ನೇಕಾರರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್

ನೇಕಾರರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್

Suvarna News   | Asianet News
Published : Apr 24, 2020, 08:33 AM ISTUpdated : Apr 24, 2020, 09:18 AM IST

ಕರೋನಾ ವೈರಸ್‌ ನೇಕಾರರಿಗೆ ಬಲವಾದ ಪೆಟ್ಟು ನೀಡಿದೆ. ಬೆಳಗಾವಿಯ ಲಕ್ಷಾಂತರ ಮಂದಿಯ ಬದುಕು ಅತಂತ್ರವಾಗಿ ಪರಿಣಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಳಗಾವಿ(ಏ.24): ಕೊರೋನಾ ವೈರಸ್ ಬಡವ-ಬಲ್ಲಿದ ಎನ್ನದೇ ಎಲ್ಲರ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ಇದಕ್ಕೆ ಬಣ್ಣ ಬಣ್ಣದ ಸೀರೆಗಳನ್ನು ನೇಯುತ್ತಿದ್ದ ನೇಕಾರರು ಹೊರತಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ನೇಕಾರರು ಹಾಗೂ ಕಾರ್ಮಿಕರ ಬದುಕು ಅತಂತ್ರವಾಗಿ ಪರಿಣಮಿಸಿದೆ.

ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿ ತೀವ್ರ ಕಷ್ಟಕ್ಕೆ ಸಿಲುಕಿದ್ದ ನೇಕಾರ ಉದ್ಯಮಕ್ಕೆ ಇದೀಗ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ನೇಕಾರರ ಸಮಸ್ಯೆ ಆಲಿಸಬೇಕಾಗಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ್ ನಾಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ 22 ಸಾವಿರ ವಿದ್ಯುತ್‌ ಮಗ್ಗಗಳು, 3500 ಕೈಮಗ್ಗಗಳು ಬಂದ್ ಆಗಿದ್ದು, ಗೋದಾಮಿನಲ್ಲಿಯೇ ಸಾವಿರಾರು ಸೀರೆಗಳು ರಾಶಿ ರಾಶಿಯಾಗಿ ಬಿದ್ದಿವೆ. ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ಸೀರೆ ಬ್ಯಾಂಕ್ ತೆರೆಯುವಂತೆ ಸರ್ಕಾರಕ್ಕೆ ನೇಕಾರರು ಆಗ್ರಹಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
23:13ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!
05:13ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರೂರಲ್ಲಿ ಮತ್ತೊಬ್ಬ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ!
17:56ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ
19:46ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!
02:39ಬೆಳಗಾವಿ: ಹೊಲದಲ್ಲಿ ಕೆಲಸ ಮಾಡ್ತಿದ್ದ ರೈತನ ಅಪಹರಿಸಿ ಹಲ್ಲೆ!
02:58ಬೆಳಗಾವಿ: ಠಾಣೆಯಲ್ಲಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಪೊಲೀಸ್ ಪೇದೆ
04:45ಜಮ್ಮು ಕಾಶ್ಮೀರ ಸೇನಾ ವಾಹನ ದುರಂತದಲ್ಲಿ 5 ಯೋಧರ ಹುತಾತ್ಮ; ಈ ಪೈಕಿ ಮೂವರು ಕರ್ನಾಟಕದ ಯೋಧರು!
44:56ಕಾಂಗ್ರೆಸ್-BJP ವಾಕ್ಸಮರ: ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ?
28:41ಅಶ್ಲೀಲ ಸಂಘರ್ಷ: ಹೆಬ್ಬಾಳ್ಕರ್‌ಗೊಂದು ಕಾನೂನು..? ಸಿಟಿ ರವಿಗೊಂದು ಕಾನೂನಾ..?