Vastu Tips: ಪೂಜಾ ತಟ್ಟೆ ಯಾವ Metalದಾಗಿರಬೇಕು?

By Suvarna NewsFirst Published Jul 15, 2022, 2:29 PM IST
Highlights

ಮನೆಯ ದೇವಸ್ಥಾನಕ್ಕೆ ಹೇಗೆ ವಾಸ್ತು ಶಾಸ್ತ್ರವನ್ನು ಅನುಸರಿಸಬೇಕೋ ಅದೇ ರೀತಿ ಪೂಜೆಯ ತಟ್ಟೆಗೂ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ. ಪೂಜಾ ತಟ್ಟೆ ವಿಷಯದಲ್ಲಿ ಈ ನಿಯಮಗಳನ್ನು ಪಾಲಿಸಿ..

ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ವಾಸ್ತು ನಿಯಮಗಳ ಪ್ರಕಾರ ಇರಿಸಿದರೆ, ಮನೆಯಲ್ಲಿ ವಾಸಿಸುವವರಿಗೆ ಕಲ್ಯಾಣವಾಗುತ್ತದೆ. ಮನೆಯ ವಾಸ್ತು, ಅದರಲ್ಲೂ ಪೂಜಾ ಕೋಣೆಯ ವಾಸ್ತುವಿನ ವಿಷಯಗಳನ್ನು ಆಗಾಗ ಕೇಳುತ್ತಲೇ ಇರುತ್ತೀರಿ. ಆದಷ್ಟು ಅನುಸರಿಸಲು ನೋಡುತ್ತಲೇ ಇರುತ್ತೀರಿ. ಕೇವಲ ಪೂಜಾ ಕೋಣೆಯ ವಾಸ್ತು ಸರಿಯಿದ್ದರೆ ಸಾಲದು, ಅಲ್ಲಿ ಬಳಸುವ ವಸ್ತುಗಳ ಮೇಲೂ ಗಮನ ಹರಿಸಬೇಕು. ಏಕೆಂದರೆ, ಪೂಜಾ ಕೋಣೆಯು ವ್ಯಕ್ತಿಯು ತನ್ನ ದಿನವನ್ನು ಪ್ರಾರಂಭಿಸುವ ಸ್ಥಳ. ಮನೆಯ ಶಾಂತಿ, ಸೌಹಾರ್ದತೆ, ಸುಖ, ಸಮೃದ್ಧಿಗಾಗಿ ಪ್ರಾರ್ಥಿಸುವ ಸ್ಥಳ. 

ಈ ಪೂಜಾ ಸ್ಥಳದಲ್ಲಿ ಇಡುವುದೆಲ್ಲವೂ ವಾಸ್ತು ನಿಯಮದ ಪ್ರಕಾರವೇ ಇದ್ದರೆ ಮನೆಯಲ್ಲಿ ನೆಮ್ಮದಿ. ಮತ್ತೊಂದೆಡೆ, ದೇವಸ್ಥಾನದಲ್ಲಿ ಯಾವುದಾದರೂ ವಾಸ್ತು ಪ್ರಕಾರವಾಗಿಲ್ಲದಿದ್ದರೆ, ಅದು ಮನೆಯ ವಾಸ್ತು ದೋಷಕ್ಕೆ ಕಾರಣವಾಗಬಹುದು. ಅಂತೆಯೇ ಇಂದು ಪೂಜಾ ಕೋಣೆಯಲ್ಲಿ ಬಳಸುವ ಪೂಜಾ ತಟ್ಟೆಯ ವಾಸ್ತು ನಿಯಮಗಳನ್ನು ನೋಡೋಣ. 

Latest Videos

ಪೂಜೆಯ ತಟ್ಟೆ ಎಂದರೇನು?
ಪೂಜಾ ಥಾಲಿಯು ದೇವರ ಕೋಣೆಯಲ್ಲಿ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಳ್ಳುವ ತಟ್ಟೆಯಾಗಿದೆ. ಆರತಿ ಮಾಡಲು ಬಳಸುವ ತಟ್ಟೆಯೂ ಹೌದು. ಈ ತಟ್ಟೆಯನ್ನು ಎಲ್ಲ ರೀತಿಯ ಪೂಜೆ ಮತ್ತು ಹಬ್ಬಗಳಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ನಾವು ಮನೆಯ ಇತರ ಸ್ಥಳಗಳಲ್ಲಿ ತಿನ್ನಲು ಬಳಸುವ ತಟ್ಟೆಯನ್ನು ಪೂಜೆಯಲ್ಲಿ ಬಳಸುವುದಿಲ್ಲ. ವಾಸ್ತು ಪ್ರಕಾರ, ಪೂಜೆಯ ತಟ್ಟೆಯು ನಿರ್ದಿಷ್ಟ ಲೋಹದ್ದಾಗಿದ್ದರೆ, ಅದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ ಮತ್ತು ನೀವು ಅದನ್ನು ಮನೆಯ ದೇವಸ್ಥಾನದಲ್ಲಿ ಇರಿಸಿದಾಗ, ಸರಿಯಾದ ದಿಕ್ಕನ್ನು ಕೂಡಾ ನೋಡಿಕೊಳ್ಳಬೇಕು.

ಜಾತಕದಲ್ಲಿ ಶುಕ್ರನ ಬಲವಿದ್ದಾಗ ಈ ವೃತ್ತಿಗಳಲ್ಲಿ ಹಣ, ಕೀರ್ತಿ ಸಿಗೋದು ಪಕ್ಕಾ!

ಪೂಜೆಯ ತಟ್ಟೆ ಯಾವ ಲೋಹವಾಗಿರಬೇಕು?
ಪೂಜೆಯ ತಟ್ಟೆಯು ಸಾಮಾನ್ಯವಾಗಿ ಕೆಲವು ಲೋಹಗಳದ್ದಾಗಿರಬೇಕು. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನ, ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ತಟ್ಟೆ ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಚಿನ್ನ ಮತ್ತು ಹಿತ್ತಾಳೆ, ಗುರು(Planet Jupiter) ಗ್ರಹದ ಲೋಹಗಳಾಗಿದ್ದು, ಶಕ್ತಿಯನ್ನು ನೀಡುತ್ತದೆ ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿಯ ಅಂಶಗಳಾಗಿವೆ. ನೀವು ಪೂಜೆಯಲ್ಲಿ ಸ್ಟೀಲ್ ತಟ್ಟೆಯನ್ನು ಕೂಡಾ ಬಳಸಬಹುದು. ಆದರೆ ಕೆಲವು ಲೋಹಗಳು ಸುಲಭವಾಗಿ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಧನಾತ್ಮಕ ಅಲೆಗಳಿಗೆ(Positive vibes) ಪ್ರತಿರಕ್ಷಿತವಾಗಿರುತ್ತವೆ. ಈ ಕಾರಣದಿಂದಾಗಿ, ಭಕ್ತನ ಏಕಾಗ್ರತೆಗೆ ಅಡ್ಡಿಯಾಗುತ್ತದೆ, ಇದು ಸಹಜವಾಗಿ ಸ್ವೀಕಾರಾರ್ಹವಲ್ಲ. ಹೀಗಾಗಿ,  ಪೂಜೆಯಲ್ಲಿ ಯಾವತ್ತೂ ಕಬ್ಬಿಣ(Iron) ಅಥವಾ ಅಲ್ಯೂಮಿನಿಯಂ ತಟ್ಟೆಯನ್ನು ಬಳಸಬೇಡಿ.

ನಾವು ಅಲ್ಯೂಮಿನಿಯಂ ಅನ್ನು ಉಜ್ಜಿದಾಗ, ಅದು ಕಪ್ಪು ಪುಡಿಯಂತಹ ವಸ್ತುವನ್ನು ನೀಡುತ್ತದೆ. ಈ ಪುಡಿಯನ್ನು ಯಾವುದೇ ಪೂಜೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಲೋಹವನ್ನು ಪೂಜೆಯ ಸಮಯದಲ್ಲಿ ಬಳಸಬಾರದು.  ಇನ್ನು ಕಬ್ಬಿಣ ತುಕ್ಕು ಹಿಡಿಯುತ್ತದೆ.

ಕರ್ಕ ಸಂಕ್ರಾಂತಿಯಂದು ಈ ಸೂರ್ಯ ಮಂತ್ರ ಪಠಣ ಮಾಡಿದ್ರೆ ಕಷ್ಟಗಳೆಲ್ಲ ಮಾಯ!

ಪೂಜೆಯ ತಟ್ಟೆಯನ್ನು ಎಲ್ಲಿಡಬೇಕು?
ವಾಸ್ತು ಪ್ರಕಾರ, ಪೂಜಾ ಕೋಣೆಯಲ್ಲಿ ತಟ್ಟೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಇರಿಸಲಾಗುತ್ತದೆ. ದೇವರ ಕೋಣೆಯು ಮನೆಯ ಈಶಾನ್ಯ ದಿಕ್ಕಿನಲ್ಲಿ(North East direction) ಇದ್ದಾಗ ದೇವಸ್ಥಾನದ ಉತ್ತರ ಭಾಗದಲ್ಲಿ ಪೂಜೆಯ ತಟ್ಟೆಯನ್ನು ಇಡಬೇಕು. ಪೂಜೆಯ ತಟ್ಟೆಯನ್ನು ಯಾವಾಗಲೂ ದೇವರ ಕೋಣೆಯಲ್ಲಿಯೇ ಇಡಬೇಕು. ಮತ್ತು ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ವಾಸ್ತು ಪ್ರಕಾರ, ಕೊಳಕು ತಟ್ಟೆಯಲ್ಲಿ ಪೂಜೆ ಮಾಡಬಾರದು ಮತ್ತು ಕೊಳಕು ತಟ್ಟೆಯಲ್ಲಿ ದೇವರಿಗೆ ಆಹಾರವನ್ನು ನೀಡಬಾರದು. ಮನೆಯ ಯಾವುದೇ ದಕ್ಷಿಣ ಮೂಲೆಯಲ್ಲಿ ಪೂಜೆಯ ತಟ್ಟೆಯನ್ನು ಇಡಬೇಡಿ. ಹಾಗೆ ಮಾಡುವುದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!