ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ

By Suvarna News  |  First Published May 31, 2021, 1:07 PM IST

ಸತತ ಪರಿಶ್ರಮದಿಂದ ಕೆಲಸ-ಕಾರ್ಯಗಳನ್ನು ಮಾಡಿದರು  ಸಹ ಯಶಸ್ಸು ಸಿಗುವುದಿಲ್ಲ. ಕೆಲಸಕ್ಕೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ವಾಸ್ತು ದೋಷದ ಬಗ್ಗೆ ಅರಿಯುವುದು ಉತ್ತಮ. ಆರ್ಥಿಕ ಸಮಸ್ಯೆಗಳು, ಗೃಹ ಕ್ಲೇಶಗಳು ಎದುರಾದಾಗ ಅದನ್ನು ಪರಿಹರಿಸಿಕೊಳ್ಳುವುದಲ್ಲದೇ, ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಉಪಾಯಗಳ ಬಗ್ಗೆ ತಿಳಿಯೋಣ...
 


ಶ್ರದ್ಧೆಯಿಂದ ಮಾಡಿದ ಕೆಲಸವು ಸಫಲತೆಯನ್ನು ನೀಡುತ್ತದೆಂದು ಹೇಳಲಾಗುತ್ತದೆ. ಹೌದು. ಮಾಡುವ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡಿದರೆ ಅದರಲ್ಲಿ ಯಶಸ್ಸು ಸಿಗುವುದು ಖಚಿತವೇ, ಆದರೂ ಕೆಲವು ಬಾರಿ ಉಳಿದ ಕೆಲವು ವಿಷಯಗಳು ಯಶಸ್ಸಿನೆಡೆಗೆ ಸಾಗಲು ಅಡ್ಡಿಪಡಿಸುತ್ತವೆ. ಕೆಲಸವನ್ನು ಪ್ರಾರಂಭಿಸಿದ ಘಳಿಗೆ, ಮುಹೂರ್ತ, ವಾಸ್ತು ನಿಯಮಗಳು ಇತ್ಯಾದಿ ಅನೇಕ ವಿಚಾರಗಳು ಕೆಲಸದಲ್ಲಿ ಯಶಸ್ಸು ಸಿಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲಸವನ್ನು ಆರಂಭಿಸುವಾಗ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ವಾಸ್ತು ನಿಯಮಗಳು ಸಹ ಒಂದು ಅಂಶವಾಗಿದ್ದು, ವಾಸ್ತು ಪ್ರಕಾರ ದಿಕ್ಕು, ಸ್ಥಳ, ಸಕಾರಾತ್ಮಕ ಶಕ್ತಿಯ ಹರಿವು ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಆಗ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 

ಇದನ್ನು ಓದಿ: ಈ ತಾರೀಖಿನಲ್ಲಿ ಹುಟ್ಟಿದವರು ದುಡ್ಡಿನ ವಿಷಯದಲ್ಲಿ ಬಹಳ ಲಕ್ಕಿ..! 

ಎಷ್ಟೇ ಪರಿಶ್ರಮದಿಂದ ಕೆಲಸವನ್ನು ಮಾಡಿದರೂ ಕೆಲಸದಲ್ಲಿ ಏಳಿಗೆ ಕಾಣುತ್ತಿಲ್ಲವೆಂದಾದರೆ ಈ ವಾಸ್ತು ಉಪಾಯಗಳನ್ನು ಪಾಲಿಸುವುದು ಉತ್ತಮ. ವಾಸ್ತು ದೋಷವಿದ್ದಾಗ, ನಕಾರಾತ್ಮಕ ಶಕ್ತಿಯು ಹೆಚ್ಚಿದ್ದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಪಾಲಿಸಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ..

ಧರ್ಮ ಗ್ರಂಥಗಳು
ಹಲವು ಮನೆಗಳಲ್ಲಿ ಧಾರ್ಮಿಕ ಗ್ರಂಥಗಳನ್ನು, ಸ್ತೋತ್ರ ಪುಸ್ತಕಗಳನ್ನು ಪೂಜಾ ಗೃಹದಲ್ಲಿ ಇಟ್ಟಕೊಳ್ಳುವ ರೂಢಿ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಗ್ರಂಥಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಮನೆಗೆ ಒಳಿತಾಗುತ್ತದೆ. ಅದೇ ಸರಿಯಲ್ಲದ ದಿಕ್ಕಿನಲ್ಲಿ ಅಸ್ತವ್ಯಸ್ತವಾಗಿ ಇಡುವುದರಿಂದ ಅನೇಕ ಸಮಸ್ಯೆಗಳು ಎದುರಾಗುವುದಲ್ಲದೆ, ವಾಸ್ತು ದೋಷವು ಸಹ ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿರುವ ಧಾರ್ಮಿಕ ಗ್ರಂಥಗಳನ್ನು, ಮಂತ್ರ, ಸ್ತೋತ್ರ ಮತ್ತು ಭಜನೆಯ ಪುಸ್ತಕಗಳನ್ನು ಪಶ್ಚಿಮ ದಿಕ್ಕಿಗೆ ಇಡುವುದು ಮತ್ತು ಸ್ವಚ್ಛ ಸ್ಥಳದಲ್ಲಿ ಸರಿಯಾದ ಆಸನದ ಮೇಲಿಡುವುದು ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.  

ಇದನ್ನು ಓದಿ:

ಆರ್ಥಿಕ ಸ್ಥಿತಿ ಉತ್ತಮವಾಗಲು
ಮನೆಯಲ್ಲಿ ವಾಸ್ತು ದೋಷ ಉಂಟಾಗಿದ್ದರೆ, ಕಲಹ ಮತ್ತು ಜಗಳಗಳು ಹೆಚ್ಚಾಗುತ್ತವೆ, ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ನಿವಾರಿಸಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ. ಪ್ರತಿದಿನ ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ, ಶುದ್ಧರಾಗಿ ದೇವರಿಗೆ ಪೂಜೆ ಮಾಡಬೇಕು. ನಂತರ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಾಕಿ, ವೀಳ್ಯದೆಲೆಯಿಂದ ಇಡಿ ಮನೆಗೆ ಸಿಂಪಡಿಸಬೇಕು. ಇದರಿಂದ ಮನೆಯಲ್ಲಿ  ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೆ, ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.

Tap to resize

Latest Videos



ಶಂಖನಾದ
ಪ್ರತಿ ನಿತ್ಯ ಪೂಜೆ ಮಾಡುವಾಗ ಗಂಟೆಯನ್ನು ಬಾರಿಸುವುದು ಉತ್ತಮ. ಅಷ್ಟೇ ಅಲ್ಲದೆ ಶಂಖವನ್ನು ಊದುವುದರಿಂದ ಮನೆಯ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುವುದಲ್ಲದೆ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ. ಕೆಲಸ- ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಪೂರ್ಣಗೊಳ್ಳುತ್ತವೆ. ಪ್ರತಿದಿನ ಮನೆಯಿಂದ ತೆರಳುವ ಸಮಯದಲ್ಲಿ ಕೇಸರಿ ಅಥವಾ ಅರಿಶಿಣದ ತಿಲಕವನ್ನು ಇಟ್ಟುಕೊಳ್ಳುವುದರಿಂದ, ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಸಕಾರಾತ್ಮಕ ಶಕ್ತಿ ಹೆಚ್ಚಲು
ಮನೆಯಲ್ಲಿ ಪ್ರತಿ ನಿತ್ಯ ಧೂಪವನ್ನು ಬೆಳಗಿಸಿ, ಅದರ ಘಮವು ಮನೆಯಲ್ಲೆಲ್ಲ ಹರಡುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲದೆ ದೇಶಿ ಹಸುವಿನ ತುಪ್ಪದಿಂದ  ದೀಪವನ್ನು ಹಚ್ಚುವುದರಿಂದ ಮನೆಯ ವಾತಾವರಣ ಶುದ್ಧವಾಗುವುದಲ್ಲದೆ, ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದಲ್ಲದೆ, ಮನೆಯ ಸದಸ್ಯರ ಆರೋಗ್ಯವು ವೃದ್ಧಿಸುತ್ತದೆ.

ಇದನ್ನು ಓದಿ:  ಈ ನಾಲ್ಕು ರಾಶಿಯವರದ್ದು ಆಕರ್ಷಕ ವ್ಯಕ್ತಿತ್ವ.... ನಿಮ್ಮ-ನಿಮ್ಮವರ ರಾಶಿ ಇದರಲ್ಲಿದೆಯಾ? 

ಮನೆಯ ಮುಂದೆ ತುಳಸಿ ಗಿಡ
ತುಳಸಿಯನ್ನು  ಮನೆ ಮುಂದೆ ಬೆಳೆಸುವುದರಿಂದ ಮತ್ತು ನಿತ್ಯವೂ ಪೂಜಿಸುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸದಂತೆ ಇದು ತಡೆಯುತ್ತದೆ. ಮನೆಯ ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

click me!