ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್; ರಾಜ್ಯ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್; ರಾಜ್ಯ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

Published : May 20, 2022, 11:21 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯನ್ನು 8 ವಾರಗಳಲ್ಲಿ ಆರಂಭಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. 

ಬೆಂಗಳೂರು(ಮೇ.20): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕೊನೆಗೂ ಕಾಲಮಿತಿ ನಿಗದಿಯಾಗಿದೆ. ಎರಡು ತಿಂಗಳೊಳಗೆ (8 ವಾರ) ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಈ ಸಂಬಂಧ ವಾರ್ಡ್​ ಪುನರ್​ವಿಂಗಡನೆ ಮತ್ತು ಮೀಸಲಾತಿಯನ್ನೂ ಕಾಲಮಿತಿಯೊಳಗೆ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಲಾಗಿದೆ. ಇನ್ನು 8 ವಾರಗಳ ಒಳಗೆ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡುವ ಮೂಲಕ ಹಿಂದಿನ ಎಲ್ಲ ಗೊಂದಲಗಳನ್ನೂ ಪರಿಹರಿಸಿದೆ.

ಸದ್ಯ 198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ ಪರಿಣಾಮ ಚುನಾವಣೆ ವಿಳಂಬವಾಗಿತ್ತು.ಈ ನಡುವೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್‌ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್‌ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ 2020ರ ಡಿಸೆಂಬರ್‌ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಇದೀಗ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರದೊಳಗಾಗಿ ನಡೆಸುವಂತೆ ತಿಳಿಸಿದೆ. ಅಲ್ಲದೆ ವಾರ್ಡ್‌ ಪುನರ್‌ವಿಂಗಡನೆಯನ್ನು ಎಂಟು ವಾರದೊಳಗಾಗಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

24:12ಅವಳು ಚೆಂದುಳ್ಳಿ ಚೆಲುವೆ, ಇವನು ಪುಡಿ ರೌಡಿ! ಅವಳನ್ನ ಕೊಲ್ಲಲು ವಾಟ್ಸಪ್​ ಗ್ರೂಪನ್ನೇ ಕ್ರಿಯೇಟ್​​ ಮಾಡಿದ್ದ!
07:32ಬೆಂಗಳೂರಿನಲ್ಲಿ ಅರ್ಚಕರ ಕುಟುಂಬದ ಮೇಲೆ ಸುಳ್ಳು ದೌರ್ಜನ್ಯ ದೂರು: ಕೇರಳದಲ್ಲಿ 2 ಕೋಟಿ ಡಿಮ್ಯಾಂಡ್!
23:39ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!
24:37 ಗೆಳಯನ ಹೆಂಡತಿಯನ್ನೇ ಪಟಾಯಿಸಿಬಿಟ್ಟಿದ್ದ, ಅವನ ಸಾವಿಗೆ ಕಾರಣ ಅವನ ಹೆಂಡತಿ!
20:31ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ
22:42 ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್
24:07ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!
02:46ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಇಬ್ಬರ ಸ್ಥಿತಿ ಗಂಭೀರ; ಮನೆ ಕೆಡವಲು ಆದೇಶ ಕೊಟ್ಟ ಸರ್ಕಾರ!
03:26ಪೊಲೀಸ್‌ ಠಾಣೆಯಲ್ಲೇ ಕುಚ್‌ಕುಚ್‌: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!
43:12ಮುನಿರತ್ನ ತಲೆಗೆ ಮೊಟ್ಟೆ ಏಟು: ಕೊಲೆ ಸಂಚು ಎಂದ ಬಿಜೆಪಿ ಶಾಸಕ
Read more