Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!

Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!

Published : Jan 13, 2026, 03:24 PM IST
ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 34 ವರ್ಷದ ಟೆಕ್ಕಿಯ ಸಾವು ಆಕಸ್ಮಿಕ ಎಂದು ಭಾವಿಸಲಾಗಿತ್ತು. ಆದರೆ, ಐದು ದಿನಗಳ ನಂತರದ ತನಿಖೆಯಲ್ಲಿ, ಆಕೆಯ 18 ವರ್ಷದ ನೆರೆಮನೆಯ ಯುವಕನೇ ಆಕೆಯನ್ನು ಕೊಂದು, ಅಪಘಾತವೆಂದು ಬಿಂಬಿಸಲು ಬೆಂಕಿ ಹಚ್ಚಿದ್ದ ಭಯಾನಕ ಸತ್ಯ ಬಯಲಾಗಿದೆ.

ಬೆಂಗಳೂರು: ಆಕೆ ಒಂಟಿ ಜೀವನ ನಡೆಸುತ್ತಿದ್ದ ಮುದ್ದು ಚೆಲುವೆ. ದೂರದ ಊರಿನಿಂದ ಬಂದು. ಒಂದೊಳ್ಳೆ ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ಪಡೆಯುತ್ತಿದದ್ದಳು. ವಯಸ್ಸು 34 ಆಗಿದ್ರೂ ಅದ್ಯಾಕೋ ಮದುವೆಯಾಗೋ ಯೋಚನೆ ಮಾಡಿರಲಿಲ್ಲ. ಆದರೆ ಆವತ್ತೊಂದು ದಿನ ಆಫೀಸ್​ನಿಂದ ಮನೆಗೆ ಬಂದ ಆಕೆ ಅಡುಗೆ ಮನೆಯಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಳು. ರೂಮಿನಲ್ಲಿ ಬೆಂಕಿ ಹೊತ್ತಿತ್ತು. ಎಲ್ಲರೂ ಆಕೆ ಉಸಿರುಗಟ್ಟಿ ಸತ್ತಳು ಅಂತಲೇ ಅಂದುಕೊಂಡಿದ್ರು. ಪೊಲೀಸರೂ ಕೂಡ ಹಾಗೇ ತಿಳಿದಿದ್ರು. ಆದ್ರೆ ಆಕೆ ಸತ್ತು 5 ದಿನಗಳ ನಂತರ ಅವಳ ಸಾವಿಗೆ ಟ್ವಿಸ್ಟ್​ ಸಿಕ್ಕಿತ್ತು. ಆಕೆ ಆಕಸ್ಮಿಕವಾಗಿ ಸಾಯಲಿಲ್ಲ ಬದಲಿಗೆ ಮ*ರ್ಡರ್​ ಅನ್ನೋದು ಗೊತ್ತಾಗಿತ್ತು. ಅಷ್ಟಕ್ಕೂ ಆಕೆಯನ್ನ ಮ*ರ್ಡರ್​​ ಮಾಡಿದ್ಯಾರು? ಕೊಲೆ ಮಾಡಿ ಆಕಸ್ಮಿಕ ಅಂತ ಬಿಂಬಿಸಿದ್ದೇಕೆ? ಸುಳಿವೇ ಇಲ್ಲದಿದ್ದ ಡೆಡ್ಲಿ ಮರ್ಡರ್​​ ಹಿಂದಿನ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಆತನಿಗಿನ್ನು 18 ವರ್ಷ. ಪಿಯು ಓದುತ್ತಿದ್ದಾನೆ. ಇಂಥವನಿಗೆ ಪಕ್ಕದ ಮನೆಯ ಶರ್ಮಿಳಾ ಮೇಲೆ ಮನಸ್ಸಾಗಿಬಿಡುತ್ತೆ. ಶರ್ಮಿಳಾಗೂ ಈತನಿಗೂ 16 ವರ್ಷದ ವ್ಯತ್ಯಾಸ. ಓದಲು ಟೆರೇಸ್​​ ಮೇಲೆ ಬಂದಾಗ ಹಾಯ್​ ಬಾಯ್​ ಅಂದುಕೊಂಡು ಆಕೆಯ ಪರಿಚಯ ಮಾಡಿಕೊಂಡ. ಆಕೆ ಕೂಡ ಚಿಕ್ಕಹುಡುಗ ಅಂತ ಮಾತನ್ನಾಡಿಸುತ್ತಿದ್ದಳು. ಆದ್ರೆ ಆವತ್ತೊಂದು ದಿನ ಶರ್ಮಿಳಾ ಊರಿನಿಂದ ಬಂದು ಮನೆ ಲಾಕ್​ ಮಾಡಿಕೊಂಡು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ,ಈ ಕಿರಾತಕ ನಿಧಾನವಾಗಿ ಆಕೆಯ ಮನೆಯ ಪ್ಯಾಸೇಜ್​​​ ಮೇಲೆ ಎಗರಿ. ಕಿಟಕಿ ಮೂಲಕ ಒಳಗೆ ಹೋಗಿ ಶರ್ಮಿಳಾ ಮೇಲೆ ಎರಗಿ ಬೀಳ್ತಾನೆ. ಇನ್ನೂ ಆ ಹೆಣ್ಣುಮಗಳು ಈತನಿಂದ ಎಸ್ಕೇಪ್​ ಆಗಲು ಪ್ರಯತ್ನಿಸುತ್ತಾಳೆ. ಈ ಟೈಂನಲ್ಲಿ ಆಕೆ ಕೆಳಗೆ ಬಿದ್ದು ಪ್ರಜ್ಞೆ ತಪ್ಪುತ್ತಾಳೆ. ಇನ್ನೂ ಅಕೆ ಎಚ್ಚರವಾದ್ರೆ ನಾನು ಸಿಕ್ಕಿಹಾಕಿಕೊಳ್ತೀನಿ ಅಂತ ಆಕೆಯನ್ನ ಕೊಂದು ರೂಮಿಗೆ ಬೆಂಕಿ ಇಟ್ಟು ಎಸ್ಕೇಪ್​​ ಆಗಿಬಿಡ್ತಾನೆ.

ಟೆಕ್ಕಿ ಮೇಲಿನ ಮೋಹಕ್ಕೆ ಬಿದ್ದ ಕರ್ನಾಲ್​​ ಆಕೆ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಇನ್ನೂ ಬಾಳಿ ಬದುಕಬೇಕಿದ್ದ ಶರ್ಮಿಳಾ ದುರಂತ ಅಂತ್ಯಕಂಡಿದ್ದಾಳೆ. ಇನ್ನೂ ಈತ ಕೂಡ ತನ್ನ ಭವಿಷ್ಯವನ್ನ ತಾನೇ ಹಾಳು ಮಾಡಿಕೊಂಡಿದ್ದಾನೆ.

 

25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
Read more