Feb 5, 2022, 5:54 PM IST
ಬೆಂಗಳೂರು (ಫೆ. 05): ನಗರತ್‌ಪೇಟೆಯಲ್ಲಿ ಕಲಬೆರಕೆ ಚಿನ್ನ ಮಾರಾಟದ ದಂಧೆ ಮೇಲೆ ದಾಳಿ ನಡೆಸಿದ ಸಿಸಿಬಿ, ವಿದೇಶಿ ಕಂಪನಿಗಳ ಹೆಸರಿನಲ್ಲಿ ಕೇಜಿ ಗಟ್ಟಲೇ ಕಲಬೆರಕೆ ಚಿನ್ನವನ್ನು ಪರಿಶುದ್ಧ ಎಂದು ನಂಬಿಸಿ ಜನರಿಗೆ ಮಾರುತ್ತಿದ್ದ ನಾಲ್ವರನ್ನು ಬಂಧಿಸಿ 1.7 ಕೆ.ಜಿ. ಕಲಬೆರಕೆ ಚಿನ್ನವನ್ನು ವಶಪಡಿಸಿಕೊಂಡಿದೆ.
Cover Story:ಮೊಬೈಲ್ ಆ್ಯಪ್ ಸಾಲ ಮಾಡ್ತೀರಾ.? ಹಾಗಾದ್ರೆ ಈ ಸುದ್ದಿ ನೋಡಿ
ಚಿನ್ನದ ಗಟ್ಟಿಗಳನ್ನು ಆಸ್ಮಿಯಮ್ ಸ್ಪಾಂಜ್ ಎಂಬ ರಾಸಾಯನಿಕ ವಸ್ತುವನ್ನು ಬಳಸಿ ಕಲಬೆರಕೆ ಮಾಡಿ ಬಳಿಕ ಆರೋಪಿಗಳು, ಚಿನ್ನವನ್ನು ಕರಗಿಸಿ ಬಿಸ್ಕತ್‌ಗಳನ್ನು ಮಾಡುತ್ತಿದ್ದರು. ನಂತರ ಸ್ವಿಜರ್‌ಲ್ಯಾಂಡ್, ದುಬೈ, ಗಲ್‌್ಫ ದೇಶಗಳ ಪ್ರತಿಷ್ಠಿತ ಚಿನ್ನದ ಮಾರಾಟ ಕಂಪನಿಗಳ ನಕಲಿ ಸೀಲುಗಳನ್ನು ಬಳಸಿ ಕಲಬೆರಕೆ ಚಿನ್ನವನ್ನು ಪರಿಶುದ್ಧವೆಂದು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಪ್ರತಿದಿನ 3ರಿಂದ 5 ಕೆ.ಜಿ ಚಿನ್ನವನ್ನು ಆರೋಪಿಗಳು ವಿಲೇವಾರಿ ಮಾಡುತ್ತಿದ್ದರು