ವಾಸ್ತುವಿನಲ್ಲಿ ಸಸ್ಯಗಳಿಗೆ ಬಹಳ ಮಹತ್ವವಿದೆ. ಸಸ್ಯಗಳು ಮನೆಯಲ್ಲಿ ನಮ್ಮೊಂದಿಗೇ ಇರುವ ಜೀವಗಳು. ಮನುಷ್ಯರಂತೆ ಯಾವುದೇ ಕೆಟ್ಟ ಯೋಚನೆಗಳಿಲ್ಲದೆ, ಕೇವಲ ಕೊಡುವ ಸ್ವಭಾವದ ಇವು ಅದೃಷ್ಟ ತರಲೇಬೇಕಲ್ಲವೇ?
ಸಸ್ಯಗಳು ಉಸಿರಾಡುವುದು ಮಾತ್ರವಲ್ಲ, ಅವು ಇತರ ಎಲ್ಲ ಜೀವಿಗಳಿಗೆ ಉಸಿರು ಕೊಡುತ್ತವೆ. ಸಸ್ಯಗಳಿಗೆ ಕೊಡುವುದು ಗೊತ್ತೇ ವಿನಾ ಅವು ನಮ್ಮಿಂದೇನೂ ಕೇಳಲಾರವು. ಇಂಥ ಸಸ್ಯಗಳನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸಿ ಸಲಹಿದರೆ ಅವು ಅದೃಷ್ಟ(luck) ತರುವುದು ಸುಳ್ಳಲ್ಲ.
ಹೌದು, ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ಅವು ಆರ್ಥಿಕ ಸಮೃದ್ಧಿಯನ್ನು ತರುತ್ತವೆ ಮತ್ತು ವ್ಯಕ್ತಿಯ ಜೀವನದಲ್ಲಿ ಅಪಾರ ಪ್ರಗತಿಯನ್ನು ಉಂಟುಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಅನೇಕ ಮಂಗಳಕರ ಸಸ್ಯಗಳ ಬಗ್ಗೆ ತಿಳಿಸಲಾಗಿದೆ.
undefined
ವಾಸ್ತು ಶಾಸ್ತ್ರದ ಪ್ರಕಾರ, ಮರಗಳನ್ನು ನೆಡುವುದು ಲಕ್ಷ್ಮಿ ದೇವಿ(Lakshmi Devi)ಯನ್ನು ಮೆಚ್ಚಿಸುತ್ತದೆ. ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ನೆಡುವುದರಿಂದ ಪರಿಸರವು ಉತ್ತಮವಾಗಿ ಉಳಿಯುತ್ತದೆ, ಜೊತೆಗೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಇದರರ್ಥ ಅಂಥ ನಿವಾಸದ ಆರ್ಥಿಕ ಸ್ಥಿತಿಯು ಯಾವಾಗಲೂ ಉತ್ತಮವಾಗಿರುತ್ತದೆ.
ಮನೆಯಲ್ಲಿ ಯಾವ ಗಿಡಗಳನ್ನು ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ತಿಳಿಯೋಣ.
ಸ್ನೇಕ್ ಪ್ಲ್ಯಾಂಟ್(Snake Plant)
ವಾಸ್ತು ಶಾಸ್ತ್ರದ ಪ್ರಕಾರ ಸ್ನೇಕ್ ಪ್ಲ್ಯಾಂಟನ್ನು ಮನೆಯಲ್ಲಿ ಬೆಳೆಸುವುದರಿಂದ ಸುಖ, ಸಮೃದ್ಧಿ ಬರುತ್ತದೆ. ಈ ಸಸ್ಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದನ್ನು ನಿಮ್ಮ ಮನೆಯ ಸ್ಟಡಿ ರೂಮಿನಲ್ಲಿಟ್ಟರೆ ಅದು ನಿಮ್ಮ ಪ್ರಗತಿಗೆ ದಾರಿ ತೆರೆಯುತ್ತದೆ. ನೀವು ಈ ಸಸ್ಯವನ್ನು ಲಿವಿಂಗ್ ರೂಮ್ ಮತ್ತು ಮಲಗುವ ಕೋಣೆ(Bed room)ಯಲ್ಲಿ ಇರಿಸಬಹುದು.
ಶನಿ ವಕ್ರಿ 2022: ಶನಿಯ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಕಷ್ಟನಷ್ಟ
ಕಾಬ್ ಪ್ಲಾಂಟ್(Cob plant)
ನಂಬಿಕೆಗಳ ಪ್ರಕಾರ, ಮಗುವನ್ನು ಪಡೆಯಲು ಮನೆಯಲ್ಲಿ ಒಂದು ಕಾಬ್ ಪ್ಲ್ಯಾಂಟ್ ನೆಡಬಹುದು. ನೀವು ದೀರ್ಘ ಕಾಲದವರೆಗೆ ಪಿತೃತ್ವದ ಆನಂದವನ್ನು ಪಡೆಯದಿದ್ದರೆ, ಈ ಸಸ್ಯವನ್ನು ಮನೆಯಲ್ಲಿ ನೆಡಬಹುದು. ಪ್ರತಿ ದಿನ ಅದಕ್ಕೆ ನೀರು ಹಾಕಿ ಮತ್ತು ಮನದ ಆಸೆ ಹೇಳಿಕೊಳ್ಳಿ. ಅವು ಖಂಡಿತಾ ಈಡೇರುತ್ತವೆ.
ತೆಂಗಿನ ಮರ(Coconut Tree)
ಮನೆಯಲ್ಲಿ ತೆಂಗಿನ ಮರ ನೆಟ್ಟು ಬೆಳೆಸುವುದು ತುಂಬಾ ಪ್ರಯೋಜನಕಾರಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತೆಂಗಿನ ಮರವನ್ನು ನೆಡುವುದರಿಂದ ಹೆಚ್ಚಿನ ಪ್ರಗತಿಯಾಗುತ್ತದೆ. ಅಲ್ಲದೆ, ಇದು ಫಲಗಳನ್ನೂ ನೀಡುವುದರಿಂದ ಸಾಕಷ್ಟು ರೀತಿಯಲ್ಲಿ ನೆರವಾಗುತದೆ. ಅದಕ್ಕೇ ಅಲ್ಲವೇ ಕಲ್ಪವೃಕ್ಷ ಎನ್ನುವುದು?
ಲಜ್ವಂತಿ(Lajwanti)
ವಾಸ್ತು ಶಾಸ್ತ್ರದಲ್ಲಿ ಲಜ್ವಂತಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಇದನ್ನು ಈಶಾನ್ಯ(Northeast) ದಿಕ್ಕಿನಲ್ಲಿ ನೆಡಬಹುದು. ಅಲ್ಲದೆ, ಪ್ರತಿದಿನ ಅದರಲ್ಲಿ ನೀರನ್ನು ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ರಾಹುವಿನ ದೋಷ ನಿವಾರಣೆಯಾಗುತ್ತದೆ.
ಮೀನದಲ್ಲಿ ಗುರು; ಮೂರು ರಾಶಿಗಳಿಗೆ ರಾಜಹಂಸ ಯೋಗ!
ಲಕ್ಷ್ಮಣ ಗಿಡ(Lakshman Plant)
ಮನೆಯಲ್ಲಿ ಲಕ್ಷ್ಮಣ ಗಿಡ ನೆಟ್ಟರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯಲ್ಲಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ. ನೀವು ಈ ಸಸ್ಯವನ್ನು ಮನೆಯ ಪೂರ್ವ ಅಥವಾ ಪೂರ್ವ-ಉತ್ತರ ದಿಕ್ಕಿನಲ್ಲಿ ನೆಡಬಹುದು.
ಮನಿ ಪ್ಲಾಂಟ್(money plant)
ಮನೆಯ ಒಳಗಡೆ ಸಹ ಇಡಬಹುದಾದ ಸಸ್ಯ ಮನಿ ಪ್ಲಾಂಟ್. ಮನಿಪ್ಲಾಂಟ್ ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ, ಆರ್ಥಿಕ ಸಂಕಷ್ಟ ನಿವಾರಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.