ವಾಸ್ತು ಶಾಸ್ತ್ರದಲ್ಲಿ ಪೂಜಾ ಗೃಹವನ್ನು ನಿರ್ಮಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಮನೆಯ ಪ್ರತಿ ಒಳಿತು – ಕೆಡುಕುಗಳಿಗೆ ದೇವರ ಕೋಣೆ ವಾಸ್ತುವು ಸಹ ಕಾರಣವಾಗಿರುತ್ತದೆ. ಹಾಗಾಗಿ ದೇವರ ಕೋಣೆಯನ್ನು ನಿರ್ಮಿಸುವ ಸಂದರ್ಭದಲ್ಲಿ ವಾಸ್ತು ನಿಯಮಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ವಾಸ್ತು ಪ್ರಕಾರ ದೇವರ ಮನೆ ಇದ್ದಾಗ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಹಾಗಾದರೆ ದೇವಕ ಕೋಣೆಯ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ವಾಸ್ತು ವಿಚಾರಗಳ ಬಗ್ಗೆ ತಿಳಿಯೋಣ..
ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿ ಕೋಣೆಯನ್ನು ನಿರ್ಮಿಸುವಾಗ ವಾಸ್ತು ನಿಯಮಗಳನ್ನು ಅನುಸರಿಸಲಾಗುತ್ತದೆ. ಮನೆಗೆ ಅಡಿಪಾಯ ಹಾಕುವುದರಿಂದ ಆರಂಭವಾಗಿ ಮನೆಯ ಮಾಳಿಗೆಯನ್ನು ನಿರ್ಮಿಸುವವರೆಗೂ ಹಲವು ನಿಯಮಗಳನ್ನು ತಿಳಿಸಲಾಗಿದೆ. ಆಯಾ ವಿಷಯಕ್ಕೆ ಸಂಬಂಧಿಸಿದ ವಾಸ್ತು ವಿಚಾರಗಳನ್ನು ತಿಳಿದು ಪಾಲಿಸಿದಲ್ಲಿ ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷ ನೆಲೆಸಿರುತ್ತದೆ. ಅಡುಗೆ ಮನೆ ಮತ್ತು ದೇವರ ಕೋಣೆ ಹೀಗೆ ಮನೆಯ ಪ್ರತಿಯೊಂದಕ್ಕೂ ಬೇರೆ ಬೇರೆ ವಾಸ್ತು ನಿಯಮಗಳನ್ನು ತಿಳಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಮನೆಯಲ್ಲಿ ದೇವರ ಕೋಣೆಗೆ ಹೆಚ್ಚಿನ ಮಹತ್ವವಿರುತ್ತದೆ. ಮನೆಯ ಒಳಿತು- ಕೆಡುಕುಗಳು ದೇವರ ಮನೆಯ ವಾಸ್ತುವಿನಲ್ಲಿ ಅಡಗಿರುತ್ತದೆ. ಸರಿಯಲ್ಲದ ದಿಕ್ಕಿನಲ್ಲಿ ದೇವರ ಕೋಣೆಯನ್ನು ನಿರ್ಮಿಸಿದಾಗ ಮನೆಯಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ದೇವರ ಕೋಣೆಯನ್ನು ನಿರ್ಮಿಸುವಾಗ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕಟ್ಟುವುದು ಅತೀ ಅವಶ್ಯಕವಾಗಿರುತ್ತದೆ.
ಇದನ್ನು ಓದಿ: ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಈ 5 ರಾಶಿಯವರಿಗೆ ಕೆಡುಕು...
ದೇವರ ಕೋಣೆಯ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿಗೆ ದೇವರ ಕೋಣೆ ನಿರ್ಮಿಸುವುದು ಒಳಿತೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ದೇವರನ್ನು ಆರಾಧಿಸುವ ಸಮಯ ನಾವು ಪೂರ್ವ ದಿಕ್ಕಿಗೆ ಮುಖ ಮಾಡಿ ಧ್ಯಾನಿಸುವಂತೆ ದೇವರ ಕೋಣೆಯ ನಿರ್ಮಾಣವಿರಬೇಕು.
ಪ್ರತ್ಯೇಕ ಕೋಣೆ
ಸಾಮಾನ್ಯವಾಗಿ ದೊಡ್ಡ ಮನೆಗಳಲ್ಲಿ ಅನೇಕ ಫ್ಲೋರ್‌ಗಳಿದ್ದಾಗ ದೇವರ ಕೋಣೆಯನ್ನು ನೆಲ ಮಾಳಿಗೆಯಲ್ಲಿ ಅಂದರೆ ಗ್ರೌಂಡ್‌ಫ್ಲೋರ್‌ನಲ್ಲಿ ನಿರ್ಮಿಸಿರುತ್ತಾರೆ. ಆದರೆ, ಇದು ಸರಿಯಲ್ಲವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ದೇವರ ಕೋಣೆಯನ್ನು ಮೇಲೆ ಅಂದರೆ ಎತ್ತರದ ಸ್ಥಳದಲ್ಲಿ ನಿರ್ಮಿಸುವುದರಿಂದ ದೇವರ ಪಾದ ಮತ್ತು ನಮ್ಮ ಹೃದಯ ಒಂದೇ ಸ್ಥಾನದಲ್ಲಿದ್ದಂತಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯು ದೊಡ್ಡದಿದ್ದಾಗ ದೇವರ ಕೋಣೆಗೆ ಸರಿಯಾದ ದಿಕ್ಕಿನಲ್ಲಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸುವುದು ಉತ್ತಮ. ಮನೆಯು ಚಿಕ್ಕದಾಗಿದ್ದು, ಹೆಚ್ಚು ಜಾಗವಿಲ್ಲದಿರುವ ಸಂದರ್ಭದಲ್ಲಿ ಸರಿಯಾದ ಜಾಗವನ್ನುಮತ್ತು ದಿಕ್ಕಿನ್ನು ನೋಡಿ, ಅಲ್ಲಿ ದೇವರನ್ನು ಕೂರಿಸುವುದು ಉತ್ತಮವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ...
ದೇವರ ಕೋಣೆಗೆ ಈ ಬಣ್ಣವಿರಲಿ
ವಾಸ್ತು ಶಾಸ್ತ್ರದ ಪ್ರಕಾರ ಕಡು ಬಣ್ಣವನ್ನು ದೇವರ ಕೋಣೆಗೆ ಬಳಸುವುದು ನಿಷಿದ್ಧವಾಗಿದೆ. ಹಾಗಾಗಿ ಹಳದಿ, ಹಸಿರು ಅಥವಾ ತಿಳಿ ಗುಲಾಬಿ ಬಣ್ಣಗಳನ್ನು ಪೂಜಾ ಗೃಹಕ್ಕೆ ಬಳಿಯುವುದು ಒಳ್ಳೆಯದೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಎರಡು ಅಥವಾ ಮೂರು ರೀತಿಯ ಬಣ್ಣಗಳನ್ನು ದೇವರ ಕೋಣೆಗೆ ಬಳಸಬಾರದೆಂದು ಸಹ ಹೇಳಲಾಗುತ್ತದೆ. ಹಾಗಾಗಿ ದೇವರ ಮನೆಗೆ ಸರಿ ಹೊಂದುವ ಯಾವುದಾದರೂ ಒಂದು ತರಹದ ಬಣ್ಣವನ್ನು ಪೂರ್ತಿ ಕೋಣೆಗೆ ಬಳಿಯುವುದು ಉತ್ತಮವೆಂದು ಹೇಳಲಾಗುತ್ತದೆ.
undefined
ಹಿರಿಯರ ಭಾವಚಿತ್ರ ಇಲ್ಲಿ ಬೇಡ
ಕೆಲ ಮನೆಗಳಲ್ಲಿ ಹಿರಿಯರ ಭಾವಚಿತ್ರಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುವ ರೂಢಿ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಮನೆಯ ಶ್ರೇಯಸ್ಸಿಗೆ ಒಳಿತಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ದೇವರ ಮನೆಯಲ್ಲಿ ದೇವರ ಪ್ರತಿಮೆ, ಫೋಟೋಗಳನ್ನು ಮಾತ್ರ ಇಟ್ಟು ಪೂಜಿಸಬೇಕು. ಮನೆಯ ಹಿರಿಯರ ಭಾವಚಿತ್ರಗಳನ್ನು ಇಡಲು ಮನೆಯಲ್ಲಿ ಬೇರೆಯ ಸ್ಥಳವನ್ನು ಮಾಡಿ ಇಡುವುದು ಉತ್ತಮವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಈ ತಾರೀಖಿನಲ್ಲಿ ಹುಟ್ಟಿದವರು ದುಡ್ಡಿನ ವಿಷಯದಲ್ಲಿ ಬಹಳ ಲಕ್ಕಿ..!
ಮರದ ಪೀಠೋಪಕರಣ ಉತ್ತಮ
ದೇವರ ಕೋಣೆಯನ್ನು ಮರದ ಪೀಠೋಪಕರಣಗಳಿಂದ ನಿರ್ಮಿಸುವುದು ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ವಿಶಾಲವಾದ ಜಾಗ ಮತ್ತು ಅನುಕೂಲವಿದ್ದಲ್ಲಿ ಮಾರ್ಬಲ್‌ನಿಂದ ದೇವರ ಕೋಣೆಯನ್ನು ನಿರ್ಮಿಸುವುದು ಸಹ ಒಳ್ಳೆಯದೆಂದು ಹೇಳಲಾಗುತ್ತದೆ. ಮಾರ್ಬಲ್‌ನಿಂದ ನಿರ್ಮಿಸಿದ ಪೂಜಾ ಗೃಹವು ಸಹ ಪವಿತ್ರವೆಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹೀಗೆ ನೀವು ಈ ಎಲ್ಲ ಕ್ರಮಗಳನ್ನು ಅನುಸರಿಸಿದಲ್ಲಿ ನಿಮಗೆ ದೇವರ ಕೃಪೆ ಪ್ರಾಪ್ತಿಯಾಗುವುದಲ್ಲದೆ, ಅದೃಷ್ಟವೂ ಒಲಿಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.