ತುಳಸಿ ಗಿಡವನ್ನು ದೇವರೆಂದು ಪೂಜಿಸುವ ಪರಂಪರೆ ನಮ್ಮದು. ಪ್ರತೀ ದಿನ ತುಳಸಿ ಪೂಜೆ ಮಾಡುವುದೂ ಇದೆ. ಆದರೆ ತುಳಸಿ ಗಿಡ ಸರಿಯಾದ ದಿಕ್ಕಿನಲ್ಲಿದ್ದರೆ ಈ ಪೂಜೆಯಿಂದ ಮನೆಯಲ್ಲಿ ಸಂಪತ್ತಿನ ವೃದ್ಧಿಯಾಗಲಿದೆ. ಯಾವ ದಿಕ್ಕದು?
'ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:' ಈ ಮಂತ್ರವನ್ನು ನೀವೆಲ್ಲ ಕೇಳಿರಬಹುದು, ಕೆಲವರು ನಿತ್ಯ ಈ ಶ್ಲೋಕ (shloka) ಹೇಳುತ್ತಿರಬಹುದು. ಈ ಶ್ಲೋಕದ ಅರ್ಥ ತುಳಸಿ ವನ ಇರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸ ಮಾಡುತ್ತಾನೆ. ಹೀಗಾಗಿ ಮನೆಯಂಗಳಗಳಲ್ಲಿ ತುಳಸಿಯನ್ನು ನೆಟ್ಟು, ತುಳಸಿ ಕಟ್ಟೆ ಕಟ್ಟಿ, ಅದಕ್ಕೆ ನಿತ್ಯವೂ ಪೂಜಿಸುತ್ತಾರೆ. ತುಳಸಿಗೆ ಮಹಾಲಕ್ಷ್ಮಿಯ ಸ್ಥಾನವಿದೆ. ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವ-ದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದಿತು. ಆ ಸ್ಥಳಗಳಲ್ಲಿ ಅಮೃತದ ಹನಿ ತುಳಸಿ ಸಸ್ಯಗಳಾಗಿ ಬೆಳೆಯಿತು ಎಂಬ ನಂಬಿಕೆ ಇದೆ. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು. ಇಂಥಾ ತುಳಸಿಯನ್ನು ನಿಗದಿತ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಸಂಪತ್ತಿನ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ವಾಸ್ತುವೂ ಇದನ್ನೇ ಹೇಳುತ್ತದೆ.
ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖ ಮಾಡಿ ನಿಲ್ಲಬೇಕು. ಮುಖ್ಯ ದ್ವಾರದಿಂದ ಬಲಗಡೆಗೆ ಅರ್ಧ ಅಡಿ ದೂರದಲ್ಲಿ ಒಂದು ಗುರುತು ಮಾಡಿ.
ಅಲ್ಲಿಂದ ಪೂರ್ವದಿಕ್ಕಿನಲ್ಲಿ 3 ಅಡಿ ದೂರ ಬಿಟ್ಟು ತುಳಸಿ ಕಟ್ಟೆ ಮಾಡಬಹುದು. ಅಂದರೆ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿ ಕಟ್ಟೆಯಿಡಬೇಕು. ಸಿಟಿಯಲ್ಲಿ ಇರುವವರೂ ಈ ನಿಯಮಾನುಸಾರ ಕಾಂಪಾಂಡ್ ಒಳಗೆ ತುಳಸಿಗಿಡ ಹಾಕಬಹುದು.
undefined
ತುಳಸಿ ಗಿಡದ ಬಳಿ ಈ ವಸ್ತುಗಳನ್ನಿಡೋ ತಪ್ಪು ಮಾಡ್ಬೇಡಿ…
ಕೆಲವೊಮ್ಮೆ ಮನೆ ಪಶ್ಚಿಮಾಭಿಮುಖವಾಗಿರುತ್ತದೆ. ಅಥವಾ ಉತ್ತರಾಭಿಮುಖವಾಗಿರುತ್ತದೆ. ಆಗ ಮನೆಯ ಮುಖ್ಯ ದ್ವಾರದ ಎದುರು ನಿಂತು ಎಡಗಡೆಗೆ ಅರ್ಧ ಅಡಿ ದೂರದಲ್ಲಿ ಗುರುತು ಮಾಡಿ ಅಲ್ಲಿಂದ ಪಶ್ಚಿಮಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ 3 ಅಡಿ ದೂರದಲ್ಲಿ ತುಳಸಿ ಕಟ್ಟೆ ನಿರ್ಮಿಸಬಹುದು. ಆಗ ಮನೆಯ ಮುಖ್ಯದ್ವಾರದಿಂದ ವಾಯವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿ ಕಟ್ಟೆಯನ್ನು ನಿರ್ಮಿಸಿದ ಹಾಗಾಗುತ್ತದೆ. ಮನೆಯ ಫ್ಲೋರ್ ಲೆವೆಲ್‌ಗಿಂತ ಕೆಳಗೆ ತುಳಸಿ ಕಟ್ಟೆ ಇದ್ದರೆ ಉತ್ತಮ. ಇಲ್ಲವಾದಲ್ಲಿ ಸಮಾನಾಂತರವಾಗಿಯಾದರೂ ಇರಬೇಕು. ಹಾಗಿದ್ದಲ್ಲಿ ಉತ್ತಮ.
ಸಾಮಾನ್ಯವಾಗಿ ಶನಿವಾರ, ಬುಧವಾರ ಅಥವಾ ಗುರುವಾರದ ದಿನ ಬೆಳಗ್ಗಿನ ಹೊತ್ತು ಶ್ರೀ ಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು. ಕೃಷ್ಣ ತುಳಸಿ ಅಂದರೆ ಕೆಂಪು ಅಥವಾ ನಸುಗಪ್ಪು ಬಣ್ಣದ ತುಳಸಿಗಿಡ ಶ್ರೇಷ್ಠ. ಇಲ್ಲವಾದಲ್ಲಿ ಬಿಳಿ ತುಳಸಿಯೂ ಉತ್ತಮವೇ. ತುಳಸಿ ಪೂಜೆಯ ಸಂದರ್ಭದಲ್ಲಿ ಸತ್ತ್ವಗುಣವಿರುವ ಎಳ್ಳೆಣ್ಣೆಯ ಹಣತೆಗಳನ್ನು ಹಚ್ಚಿದರೆ ಒಳ್ಳೆಯದು. ಇದು ಮನೆಯಲ್ಲಿ ಕಟು ಮಾತುಗಳು ಬರದಂತೆ ತಡೆದು ಸದಾ ಶಾಂತಿ, ನೆಮ್ಮದಿ ಜೊತೆಗೆ ಪಾಸಿಟಿವ್ ವೈಬ್ಸ್ ಮೂಡುವಂತೆ ಮಾಡುತ್ತದೆ.
ನೆಮ್ಮದಿಯೇ ಇಲ್ಲವೆಂದರೆ ಈ ವಸ್ತು ತನ್ನಿ, ಪಾಸಿಟಿವ್ ವೈಬ್ಸ್ ಸೃಷ್ಟಿಯಾಗುತ್ತೆ!
ನಮ್ಮಲ್ಲಿ ತುಳಸಿಗೆ ಲಕ್ಷ್ಮಿ ದೇವತೆಯ ಸ್ಥಾನಮಾನವನ್ನು ನೀಡಲಾಗಿದೆ. ಅಂದರೆ ಸಂಪತ್ತಿನ (Prosperity) ದೇವತೆಗೆ ತುಳಸಿಯನ್ನು ಹೋಲಿಸಲಾಗಿದೆ. ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳು (Financial Crisis) ಎದುರಾದರೆ, ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪದಲ್ಲಿ ಪೂಜಿಸುವುದರಿಂದ ನಿಮಗೆ ಲಾಭವಾಗುತ್ತದೆ. ಆದರೆ ತುಳಸಿ ಗಿಡ ನಿಗದಿತ ದಿಕ್ಕಿನಲ್ಲಿರಬೇಕು. ಅದರ ಪೂಜೆ ಶಾಸ್ತ್ರ ಪ್ರಕಾರ ನಡೆಯಬೇಕು.
ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಬಯಸಿದರೆ, ಈ ಗಿಡವನ್ನು ನೆಡಲು ಉತ್ತಮ ಸಮಯವೆಂದರೆ ಕಾರ್ತಿಕ ಮಾಸ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ಮನೆಗೆ ತಂದು ನೆಟ್ಟರೆ ಲಕ್ಷ್ಮಿ ದೇವಿಯೂ ಮನೆಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಬಾಲ್ಕನಿ ಅಥವಾ ಕಿಟಕಿಯ ಮೇಲೆ ನೆಡಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ ನೀಡಿರುವ ನಿರ್ದೇಶನವನ್ನು ಗಮನಿಸಬೇಕು. ತುಳಸಿ ಗಿಡಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕು ಪೂರ್ವಜರಿಗೆ ಸೇರಿದ್ದು ಇಲ್ಲಿ ತುಳಸಿ ಗಿಡವನ್ನು ಇಟ್ಟರೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ತುಳಸಿ ಗಿಡವನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಕಸವನ್ನು ಇಡುವ ಅಥವಾ ಚಪ್ಪಲಿ ತೆಗೆಯುವ ಯಾವುದೇ ಸ್ಥಳದಲ್ಲಿ ಎಂದಿಗೂ ನೆಡಬಾರದು.
Vastu tips: ಮನೆಗೆ ಸಂಪತ್ತು ಆಕರ್ಷಿಸೋಕೆ ಈ ಅಪರೂಪದ ಸಸ್ಯ ನೆಡಿ..