May 7, 2020, 6:21 PM IST
ನವದೆಹಲಿ(ಮೇ.07): ಕೊರೋನಾ ವೈರಸ್ ಉಗಮ ಸ್ಥಾನ ಎನಿಸಿರುವ ಚೀನಾದಿಂದ ವಿದೇಶಿ ಕಂಪನಿಗಳು ಹೊರಬರಲಾರಂಭಿಸಿದ್ದು, ಭಾರತದತ್ತ ಮುಖ ಮಾಡಿವೆ.
ಚೀನಾದಿಂದ ಭಾರತಕ್ಕೆ ಬರುವ ವಿದೇಶಿ ಕಂಪನಿಗಳನ್ನು ಸ್ವಾಗತಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವ ಸನ್ನದ್ಧವಾಗಿದೆ. ವಿದೇಶಿ ಕಂಪನಿಗಳಿಗೆ ನೆರವಾಗುವಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್ ಭೂಮಿ ಗುರುತು!
ಇದಕ್ಕಾಗಿ ವಿದೇಶಿ ಹೂಡಿಕೆ ನೀತಿಯಲ್ಲೂ ಕೇಂದ್ರ ಸರ್ಕಾರ ಗಮನಾರ್ಹ ಬದಲಾವಣೆಯನ್ನು ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕಾರ್ಯತತ್ಪರವಾಗಿದ್ದು, ವಿದೇಶಿ ಕಂಪನಿಗಳನ್ನು ತಮ್ಮತ್ತ ಸೆಳೆಯಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.