ಹೊಸ ಮನೆಯ ಖರೀದಿಗೆ ಯೋಜಿಸುತ್ತಿದ್ದೀರಾ? ಫ್ಲ್ಯಾಟ್ ಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ? ಯಾವುದೇ ಫ್ಲ್ಯಾಟನ್ನು ಅಂತಿಮಗೊಳಿಸುವ ಮೊದಲು ನೀವು ನೋಡಬೇಕಾದ 8 ವಾಸ್ತು ನಿಯಮಗಳು ಇಲ್ಲಿವೆ.
ಈಗಿನ ಕಾಲದಲ್ಲಿ, ಅದರಲ್ಲೂ ಬೆಂಗಳೂರಿನಂಥ ಮಹಾನಗರದಲ್ಲಿ ಮನೆಯನ್ನು ಮೊದಲಿಂದ ನಿರ್ಮಿಸುವುದು ದೊಡ್ಡ ಸವಾಲೇ ಸರಿ. ಸಂಬಳ ಎಣಿಸುವವರು ನಿವೇಶನ ಖರೀದಿಸುವಾಗಲೇ ಸುಸ್ತು ಬಡಿದು ಹೋಗಿರುತ್ತಾರೆ. ಇನ್ನು ಮನೆ ಕಟ್ಟೋದು ಸುಲಭವಲ್ಲ. ಅಷ್ಟು ಹಣ, ಸಮಯ ಎರಡೂ ಹೊಂದಿಸುವುದು ಸಾಮಾನ್ಯರಿಗೆ ಎಟುಕುವ ಕನಸಲ್ಲ. ಅಂಥವರೆಲ್ಲ ಕಾಣಬಹುದಾದ ಕನಸೆಂದರೆ ಅದು ಫ್ಲ್ಯಾಟ್. ಬಿಡುವಿಲ್ಲದ ವೇಳಾಪಟ್ಟಿಯನ್ನು ಮತ್ತು ಬಜೆಟ್ ಅನ್ನು ನಿಭಾಯಿಸಲು ಕಟ್ಟಿ ಮುಗಿದ ಫ್ಲಾಟ್‌ಗಳನ್ನು ಕೊಳ್ಳುವುದೇ ಜಾಣತನ. ಆದರೆ, ಈ ಫ್ಲ್ಯಾಟ್ ಖರೀದಿಸುವ ಮುನ್ನ ಕೂಡಾ ಕೆಲವೊಂದು ವಾಸ್ತು ವಿಷಯಗಳನ್ನು ಗಮನಿಸಬೇಕು. ಅದು ಜೀವನಪರ್ಯಂತ ಇರಲು ಖರೀದಿಸುವ ಮನೆಯಾದ್ದರಿಂದ ಅಲ್ಲಿ ಪಂಚಭೂತ ತತ್ವಗಳನ್ನಾಧರಿಸಿದ ವಾಸ್ತು ನಿಯಮಗಳನ್ನು ಪರಿಗಣಿಸುವುದು ಮುಖ್ಯವಾಗುತ್ತದೆ. ಹೀಗೆ ಫ್ಲ್ಯಾಟ್ ಖರೀದಿಗೂ ಮುನ್ನ ನೀವು 8 ವಿಷಯಗಳ ಬಗ್ಗೆ ಗಮನ ಹರಿಸಬೇಕು.
1. ಪ್ರವೇಶ(entrance)
ಫ್ಲಾಟ್‌ನ ಪ್ರವೇಶಕ್ಕೆ ಪೂರ್ವ ಮತ್ತು ಈಶಾನ್ಯ ಭಾಗವು ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಂಥ ದಿಕ್ಕುಗಳಲ್ಲಿ ಪ್ರವೇಶದ್ವಾರವು ಸಕಾರಾತ್ಮಕತೆ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ. ಉತ್ತರವೂ ಪರವಾಗಿಲ್ಲ. ಆದರೆ, ಫ್ಲಾಟ್‌ನ ಪ್ರವೇಶಕ್ಕೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.
undefined
2. ಕಾಮನ್ ವಾಲ್ ಅಪಾರ್ಟ್‌ಮೆಂಟ್
ವಾಸ್ತು ಶಾಸ್ತ್ರದ ಪ್ರಕಾರ, ನೀವು ಖರೀದಿಸಲು ಬಯಸುವ ಮತ್ತು ನೆರೆಯ ಫ್ಲ್ಯಾಟ್ ನಡುವೆ ನಡುವೆ ಒಂದೇ ಗೋಡೆ ಇರಬಾರದು. ಎರಡು ಮನೆಗಳು ಒಂದೇ ಗೋಡೆ ಹಂಚಿಕೊಂಡಿರಬಾರದು. ಇದರಿಂದ ವಿವಿಧ ನಕಾರಾತ್ಮಕ ಶಕ್ತಿಗಳು ಮನೆಗೆ ಲಗ್ಗೆಯಿಡುತ್ತವೆ. ಹಾಗಾಗಿ ಸಾಮಾನ್ಯ ಹಂಚಿಕೆ ಗೋಡೆಯಿರುವ ಫ್ಲಾಟ್ ಅನ್ನು ತಪ್ಪಿಸುವುದು ಉತ್ತಮ.
ಗುರು ಪೂರ್ಣಿಮೆ: ಅಜ್ಞಾನ ಕಳೆದು ಜ್ಞಾನದ ಬೆಳಕು ಒದಗಿಸುವವನೇ ಗುರು
3. ಸೂರ್ಯನ ಬೆಳಕು ಮತ್ತು ಗಾಳಿ(Light and air)
ವಾಸ್ತು ಶಾಸ್ತ್ರದಲ್ಲಿ ನೈಸರ್ಗಿಕ ಬೆಳಕಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬೆಳಿಗ್ಗೆ ಸೂರ್ಯನ ಬೆಳಕನ್ನು ಸಾಮಾನ್ಯವಾಗಿ ಸಕಾರಾತ್ಮಕತೆಯ ಮೂಲವೆಂದು ಪರಿಗಣಿಸಲಾಗುತ್ತದೆ, ವಾಸ್ತು ಶಾಸ್ತ್ರವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕಿಟಕಿಗಳು ಮತ್ತು ಬಾಲ್ಕನಿಗಳ ಉಪಸ್ಥಿತಿಗೆ ಆದ್ಯತೆ ನೀಡುತ್ತದೆ. ಬೆಳಿಗಿನ ಸೂರ್ಯನ ಬೆಳಕು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಈ ದಿಕ್ಕಿನಿಂದ ಮನೆಗೆ ಬೆಳಕು ಹರಿದುಬರುವುದನ್ನು ಖಚಿತಪಡಿಸಿಕೊಳ್ಳಿ.
4. ಲಿವಿಂಗ್ ರೂಮ್
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿನಲ್ಲಿ ನಿಮ್ಮ ವಾಸದ ಕೋಣೆಯ ಉಪಸ್ಥಿತಿಯು ಪ್ರಯೋಜನಕಾರಿಯಾಗಿದೆ. ಏಕೆಂದರೆ ಅದು ಸಾಮಾಜಿಕ ಸಂಬಂಧಗಳ ಅಭಿವೃದ್ಧಿ ಮತ್ತು ಬಲವರ್ಧನೆಗೆ ಸಹಾಯ ಮಾಡುತ್ತದೆ.
5. ಅಡುಗೆಕೋಣೆ (Kitchen)
ಅಡಿಗೆ ಕೋಣೆ ಮನೆಯ ಅವಿಭಾಜ್ಯ ಅಂಗವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಫ್ಲ್ಯಾಟ್‌ನ ಆಗ್ನೇಯ ಮೂಲೆಯು ಸಾಮಾನ್ಯವಾಗಿ ಅಡುಗೆಮನೆಗೆ ಯೋಗ್ಯವಾಗಿರುತ್ತದೆ. ಗ್ಯಾಸ್ ಅಥವಾ ಒಲೆ ಇಡಲು ಆಗ್ನೇಯ ದಿಕ್ಕನ್ನು ಆರಿಸಿಕೊಳ್ಳಬೇಕು. ವ್ಯಕ್ತಿಯು ಆಹಾರವನ್ನು ತಯಾರಿಸಲು ಪೂರ್ವ ದಿಕ್ಕಿಗೆ ಮುಖ ಮಾಡುವಂತಿರಬೇಕು.
6. ಮಲಗುವ ಕೋಣೆ
ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೋಣೆಯ ಉಪಸ್ಥಿತಿಯು ಆತಂಕ ಮತ್ತು ಸಂಘರ್ಷವನ್ನು ಉಂಟು ಮಾಡಬಹುದು. ಆದ್ದರಿಂದ ಅಂಥ ದಿಕ್ಕಿನಲ್ಲಿ ಮಲಗುವ ಕೋಣೆಯನ್ನು ತಡೆಗಟ್ಟಲು ಸಲಹೆ ನೀಡಲಾಗುತ್ತದೆ.
7. ಶೌಚಾಲಯ(Toilet)
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ಮತ್ತು ಈಶಾನ್ಯ ದಿಕ್ಕಿನ ನಡುವೆ ಶೌಚಾಲಯವಿರುವುದನ್ನು ಫ್ಲಾಟ್‌ಗೆ ಶಿಫಾರಸು ಮಾಡುವುದಿಲ್ಲ, ಏಕೆಂದರೆ ಇದು ವ್ಯಕ್ತಿಯ ಪ್ರತಿರಕ್ಷೆಯ ಮೇಲೆ ಪರಿಣಾಮ ಬೀರಬಹುದು.
ಗುರು ಪೂರ್ಣಿಮೆಯ ಈ ದಿನ ರಾಶಿ ಪ್ರಕಾರ ದಾನ ಮಾಡಿ, ಗುರುವಿನ ಆಶೀರ್ವಾದ ಫಲ ಪಡೆಯಿರಿ!
8. ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಮಹಡಿಗೆ ಸಮಾನ ಸಂಖ್ಯೆಯ ಬಾಗಿಲು ಮತ್ತು ಕಿಟಕಿಗಳನ್ನು ಹೊಂದಲು ಶಿಫಾರಸು ಮಾಡಲಾಗಿದೆ. ಆದರೆ ಈ ಸಂಖ್ಯೆಯು 10 ಅಥವಾ 20 ಆಗಿರಬಾರದು. ಅಂದರೆ ಸಂಖ್ಯೆಯ ಕೊನೆಯಲ್ಲಿ ಶೂನ್ಯವನ್ನು ಹೊಂದಿರಬಾರದು.