Jul 2, 2022, 10:10 PM IST
ಬೆಂಗಳೂರು (ಜು. 02): ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಹಾಗೂ ಕನ್ನಡಪ್ರಭ (Kannada Prabha) ಎಲ್ಲ ಮಾಧ್ಯಮಗಳಿಗಿಂತ ವಿಭಿನ್ನ. ಏಷ್ಯಾನೆಟ್ ತಂಡ ನೇರ ದಿಟ್ಟ ನಿರಂತರ ಟ್ಯಾಗ್‌ಲೈನ್‌ನೊಂದಿಗೆ ಹೊಸ ಸಂಚಲನ ಸೃಷ್ಟಿಸುತ್ತಿದೆ. ಸುದ್ದಿ ಪ್ರಸಾರದ ಜೊತೆಗೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವುದರಲ್ಲೂ ಸದಾ ಮುಂದಿದೆ. ಸಾಧಕರ ಕುರಿತು ಸುದ್ದಿ ಪ್ರಸಾರದ ಜತೆಗೆ ಅವರನ್ನು ಪುರಸ್ಕರಿಸಿ ಗೌರವಿಸುವ ಕಾರ್ಯದಲ್ಲೂ ಎಲ್ಲರಿಗೂ ಮಾದರಯಾಗಿದೆ. ಏಷ್ಯಾನೆಟ್ ತಂಡದ ಗೌರವದ ನಂತರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಕರು ಮನ್ನಣೆ ಪಡೆಯತ್ತಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಈಗಾಗಲೇ ರೈತ ರತ್ನ ಪ್ರಶಸ್ತಿ, ಅಸಾಮನ್ಯ ಕನ್ನಡಿಗ, ಶೌರ್ಯ ಪ್ರಶಸ್ತಿ, ಮಹಿಳಾ ಸಾಧಕಿಯರು, ಕಿರಿಯ ಸಂಪಾದಕ, ಎಜುಕೇಶನ್ ಎಕ್ಸ್ಫೋ, ಫುಡ್ ಆಂಡ್ ಫರ್ನಿಚರ್ ಎಕ್ಸ್ಫೋ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಿದೆ. ಮೊಟ್ಟ ಮೊದಲ ಬಾರಿಗೆ ಉದ್ಯಮದಲ್ಲಿ ಸಾಧನೆಗೈದ ಉದ್ಯಮಿಗಳನ್ನು ಗುರಿತಿಸಿ ಬೆಂಗಳೂರಿನಲ್ಲಿ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗೆ ಜಗತ್ತಿನ ಏಳು ಅದ್ಭುತಗಳ ರೀತಿ, ಕರ್ನಾಟಕದ 7 ಅದ್ಭುತಗಳನ್ನು ಹುಡುಕಲು ಮುಂದಾಗಿದೆ.
ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಉತ್ತರ ಕರ್ನಾಟಕ ಭಾಗದ ಉದ್ಯಮ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದೆ. ಇದೂ ಕೂಡ ಮಾಧ್ಯಮ ಲೋಕದಲ್ಲೇ ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನ. ಉತ್ತರ ಕರ್ನಾಟಕದ ಉದ್ಯಮಿಗಳು ಇದರಿಂದ ಉತ್ಸಾಹ ಹೆಚ್ಚಿಸಿಕೊಳ್ಳಲಿ. ಕರುನಾಡು ಇನ್ನಷ್ಟು ಶ್ರೀಮಂತಗೊಳ್ಳಲ್ಲಿ, ಪ್ರತಿ ಶ್ರಮಿಕನು ಖುಷಿಯಾಗಿರಲಿ ಎಂಬುದು ಏಷ್ಯಾನೆಟ್ ತಂಡದ ಆಶಯ.