ದ್ವಿಚಕ್ರ ಸವಾರರಿಗೆ ಶಾಕ್; ಪೊಲೀಸರಿಂದ ಹಾಫ್ ಹೆಲ್ಮೆಟ್ ಆಪರೇಷನ್!

Nov 10, 2019, 9:28 PM IST

ಹಾಸನ(ನ.10): ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮಗಳು ಕಟ್ಟು ನಿಟ್ಟಾಗಿವೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತೆ. ಹೆಲ್ಮೆಟ್ ಕಡ್ಡಾಯ ಎಂದು ಸಿಕ್ಕ ಸಿಕ್ಕ ಹೆಲ್ಮೆಟ್ ಧರಿಸಿದರೆ ದಂಡ ತಪ್ಪಿದ್ದಲ್ಲ. ಹೀಗೆ ನಿಯಮ ಬಾಹಿರ ಹಾಫ್(ಅರ್ಧ) ಹೆಲ್ಮೆಟ್ ಧರಿಸಿದವರ ವಿರುದ್ಧ ಪೊಲೀಸರು ಆಪರೇಶ್ ಆರಂಭಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್‌ ಧರಿಸದ 43,600 ಬೈಕ್ ಸವಾರರು ಸಾವು!

ಹಾಸನದ ಎನ್ ಆರ್ ವೃತ್ತದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ಹಾಫ್ ಹೆಲ್ಮೆಟ್ ಧರಿಸಿದವರನ್ನು ನಿಲ್ಲಿಸಿದ್ದಾರೆ ಹಾಫ್ ಹೆಲ್ಮೆಟ್ ಕಿತ್ತು ರಸ್ತೆಯಲ್ಲಿ ಒಡೆದು ಹಾಕಿದ್ದಾರೆ. ಕಾಟಾಚಾರಕ್ಕೆ ಹೆಲ್ಮೆಟ್ ಧರಿಸಿ, ದಂಡದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸವಾರರು ತಮ್ಮ ಕಣ್ಣ ಮುಂದೆಯೇ ಹೆಲ್ಮೆಟ್ ಚೂರು ಚೂರಾಗುವುದನ್ನು ನೋಡಬೇಕಾಯಿತು.

ಇದನ್ನೂ ಓದಿ: ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!.

ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು. ನೂರಾರು ಹಾಫ್ ಹೆಲ್ಮೆಟ್ ಒಡೆದು ಹಾಕಿದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸುರಕ್ಷತೆಗಾಗಿ ಫುಲ್ ಹೆಲ್ಮೆಟ್ ಧರಿಸಲು ಮನವಿ ಮಾಡಿದ್ದಾರೆ.