Feb 25, 2022, 12:46 PM IST
ಕೊಡಗು(ಫೆ.25): ಕಾಫಿ ಕಣಿವೆ ಕೊಡಗು ಜಿಲ್ಲೆಯಲ್ಲಿ ಭರ್ತಿ ನಾಲ್ಕು ವರ್ಷಗಳ ಬಳಿಕ ಮಂದಹಾಸ ಮೂಡಿದೆ. ಒಂದ್ಕಡೆ ಉತ್ತಮ ಕಾಫಿ ಇಳುವರಿ ಬಂದಿದ್ದರೆ ಅದಕ್ಕೆ ಪೂರಕವಾಗಿ ಕಾಫಿ ದರ ಕೂಡ ಉತ್ತಮವಾಗಿದೆ. ಹಾಗಾಗಿ ಕಳೆದ ನಾಲ್ಕು ವರ್ಷಗಳಿಮದ ಅನುಭವಿಸಿದ್ದ ನಷ್ಟವನ್ನ ಈ ಬಾರಿ ಸರಿದೂಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ
ಸದ್ಯ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರೆಲ್ಲರ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿದೆ. ಕಾರಣ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕಾಫಿ ಬೆಳೆ ಉತ್ತಮವಾಗಿ ಮೂಡಿಬಂದಿದೆ. 2018ರಿಂದ ಮೂರು ವರ್ಷ ಪ್ರಕೃತಿ ವಿಕೋಪದಿಂದ ಕಾಫಿ ಬೆಲೆ ತತ್ತರಿಸಿತ್ತು. ಅದಾದ ಬಳಿಕ ಕೊರೊನಾ ಕಾರಣದಿಂದಾಗಿ ವಾಣಿಜ್ಯ ಬೆಳೆ
Hubballi KIMS: ಮೂಲೆಗುಂಪಾದ ಕಿಯೋಸ್ಕ್ ಮಷಿನ್: ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ..!
ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಸಕಾಲಿಕ ಮಳೆಯಾದ ಕಾರಣ ಕಾಫಿ ಹೂವು ಕಾಯಿ ಕಟ್ಟಿ ಇದೀಗ ಅತ್ಯುತ್ತಮ ಫಸಲು ಬಂದಿದೆ ಅಂತಾರೆ ಕಾಫಿ ಬೆಳೆಗಾರ ಮಾದೇಟಿರ ಬೆಳ್ಯಪ್ಪ
ವಿಶೇಷ ಅಂದ್ರೆ ಈ ಬಾರಿ ಕಾಫಿ ಬೆಲೆ ಮಾತ್ರ ಅತ್ಯುತ್ತಮವಾಗಿ ಬಂದಿಲ್ಲ. ಅದ್ರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆಗೆ ಒಳ್ಳೆಯ ಬೆಲೆ ಕೂಡ ಬಂದಿದೆ. 50 ಕೆಜಿಯ ಅರೇಬಿಕಾ ಕಾಫಿ ಭರ್ತಿ 7000 ರೂಪಾಯಿ ಬೆಲೆ ಬಾಳುತ್ತಿದೆ. ಇದೇ ವೇಳೆ 50 ಕೆಜಿ ರೋಬುಷ್ಟಾ ಕಾಫಿಗೆ 4 ಸಾವಿರ ರೂಪಾಯಿ ಬೆಲೆ ಸಿಗುತ್ತಿದೆ. ಕಳೆದ ವರ್ಷಕ್ಕಿಂತ ಚೀಲಕ್ಕೆ 1000 ರೂಪಾಯಿ ಹೆಚ್ಚು ಬೆಲೆ ಸಿಗುತ್ತಿದೆ. ಇನ್ನು ಪಾರ್ಚ್ಮೆಂಟ್ ಕಾಫಿಗಂತೂ 15 ಸಾವಿರರೂ ಬೆಲೆ ಇದೆ. ಹಾಗಾಗಿ ಸಹಜವಾಗಿಯೇ ರೈತರು ಖುಷಿಯಾಗಿದ್ದಾರೆ. ಕಾಫಿ ಬೆಲೆಯನ್ನ ನೆಚ್ಚಿಕೊಂಡಿರುವ ಸಹಸ್ರಾರು ಕಾರ್ಮಿಕರು,
ಕಳೆದ ಮೂರು ವರ್ಷಗಳ ಕಾಲ ಅತಿವೃಷ್ಟಿಯಿಂದಾಗಿ ಕಾಫಿ ಬೆಲೆ ನೆಲಕಚ್ಚಿತ್ತು. ಆದ್ರೆ ಇ ಬಾರಿ ಕಾಫಿ ಬೆಳೆ ಕೊಡಗಿನ ರೈತರ ಕೈ ಹಿಡಿದಿದೆ. ಇನ್ನು ಈ ಬಾರಿ ಕೂಡ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸಕಾಲಿಕ ಮಳೆಯಾದ್ರೆ ಮುಂದಿನ ವರ್ಷವೂ ಬಂಪರ್ ಬೆಲೆ ನಿರೀಕ್ಷೆ ಮಾಡಬಹುದು ಎಂಬುದು ಇಲ್ಲಿನ ರೈತರ ಆಶಾಭಾವನೆ.