ತನ್ನ ಒಡಲಿನಲ್ಲೊಂದು ಪುಟ್ಟ ಜೀವವನ್ನಿಟ್ಟುಕೊಳ್ಳುವ ಗರ್ಭಿಣಿಯ ಮನಸ್ಸು ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಗರ್ಭಿಣಿಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್.
ವಾಸ್ತು(Vastu)ವು ನಮ್ಮ ದೈನಂದಿನ ಬದುಕಿನ ಪ್ರತಿಯೊಂದು ವಿಷಯಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ವಾಸ್ತು ನಿಯಮಗಳು ನಿಮಗೆ ತಿಳಿದೇ ಇರಬಹುದು. ಆದರೆ, ಮನೆಯಲ್ಲಿ ಗರ್ಭಿಣಿ(Pregnant) ಇದ್ದಾಗ ಯಾವೆಲ್ಲ ವಾಸ್ತು ನಿಯಮಗಳನ್ನು ಪಾಲಿಸಬೇಕೆಂಬುದು ಗೊತ್ತೇ? ಹೌದು, ಜಗತ್ತು ಮುನ್ನಡೆಯಲು ಈ ಸಂತಾನೋತ್ಪತ್ತಿ ನಿರಂತರವಾಗಿ ನಡೆಯುತ್ತಿರಬೇಕು. ಅದು ಸರಿಯಾಗಿ ಆಗಬೇಕೆಂದರೆ ಗರ್ಭಿಣಿಯ ಆರೋಗ್ಯವನ್ನು ಅತ್ಯಂತ ನಾಜೂಕಿನಿಂದ ನೋಡಿಕೊಳ್ಳಬೇಕು. ಏಕೆಂದರೆ ಆಕೆ ಆ ಸಮಯದಲ್ಲಿ ಎರಡು ಜೀವ. ಹೊಟ್ಟೆಯೊಳಗೆ ಮತ್ತೊಂದು ಜೀವವಿಟ್ಟುಕೊಂಡಿರುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂಪೂರ್ಣ ಚೆನ್ನಾಗಿಡುವುದು ಮುಖ್ಯ. ಇದಕ್ಕಾಗಿ ವಾಸ್ತುವಿನ ಈ ನಿಯಮಗಳನ್ನು ಅನುಸರಿಸಿ.
ಮನೆಯ ಪೂರ್ವ(East) ಭಾಗವನ್ನು ಇಂದ್ರ ಅಳುತ್ತಾನೆ. ಹೀಗಾಗಿ, ಪೂರ್ವ ದಿಕ್ಕಿನಲ್ಲಿ ಹೆಚ್ಚಿನ ಸಮಯವನ್ನು ಗರ್ಭಿಣಿಯರು ಕಳೆಯಬೇಕು. ಇದರಿಂದ ಅವರ ಎಲುಬು, ಕಣ್ಣು, ಹೃದಯ, ಬೆನ್ನು ಹುರಿ ಸ್ಟ್ರಾಂಗ್ ಆಗುತ್ತದೆ ಹಾಗೂ ರಕ್ತ ಪರಿಚಲನೆ(Blood Circulation) ಚೆನ್ನಾಗಿ ಆಗುತ್ತದೆ.
ಮನೆಯ ಮಧ್ಯ ಭಾಗವನ್ನು ಬ್ರಹ್ಮಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಜಾಗವನ್ನು ಖಾಲಿಯಾಗಿಡಬೇಕು. ಅಲ್ಲಿ ಯಾವುದೇ ಪೀಠೋಪಕರಣಗಳನ್ನು(furnitures) ಇಡಬಾರದು.
ಗರ್ಭಿಣಿಯರು ಈಶಾನ್ಯ ಭಾದಲ್ಲಿ ಕುಳಿತು ಧ್ಯಾನ ಮಾಡುತ್ತಾ, ಪ್ರಾಣಾಯಾಮ ಮಾಡಬೇಕು.
ಮುಳ್ಳಿನ ಗಿಡಗಳಾದ ಕ್ಯಾಕ್ಟಸ್, ಗುಲಾಬಿ ಇನ್ನಿತರ ಗಿಡಗಳು ಹಾಗು ಬೋನ್ಸಾಯ್(Bonsai) ಗಿಡಗಳನ್ನು ಗರ್ಭಿಣಿ ಇರುವಾಗ ಮನೆಯ ಒಳಗಿಡಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ಸಂಕೇತಿಸುತ್ತವೆ.
ರಬ್ಬರ್ ಗಿಡ ಇತ್ಯಾದಿ ಬಿಳಿ ರಸವನ್ನು ಹೊರಸೂಸುವ ಕಳ್ಳಿ ಮುಂತಾದ ಮುಳ್ಳಿನ ಗಿಡಗಳನ್ನು ನೆಡಬೇಡಿ.
ಗರ್ಭಿಣಿ ಮಹಿಳೆ ಇರುವ ರೂಮ್ ಗೋಡೆಯ ಬಣ್ಣ ಬಿಳಿಯದ್ದಾಗಿರಲಿ. ಇದು ಶಾಂತಿಯ ಸಂಕೇತವಾಗಿದ್ದು, ಆಕೆಯ ಮನಸ್ಸನ್ನು ಶಾಂತವಾಗಿರಿಸುತ್ತದೆ.
ಆಗ್ನೇಯ ದಿಕ್ಕು ಅಗ್ನಿಯ ಸಂಕೇತ ಹಾಗು ದಕ್ಷಿಣ ದಿಕ್ಕು ಯಮ(Yama)ನ ಸಂಕೇತ. ಆದುದರಿಂದ ಮೊದಲ ಮೂರು ತಿಂಗಳು ಈ ದಿಕ್ಕಿನಲ್ಲಿ ಹೆಚ್ಚಾಗಿ ಇರಬೇಡಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇದೆ.