತು ಯೋಜನೆಗಳನ್ನು ಗುಣಮಟ್ಟದ ಪ್ರಜ್ಞೆಯ ಆಭರಣಕಾರನಾಗಿ ಪರಿಶೀಲಿಸಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.