ಮನೆ ಸುತ್ತಮುತ್ತ ಈ ಮರಗಳಿದ್ದರೆ ದುರದೃಷ್ಟ!

By Asianet KannadaFirst Published Jun 7, 2021, 3:43 PM IST
Highlights

ಕೆಲವೊಂದು ಮರಗಳನ್ನು ನಕಾರಾತ್ಮಕ ಪರಿಣಾಮ ಬೀರುವ ಮರಗಳೆಂದು ವಾಸ್ತು ಶಾಸ್ತ್ರದಲ್ಲಿ ಗುರುತಿಸಲಾಗಿದೆ. ಅವುಗಳನ್ನು ನೆಡುವುದರಿಂದ ಗ್ರಹಗಳ ದುಷ್ಪರಿಣಾಮ ಉಂಟಾಗುತ್ತದೆ.

ಆವಾಸ ಶಕ್ತಿಗೂ ಪ್ರಕೃತಿ ಶಕ್ತಿಗೂ ಸಂಬಂಧವಿದೆ. ಒಳ್ಳೆಯ ಪ್ರಕೃತಿಯಿದ್ದಾಗ ಅಲ್ಲಿ ವಾಸ್ತುಪುರುಷನು ಚೆನ್ನಾಗಿ ನೆಲೆಯಾಗಿರುತ್ತಾನೆ. ಹೀಗಾಗಿ, ವಾಸ್ತುಪುರುಷನಿಗೆ ಪೂರಕವಾಗುವ ಮರಗಳು ಸುತ್ತಮುತ್ತ ಇದ್ದಾಗ ಮನೆಯಲ್ಲಿ ಒಳ್ಳೆಯ ಆರೋಗ್ಯ, ಆರ್ಥಿಕತೆ, ನೆಮ್ಮದಿ ಎಲ್ಲವೂ ಇರುತ್ತದೆ. ಉತ್ತಮ ಮರಗಳನ್ನು ನೆಟ್ಟಾಗ ನಿಮಗೆ ಆಕ್ಸಿಜನ್‌ ಕೂಡ ಚೆನ್ನಾಗಿ ಸಿಗುತ್ತದೆ. ಅದಿಲ್ಲದೇ ಹೋದಾಗ ಋಣಾತ್ಮಕ ಶಕ್ತಿಗಳು ಪ್ರ್ರವೇಶಿಸುತ್ತವೆ. ಪೂರಕವಲ್ಲದ ಮರಗಳಿದ್ದಾಗ ತೊಂದರೆಯೇ ಆಗುತ್ತದೆ. ಕೆಲವೊಂದು ಮರಗಳನ್ನು ನಕಾರಾತ್ಮಕ ಪರಿಣಾಮ ಬೀರುವ ಮರಗಳೆಂದು ವಾಸ್ತುಶಾಸ್ತ್ರದಲ್ಲಿ ಗುರುತಿಸಲಾಗಿದೆ. ಅವುಗಳನ್ನು ನೆಡುವುದರಿಂದ ಗ್ರಹಗಳ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾದರೆ ಆ ಮರಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.

​ಅಶ್ವತ್ಥ ಮರ
ಸಾಮಾನ್ಯವಾಗಿ ದೇವಾಲಯದಲ್ಲಿ ನೆಟ್ಟಿರುವ ಅಶ್ವತ್ಥ ಮರವನ್ನು ನೋಡುತ್ತೇವೆ. ಮನೆಯಲ್ಲಿ ಈ ಮರವನ್ನು ನೆಡುವುದರಿಂದ ಧನಾತ್ಮಕ ಪರಿಣಾಮ ಆಗಬಹುದು ಎಂದು ಕೆಲವರು ನಂಬುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ತಪ್ಪಿಯೂ ಸಹ ಮನೆಯಲ್ಲಿ ಅರಳಿ ಮರವನ್ನು ನೆಡಬಾರದು ಎಂದು ವಾಸ್ತುಶಾಸ್ತ್ರ ತಿಳಿಸುತ್ತದೆ. ಈ ಮರದಲ್ಲಿ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಮನೆಯಿಂದ ಕನಿಷ್ಠ ನೂರಡಿ ದೂರದಲ್ಲಿಯಾದರೂ ಇರಬೇಕು. ಇಲ್ಲವಾದರೆ ಇದರ ಬೇರುಗಳು ಭಯಂಕರ ಬಲಿಷ್ಠವೂ ಬಹಳ ದೂರವ್ಯಾಪಿಯೂ ಆಗಿದ್ದು, ಮನೆಯ ಪಂಚಾಂಗವನ್ನೇ ಕೆಡವಿ ಹಾಕುತ್ತವೆ. ನಿಮ್ಮ ಸ್ವಂತ ಮನೆಯ ಬಳಿ ಒಂದು ಅಶ್ವತ್ಥ ಮರ ಬೆಳೆದರೆ, ಅದನ್ನು ತೆಗೆದು ದೇವಾಲಯದಲ್ಲಿ ಅಥವಾ ಇನ್ನಾವುದೇ ಪವಿತ್ರ ಸ್ಥಳದಲ್ಲಿ ನೆಡಬೇಕು. ಇಲ್ಲದಿದ್ದರೆ ಅದು ನಿಮ್ಮ ಸಂಪತ್ತನ್ನು ಸಂಪೂರ್ಣವಾಗಿ ನೆಲಸಮ ಮಾಡುತ್ತದೆ.

ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ ...
 

ತಾಳೆ ಹಣ್ಣಿನ ಮರ
ಈ ಮರ ಅಲಂಕಾರಿಕ ಗಿಡವಾಗಿ ಕಂಡರೂ ಅದನ್ನು ಮನೆಯೊಳಗೆ ನೆಡಬಾರದು ಎಂದು ವಾಸ್ತುಶಾಸ್ತ್ರ ತಿಳಿಸುತ್ತದೆ. ತಾಳೆ ಮರವನ್ನು ಮನೆಯೊಳಗೆ ನೆಡುವುದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಈ ಮರದ ಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಆದರೆ ಇದನ್ನು ಮನೆಯಲ್ಲಿ ನೆಡುವುದರಿಂದ ಶುಭ ಫಲಗಳನ್ನು ಕಾಣಲಾರಿರಿ. ಇದು ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ; ಆದರೆ ಅದರಿಂದ ಮನೆಯ ಸದಸ್ಯರ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ.

ಬೋರೆ ಹಣ್ಣಿನ ಮರ
ಬೋರೆ ಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಆದರೆ ಇದನ್ನು ಮನೆಯಲ್ಲಿ ನೆಡುವುದು ಅಶುಭ. ಇದನ್ನು ಮನೆಯಲ್ಲಿ ನೆಡುವುದರಿಂದ ಕೌಟುಂಬಿಕ ಸಮಸ್ಯೆಗಳುಂಟಾಗುತ್ತವೆ. ಬೋರೆ ಹಣ್ಣಿನ ಮರ ಮುಳ್ಳುಗಳಿಂದ ಕೂಡಿರುವುದರಿಂದ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಮರವನ್ನು ನೆಡುವುದರಿಂದ, ಮನೆಯ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾಗಲು ಪ್ರಾರಂಭವಾಗುತ್ತದೆ ಮತ್ತು ಆರ್ಥಿಕ ನಷ್ಟ ಪರಿಸ್ಥಿತಿ ಉಂಟಾಗಬಹುದು. ಈ ಮರ ಇರುವ ಮನೆಯಲ್ಲಿ ಲಕ್ಷ್ಮೀ ದೇವಿಯು ಇರುವುದಿಲ್ಲ.

ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ... ...

​ಹುಣಸೆ ಮರ
ಮನೆಯಲ್ಲಿ ಹುಣಸೆ ಮರವನ್ನು ನೆಡಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ಮನೆಗೆ ದೆವ್ವ ಮತ್ತಿತರ ಅಂತಹ ಕೆಟ್ಟ ಶಕ್ತಿಗಳನ್ನು ಆಹ್ವಾನಿಸುವುದು. ಹುಣಸೆ ಮರವನ್ನು ವಾಸ್ತುವಿನಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಮರವೆಂದು ಪರಿಗಣಿಸಲಾಗಿದೆ. ಹುಣಸೆ ಮರವನ್ನು ಮನೆಯೊಳಗೆ ನೆಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

​ಹಾಲು ಸುರಿಸುವ ಗಿಡ 
ಹಾಲಿನಂತಹ ದ್ರವ ಬರುವ ಸಸ್ಯಗಳನ್ನು ಮನೆಯ ಒಳಾಂಗಣದಲ್ಲಿ ನೆಡಬಾರದು ಎಂದು ನಂಬಿಕೆ ಇದೆ. ಎಕ್ಕ, ಅತ್ತಿಯಂಥ ಮರಗಳನ್ನು ಮನೆಯೊಳಗೆ ನೆಡಬಾರದು. ಈ ಸಸ್ಯಗಳಿಂದ ಒಂದು ರೀತಿಯ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ, ಅದು ಮನೆಯ ಸದಸ್ಯರಲ್ಲಿ ಅನಾರೋಗ್ಯವನ್ನು ತಂದಿಡಬಹುದು. ಈ ರೀತಿಯ ಗಿಡವನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಬೆಳೆಸಬಹುದು. ಅತ್ತಿ ಮರವನ್ನು ಮನೆಯ ಎದುರು ನೆಡಬಹುದು. 

ಮನೆಯ ನಕಾರಾತ್ಮಕ ಶಕ್ತಿ ಓಡಿಸಲು 'ವಾಸ್ತು' ಉಪಾಯಗಳು…! ...
 

click me!