ಬೈಕ್ ವೀಲ್ಹಿಂಗ್ ಮಾಡುವುದು ಅಪಾಯಕಾರಿ ಮಾತ್ರವಲ್ಲ ಅಪರಾಧ ಕೂಡ ಹೌದು. ಬೆಂಗಳೂರಿಲ್ಲಿ ಬೈಕ್ ವೀಲ್ಹಿಂಗ್ ಮಾಡೋ ಪುಂಡರ ಹಾವಳಿ ಹೆಚ್ಚಾಗಿದೆ. ವೀಲ್ಹಿಂಗ್ ಮಾಡದಂತೆ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರು, ಖಯಾಲಿ ಮುಂದುವರಿಸಿದ್ದ 12 ಮಂದಿಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದವರನ್ನು ಚೇಸ್ ಮಾಡಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.