Karwar: ಗಮನ ಸೆಳೆಯುತ್ತಿವೆ ಬಾಲಕ ತಯಾರಿಸಿದ ವಾಹನ ಮಾಡೆಲ್‌ಗಳು, ಇರಲಿ ಶಹಬ್ಭಾಸ್..!

Karwar: ಗಮನ ಸೆಳೆಯುತ್ತಿವೆ ಬಾಲಕ ತಯಾರಿಸಿದ ವಾಹನ ಮಾಡೆಲ್‌ಗಳು, ಇರಲಿ ಶಹಬ್ಭಾಸ್..!

Published : Mar 02, 2022, 03:51 PM IST

- ಬಾಲಕನ ಕೈಯಲ್ಲರಳಿದ ವಿವಿಧ ವಾಹನಗಳ ಮಾಡೆಲ್

- ನಿಜವಾದ ವಾಹನಗಳಂತೆಯೇ ಕಾಣುವ ಫೋಮ್‌ ಶೀಟ್ ಆಟಿಕೆಗಳು 

- ಆಟಿಕೆ ತಯಾರಿಸುವ 9ನೇ ತರಗತಿ ವಿದ್ಯಾರ್ಥಿ ಯಾದವ್‌ ಕೃಷ್ಣ

- ಆಕರ್ಷಕ ಕ್ರಾಫ್ಟ್ ಕಲಿಕೆಯನ್ನು ರೂಢಿಸಿಕೊಂಡಿರುವ ಬಾಲಕ

ಕಾರವಾರ (ಮಾ. 02): ಕೋವಿಡ್‌ನಿಂದಾಗಿ ಕಳೆದೆರಡು ವರ್ಷಗಳಿಂದ ಸರಿಯಾಗಿ ತರಗತಿಗಳು ನಡೆಯದೇ, ಆನ್‌ಲೈನ್ ತರಗತಿಗಳಿಂದಾಗಿ ಮಕ್ಕಳು ದಡ್ಡರಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇಲ್ಲೊಬ್ಬ ಬಾಲಕ ಶಾಲೆಗೆ ರಜೆ ನೀಡಿದ್ದ ಸಂದರ್ಭದಲ್ಲಿ ಫೋಮ್‌ಶೀಟ್‌ಗಳನ್ನು ಬಳಸಿ ಬಗೆ ಬಗೆಯ ಕ್ರಾಫ್ಟ್‌ಗಳನ್ನು ತಯಾರಿಸಿ ಬಿಡುವಿನ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದಾನೆ. ಈ ಹುಡುಗನ ಕೈಯಲ್ಲರಳಿದ ವಾಹನಗಳ ಮಾಡೆಲ್‌ಗಳು, ಇದೀಗ ಎಲ್ಲರ ಗಮನ ಸೆಳೆಯುತ್ತಿವೆ. 

 ಕಾರವಾರ ನಗರದ ಗಿಡ್ಡಾ ರೋಡ್ ನಿವಾಸಿ ಯಾದವ್ ಕೃಷ್ಣ. ನಗರದ ಸೈಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಯಾದವ್‌ ಫೋಮ್ ಶೀಟ್ ಬಳಸಿ ಬಗೆ ಬಗೆಯ ಕ್ರಾಫ್ಟ್‌ಗಳನ್ನ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದು, ಇದೀಗ ಈತನ ಕೈಯಲ್ಲಿ ಸಿದ್ಧವಾಗಿರುವ ಆಟಿಕೆ ಜೀಪ್, ಕಾರು ಹಾಗೂ ಬಸ್ಸುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಬಾಲಕ ಯಾದವ್‌ನಿಗೆ ಲಾಕ್‌ಡೌನ್ ಅವಧಿಯಲ್ಲಿ ಕೇವಲ ಆನ್‌ಲೈನ್ ತರಗತಿಗಳು ನಡೆಯುತ್ತಿದುದರಿಂದ ಯೂಟ್ಯೂಬ್ ಚಾನೆಲ್‌ವೊಂದನ್ನು ಪ್ರಾರಂಭಿಸುವ ಆಸೆಯಾಗಿತ್ತು. ಅದಕ್ಕಾಗಿ ಫೋಮ್‌ಶೀಟ್‌ಗಳನ್ನ ತರಿಸಿಕೊಂಡು ಮೊದಲಿಗೆ ಡ್ಯಾಮ್, ಜೆಸಿಬಿಗಳನ್ನು ತಯಾರಿಸಿ ಅದರ ಮೇಕಿಂಗ್ ವೀಡಿಯೋಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ. ನಂತರ ಇನ್ನಷ್ಟು ಮಾಡೆಲ್‌ಗಳನ್ನು ತಯಾರು ಮಾಡುವ ಹವ್ಯಾಸ ರೂಢಿಯಾಗಿದ್ದು, ಸೀಬರ್ಡ್ ಟೂರಿಸ್ಟ್‌ ಬಸ್, ಮಹೀಂದ್ರ ಥಾರ್ ಜೀಪ್, ಪಜೆರೋ ಕಾರನ್ನು ಫೋಮ್‌ಶೀಟ್‌ನಲ್ಲೇ ಸಿದ್ಧಪಡಿಸಿದ್ದಾನೆ. ಅಲ್ಲದೇ, ಹೊರಗಿನಂತೆ ಒಳಭಾಗದಿಂದಲೂ ನಿಜವಾದ ಬಸ್, ಜೀಪ್‌ಗಳಲ್ಲಿ ಇರುವಂತೆ ಸೀಟ್, ಲೈಟಿಂಗ್ ವ್ಯವಸ್ಥೆ ಅಳವಡಿಸಿದ್ದಾನೆ. ಅದರಲ್ಲೂ ಸೀಬರ್ಡ್ ಟೂರಿಸ್ಟ್‌ನ ಬಸ್ ಅಂತೂ ಅಸಲಿಯಂತೆಯೇ ಭಾಸವಾಗುತ್ತಿದ್ದು ಸಾಕಷ್ಟು ಆಕರ್ಷಕವಾಗಿ ರೂಪುಗೊಂಡಿವೆ. 

ಇನ್ನು ಯಾದವ್ ತಯಾರಿಸಿರುವ ಸೀಬರ್ಡ್ ಟೂರಿಸ್ಟ್ ಬಸ್ ಬರೋಬ್ಬರಿ 100 ಸೆಂ.ಮೀ. ಉದ್ದವಿದ್ದು, 25 ಸೆಂಟಿ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ಬಸ್ ತಯಾರಿಸಲು ಸುಮಾರು ಎರಡು ತಿಂಗಳ ಕಾಲ ಶ್ರಮವಹಿಸಿದ್ದು, ಬಸ್ಸ್ ಹೊರಗಿನಿಂದ ಮಾತ್ರವಲ್ಲದೇ ಒಳಗಡೆಯಿಂದಲೂ ನೈಜವಾಗಿ ಮೂಡಿಬರಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಗಮನಹರಿಸಿ ನಿರ್ಮಿಸಲಾಗಿದೆ. ಹೀಗೆ ಖಾಲಿ ಇದ್ದ ಸಮಯದಲ್ಲಿ ಆರಂಭಿಸಿದ್ದ ಕ್ರಾಫ್ಟ್ ಕೆಲಸ ಇದೀಗ ನೆಚ್ಚಿನ ಹವ್ಯಾಸವಾಗಿದೆ ಅನ್ನೋದು ಬಾಲಕ ಯಾದವ್ ಅಭಿಪ್ರಾಯ. ಇನ್ನು ಯಾದವ್ ಕೃಷ್ಣ ಮೂಲತಃ ಕೇರಳದವರಾದ ಮಂಜು ಹಾಗೂ ವಿಮಲ್ ದಂಪತಿಯ ಪುತ್ರನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಕಾರವಾರಕ್ಕೆ ಬಂದ ವಿಮಲ್ ಇಲ್ಲಿಯೇ ನೆಲೆಸಿದ್ದಾರೆ. ಯಾದವ್‌ನಿಗೂ ಕಾರವಾರದ ಶಾಲೆಯಲ್ಲೇ ಓದಿಸುತ್ತಿರುವ ಈ ದಂಪತಿ ಮಗನ ಈ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 
 

04:52ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ
06:42ಒಬೆನ್ ರೋರ್ ಇಝಡ್: ಹೊಸ ಇವಿ ಬೈಕ್ ಬಿಡುಗಡೆ
02:41Raj B Shetty: ಇವಿ ಎಕ್ಸ್‌ಫೋನಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿಪಟ್ಟ ಟೋಬಿ!
16:54ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!
04:48550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!
02:23Auto Expo 2023 ಭಾರತದಲ್ಲಿ ಐಷಾರಾಮಿ ಲೆಕ್ಸಸ್ RX SUV ಕಾರಿನ ಬುಕಿಂಗ್ ಆರಂಭ!
03:06Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!
05:40ಕೋಟ್ಯಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಖಾಸಗಿಯವರಿಗೆ ಸೇಲ್? BBMP ಅಂಧಾ ದರ್ಬಾರ್...
07:38AutoCross Rally ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸಿದ ಆಟೋ ಕ್ರಾಸ್ ರ‍್ಯಾಲಿ!
16:33Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
Read more