Vastu Tips: ಹಾಲು ಉಕ್ಕುವುದು ಶುಭ ಶಕುನವೋ ಅಪಶಕುನವೋ?

Published : May 24, 2022, 12:38 PM IST
Vastu Tips: ಹಾಲು ಉಕ್ಕುವುದು ಶುಭ ಶಕುನವೋ ಅಪಶಕುನವೋ?

ಸಾರಾಂಶ

ವಾಸ್ತು ಹಾಗೂ ಜ್ಯೋತಿಷ್ಯದಲ್ಲಿ ಹಾಲಿನ ಬಗೆಗೆ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ಹಾಲಿನ ವಿಷಯವಾಗಿ ಕೆಲವೊಂದು ಶುಭವಾಗಿದ್ದರೆ, ಮತ್ತೆ ಕೆಲವೊಂದು ಅಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. 

ಕೆಲವರಿಗೆ ಪ್ರತಿ ದಿನವನ್ನು ಒಂದಿಲ್ಲೊಂದು ಶಕುನವನ್ನೋ ಅಪಶಕುನವನ್ನೋ ನೋಡಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಅಭ್ಯಾಸ. ಅದರಲ್ಲೊಂದು ಹಾಲು. ಹಾಲಿ(Milk)ನ ವಿಷಯವಾಗಿ ನಡೆವ ಕೆಲವೊಂದು ಸಾಮಾನ್ಯ ಘಟನೆಗಳು ಕೂಡಾ ಶಕುನ ಹೇಳುತ್ತವೆ ಎಂದು ನಂಬಲಾಗಿದೆ. ಉತ್ತಮ ಶಕುನ ತೋರಿದಾಗ ಒಳ್ಳೆಯ ಕೆಲಸಗಳನ್ನು ಕೈಗೊಂಡರೆ ಅದರಿಂದ ಉತ್ತಮ ಯಶಸ್ಸು ನಿರೀಕ್ಷಿಸಬಹುದು ಹಾಗೆಯೇ ಅಪಶಕುನ ಕಂಡ ಮೇಲೆ ಕೈಗೊಂಡ ಕೆಲಸವೂ ಕೈ ತಪ್ಪುತ್ತದೆ. 
ಹಾಲು ಚೆಲ್ಲುವುದು ಅಪಶಕುನ(inauspecious) ಎಂದು ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬಹುದು. ಅಪ್ಪಿ ತಪ್ಪಿ ಹಾಲು ಚೆಲ್ಲಿದರೆ ಕೆಟ್ಟದ್ದೇನೂ ಆಗದಿದ್ದರೆ ಸಾಕಪ್ಪಾ ಎಂಬ ಯೋಚನೆ ಮನದಲ್ಲಿ ಮೂಡುತ್ತದೆ. ಇದರ ಹಿಂದಿನ ಕಾರಣ ಏನು ಗೊತ್ತಾ? 

ವಾಸ್ತು ಮತ್ತು ಜ್ಯೋತಿಷ್ಯ(Vastu and Astrology)ದಲ್ಲಿ ಹಾಲಿನ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಹಾಲು ಕುದಿಸುವುದು ಮಂಗಳಕರವೆಂದು ಪರಿಗಣಿಸಿದ್ದರೂ, ತಣ್ಣನೆಯ ಹಾಲು ಬೀಳುವುದು, ಗಾಜು ಒಡೆಯುವುದು ಅಶುಭ ಸಂಕೇತಗಳನ್ನು ನೀಡುತ್ತದೆ. ಇದಕ್ಕೆ ಕಾರಣ ಹಾಲನ್ನು ಚಂದ್ರನ ಅಂಶವೆಂದು ಪರಿಗಣಿಸಿರುವುದು. ಚಂದ್ರನು ಮನಸ್ಸನ್ನು ನಿಯಂತ್ರಿಸುವವನು. ಚಂದ್ರನ ಅಂಶವಾದ ಹಾಲು ಚೆಲ್ಲಿದಾಗ ಮನಸ್ಸಿಗೆ ಬೇಸರವಾಗುವ ಸಂಗತಿ ಘಟಿಸುವ ಸಂಕೇತ ಎನ್ನಲಾಗುತ್ತದೆ. ಮತ್ತೊಂದೆಡೆ, ಬೆಂಕಿಯನ್ನು ಮಂಗಳದ ಅಂಶವೆಂದು ಪರಿಗಣಿಸಲಾಗುತ್ತದೆ. ಚಂದ್ರನು ವ್ಯಕ್ತಿಯ ಮನಸ್ಸು, ಸಂಬಂಧಗಳು, ಹಣ, ತಾಯಿ, ಮನೆ, ಸಂತೋಷದ ಸೂಚಕನಾಗಿದ್ದಾನೆ. ಹೀಗಾಗಿ, ಹಾಲಿನ ಅಪಶಕುನಗಳು ಮನೆಯಲ್ಲಿ ಸಂಬಂಧ ಹದಗೆಡುವುದು, ಆರ್ಥಿಕ ನಷ್ಟ, ಮಾನಸಿಕ ಬೇಸರಗಳನ್ನು ಸೂಚಿಸುತ್ತವೆ. 

ಈ ನಾಲ್ಕು ರಾಶಿಯವರು ಅತ್ಯುತ್ತಮ ಪ್ರೇಮಿಯಾಗಬಲ್ಲರು!

ಹೀಗಿದ್ದರೆ ಶುಭ

  • ಹಾಲು ಕುದಿವಾಗ ಉಕ್ಕಿದರೆ ಮಂಗಳಕರ ಶಕುನ ಎಂದು ಬಗೆಯಲಾಗುತ್ತದೆ.  ಇದು ಭವಿಷ್ಯದಲ್ಲಿ ಲಾಭವಿರುವುದನ್ನು ಸೂಚಿಸುತ್ತದೆ. ಕುದಿಯುತ್ತಿರುವ ಹಾಲುಕ್ಕುವುದು ವ್ಯಕ್ತಿಯ ಆರ್ಥಿಕ ಸಮೃದ್ಧಿ(economic prosperity)ಯ ಸೂಚನೆಯಾಗಿದೆ. ಹಾಗಂಥ ಹಾಲು ತಾನಾಗಿಯೇ ಉಕ್ಕಬೇಕೇ ಹೊರತು ನೀವೇ ಯೋಜಿಸಿ ಉಕ್ಕಿಸಬಾರದು. ಒಂದು ವೇಳೆ ನೀವು ಹಾಗೆ ಮಾಡಿದರೆ ಅದರಿಂದ ಧನನಷ್ಟವಾಗುತ್ತದೆ.
  • ಬೆಳಗಿನ ಜಾವದಲ್ಲಿ ಹಾಲು ಹಾಕುವವರು ಕಂಡರೆ, ಯಾರಾದರೂ ಹಾಲು ಕೊಳ್ಳುವುದು ಅಥವಾ ಹಾಲು ಒಯ್ಯುವುದು ಕಂಡರೆ ಅದು ಶುಭ ಸೂಚನೆಯಾಗಿದೆ.
  • ಬೆಳಗಿನ ಜಾವ  ಹಾಲು ಕೊಳ್ಳುವುದು ಹಾಗೂ ಕುದಿಸುವುದು ಶುಭ ಶಕುನ ಎನ್ನಲಾಗುತ್ತದೆ. ಇದರಿಂದ ಜಾತಕದಲ್ಲಿ ಚಂದ್ರ ಬಲವಾಗುತ್ತಾನೆ. 

ಹೀಗಿದ್ದರೆ ಅಪಶಕುನ

  • ಆದರೆ, ಹಾಲು ಒಂದೆರಡು ಬಾರಿಯಲ್ಲ, ಆಗಾಗ ಕುದಿಯುವಾಗ ಉಕ್ಕುತ್ತಿದ್ದರೆ, ನಿಮ್ಮ ಮನೆಯಲ್ಲಿ ವಾಸ್ತು ದೋಷವಿರಬಹುದು ಎಂದು ಅರ್ಥ ಮಾಡಿಕೊಳ್ಳಿ.
    ಹಾಲು ಯಾರ ಕೈಯಿಂದಲಾದರೂ ಬಿದ್ದರೆ ಅಥವಾ ಕುಡಿಯುವಾಗ ಗ್ಲಾಸ್ ಕೆಳಗೆ ಬಿದ್ದರೆ ಅದು ಕೆಟ್ಟದ್ದರ ಸಂಕೇತವಾಗಿದೆ.
  • ಹಾಲು ಕುದಿಸಿದ ನಂತರ ಪಾತ್ರೆಯಿಂದ ಕೆಳಕ್ಕೆ ಬಂದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. 
  • ಹಾಲು ತಳ ಹತ್ತಿದರೆ ಅದು ಅಪಶಕುನ. ಅದರಿಂದ ಮಾನಸಿಕ ತುಮುಲಗಳು ಹೆಚ್ಚಲಿವೆ. 

    ಶುಕ್ರ ಗೋಚಾರ 2022: ಮೇ 23ರಿಂದ ಈ ರಾಶಿಗಳ ಅದೃಷ್ಟದ ದಿನಗಳು ಶುರು

ಹಾಲಿನ ಪರಿಹಾರ(remedy)
ಯಾವುದೇ ಗ್ರಹವು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದರೆ, ಸೋಮವಾರ ಬೆಳಿಗ್ಗೆ ಶಿವ ಲಿಂಗಕ್ಕೆ ಹಸಿ ಹಾಲನ್ನು ಅರ್ಪಿಸಿ. ಸತತ 7 ಸೋಮವಾರಗಳ ಕಾಲ ಈ ಪರಿಹಾರ ಮಾಡಿ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಜಾತಕದ ದೋಷಗಳೂ ಕೊನೆಗೊಳ್ಳುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು