ಮನೆಯನ್ನು ಸುಂದರವಾದ ಪೇಂಟಿಂಗ್ ಮೂಲಕ ಅಲಂಕರಿಸುವುದು ಕೆಲವರ ಹವ್ಯಾಸ. ಆದರೆ ಪರಿಣಾಮ ಗೊತ್ತಿಲ್ಲದೇ ಕೆಲವರು ವಾಸ್ತು ರೀತ್ಯಾ ಅಹಿತಕರವಾದ ಪೇಂಟಿಂಗ್ ತಂದುಬಿಡುತ್ತಾರೆ. ಇದರಿಂದ ಮನೆಯಲ್ಲಿ ಋಣಾತ್ಮಕವಾದ ಎನರ್ಜಿ ತುಂಬುತ್ತದೆ. ಹಾಗಿದ್ದರೆ ಮನೆಯಲ್ಲಿ ಧನಾತ್ಮಕವಾದ ಎನರ್ಜಿ ತುಂಬಲು, ಯಾವ ಗೋಡೆಗೆ ಯಾವ ಬಣ್ಣದ, ಎಂಥ ಪೇಂಟಿಂಗ್ ತರಬೇಕು?
ಸುಂದರವಾದ ವರ್ಣಚಿತ್ರಗಳಿಂದ (paintings) ಮನೆಯನ್ನು ಅಲಂಕರಿಸಲು ಯಾರು ಬಯಸುವುದಿಲ್ಲ? ಪ್ರತಿಯೊಬ್ಬರೂ ಉತ್ತಮ ಮತ್ತು ವಿಶಿಷ್ಟವಾದ ವರ್ಣಚಿತ್ರಗಳನ್ನು ಹೊಂದಲು ಬಯಸುತ್ತಾರೆ, ಅದು ಮನೆಗೆ ಸೌಂದರ್ಯವನ್ನು ಸೇರಿಸುತ್ತದೆ. ಸರಿಯಾಗಿ ಆಯ್ಕೆ ಮಾಡಿದರೆ ಸಂತೋಷ (happiness) ಮತ್ತು ಸಮೃದ್ಧಿಯನ್ನು (prosperity) ತರುತ್ತದೆ. ವಾಸ್ತು (vaastu) ತಜ್ಞರ ಪ್ರಕಾರ, ಸರಿಯಾದ ವರ್ಣಚಿತ್ರಗಳು ಮನೆಯಲ್ಲಿ ಧನಾತ್ಮಕ ಶಕ್ತಿಯ (positive energy) ಹರಿವಿಗೆ ಸಹಾಯ ಮಾಡುತ್ತದೆ. ಪೇಂಟಿಂಗ್ ಆಯ್ಕೆ ಮಾಡುವಾಗ ಸರಿಯಾದ ಕಾಳಜಿ ವಹಿಸಿದರೆ ಅದು ತುಂಬಾ ಪ್ರಯೋಜನಕಾರಿ. ಕಲಾಕೃತಿಗಳು ಕಲಾ ಗ್ಯಾಲರಿಯನ್ನು ಸುಂದರಗೊಳಿಸುವುದಲ್ಲದೆ ಮನೆಗೆ ವಿಶಿಷ್ಟವಾದ ಗುರುತನ್ನು ನೀಡುತ್ತದೆ. ಜನ ತಮ್ಮ ಮನೆಯನ್ನು ಅಲಂಕರಿಸುವಾಗ ವಾಸ್ತು ಅನುಸರಿಸಲು ಇದು ಕಾರಣ.
1. ಪೇಂಟಿಂಗ್‌ಗಳನ್ನು ಮನೆಯ ನಿವಾಸಿಗಳಿಗೆ ಶಕ್ತಿ ಮತ್ತು ಸಂತೋಷವನ್ನು ಒದಗಿಸುವಂತೆ ಆಯ್ಕೆ ಮಾಡಬೇಕು. ಸಾಮಾನ್ಯವಾಗಿ ಹಾಲ್ ಪೇಂಟಿಂಗ್ ತೂಗುಹಾಕಲು ಪ್ರಶಸ್ತ. ಬೆಡ್‌ರೂಮ್ ಮಧ್ಯಮ. ಕಿಚನ್ ಮತ್ತು ಡೈನಿಂಗ್ ಅಧಮ. ಹಾಲ್‌ನಲ್ಲಿ ಉತ್ತರಕ್ಕೆ ಎದುರಾಗಿರುವ ಗೋಡೆಗೆ, ನೀಲಿ ಬಣ್ಣದ ಪೇಂಟಿಂಗ್ ಉತ್ತಮ. ಬಣ್ಣಗಳು ವರ್ಣಚಿತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೊಳೆಯುವ ಸೂರ್ಯ ಮತ್ತು ಸ್ಪಷ್ಟವಾದ ನೀಲಿ ಆಕಾಶದೊಂದಿಗೆ ಹಸಿರು ಸಮೃದ್ಧವಾಗಿರುವ ಲ್ಯಾಂಡ್‌ಸ್ಕೇಪ್ ಪೇಂಟಿಂಗ್ (landscape painting) ಲಿವಿಂಗ್ ರೂಮಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಇಂತಹ ಕಲಾಕೃತಿಗಳು ಮನೆಯ ಆಗ್ನೇಯ ದಿಕ್ಕಿಗೆ ಶುಭಕರ.
undefined
2. ಮನೆಯಲ್ಲಿ ಸಂತೋಷವನ್ನು ಆಕರ್ಷಿಸಲು, ಪೂರ್ವ ಗೋಡೆಯ ಮೇಲೆ ಹಸಿರು ಅಥವಾ ಅಂತಹುದೇ ಬಣ್ಣದ ಪೇಂಟಿಂಗ್ ಸೂಕ್ತ. ಮನೆಯ ದಕ್ಷಿಣ ದಿಕ್ಕಿಗೆ ಕಿತ್ತಳೆ ಮತ್ತು ಕೆಂಪು ಬಣ್ಣಗಳು ಉತ್ತಮ. ಮಕ್ಕಳ ಕೋಣೆಗೆ ಗುಲಾಬಿ, ನೇರಳೆ ಅಥವಾ ನೀಲಿ ಬಣ್ಣವನ್ನು ಪರಿಗಣಿಸಬೇಕು. ಕ್ರೀಮ್ ಮತ್ತು ಬಿಳಿ ಬಣ್ಣಗಳು ಎಲ್ಲಿ ಬೇಕಾದರೂ ಬಳಸಬಹುದಾದ ಬಣ್ಣಗಳಾಗಿವೆ.
3. ನವವಿವಾಹಿತ ದಂಪತಿಗಳ ಕೋಣೆಗೆ (bed room vaastu) ಗುಲಾಬಿ ಬಣ್ಣವನ್ನು ಉತ್ತಮವಾಗಿ ಪರಿಗಣಿಸಲಾಗುತ್ತದೆ. ಡ್ರಾಯಿಂಗ್ ರೂಮ್ ಅಥವಾ ಲಾಬಿಗೆ, ಕಾರಂಜಿಗಳು ಮತ್ತು ಸಮುದ್ರ ವರ್ಣಚಿತ್ರಗಳು, ಅಂತಹ ಹರಿಯುವ ನೀರಿನ ವರ್ಣಚಿತ್ರಗಳನ್ನು ಆರಿಸಬೇಕು. ಆದರೆ ಮಲಗುವ ಕೋಣೆಗೆ ಅಂತಹ ವರ್ಣಚಿತ್ರಗಳು ಬೇಡ.
4. ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವಿಗೆ ಚಿತ್ರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಚಿತ್ರಗಳನ್ನು ಇರಿಸುವಾಗ ವಾಸ್ತು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಧನಾತ್ಮಕ ಶಕ್ತಿಗಾಗಿ, ಉದಯಿಸುವ ಸೂರ್ಯನ ವರ್ಣಚಿತ್ರವನ್ನು ನಿಮ್ಮ ಮನೆಯ ಪೂರ್ವ ಭಾಗದಲ್ಲಿ ಇರಿಸಬಹುದು. ‘ಓಂ’ ಅಥವಾ ‘ಸ್ವಸ್ತಿಕ್’ನಂತಹ ಧಾರ್ಮಿಕ ಚಿಹ್ನೆಗಳನ್ನು ಕೋಣೆಯ ಈಶಾನ್ಯ ಭಾಗದಲ್ಲಿರುವ ಉತ್ತರ ಗೋಡೆಯ ಮೇಲೆ ನೇತು ಹಾಕುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಗೆ ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ.
Zodiac Sign Special: ಜನ್ಮರಾಶಿಯ ಪ್ರಕಾರ ಇದನ್ನು ಸಾಧಿಸದೇ ನೀವು ಸಾಯುವುದಿಲ್ಲ!
5. ಕುಟುಂಬದ ಛಾಯಾಚಿತ್ರ ಅಥವಾ ಪೇಂಟಿಂಗ್ ಅನ್ನು ದಕ್ಷಿಣ ದಿಕ್ಕಿನಲ್ಲಿ (South Direction) ಇಡಬೇಕು ಅಥವಾ ನೇತು ಹಾಕಬೇಕು. ಪಶ್ಚಿಮ ದಿಕ್ಕಿನಲ್ಲಿ ಮಕ್ಕಳ ಚಿತ್ರ, ಭೂದೃಶ್ಯ ಅಥವಾ ಹಸಿರು ಕಾಡು ಇದ್ದರೆ ಅದು ಮನೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ. ನವವಿವಾಹಿತರು ಕೋಣೆಯ ದಕ್ಷಿಣ ದಿಕ್ಕಿನಲ್ಲಿ ತಮ್ಮ ಚಿತ್ರವನ್ನು ಹೊಂದಿರಬೇಕು.
6. ಪೇಂಟಿಂಗ್‌ಗಳು ಸುತ್ತಮುತ್ತಲಿನ ಪರಿಸರದಲ್ಲಿ ಸಕಾರಾತ್ಮಕತೆ (Positive Vibes) ಮತ್ತು ಶಕ್ತಿಯನ್ನು ಬಿಡುವುದು ಮಾತ್ರವಲ್ಲದೆ ಅವು ಸಮೃದ್ಧಿಗೆ ಪ್ರಮುಖ ಅಂಶಗಳಾಗಿವೆ. ಮನೆಯಲ್ಲಿ ಸರಿಯಾದ ಪೇಂಟಿಂಗ್ ಇದ್ದರೆ ಅದು ವ್ಯವಹಾರವನ್ನು ಉತ್ತೇಜಿಸುತ್ತದೆ. ದಕ್ಷಿಣ ಗೋಡೆಯ ಮೇಲೆ ನಕ್ಷೆಯನ್ನು ಇರಿಸಿದರೆ ಅದು ವ್ಯಾಪಾರಕ್ಕೆ ಸಮೃದ್ಧಿಯನ್ನು ತರುತ್ತದೆ. ನೀವು ಭಾರತದಲ್ಲಿ ವ್ಯವಹಾರವನ್ನು ಹೊಂದಿದ್ದರೆ, ಭಾರತದ ಮ್ಯಾಪ್ ಇಟ್ಟುಕೊಳ್ಳಿ, ಅಂತಾರಾಷ್ಟ್ರೀಯ ವ್ಯಾಪಾರ (International Business) ಹೊಂದಿದ್ದರೆ, ವಿಶ್ವದ ಮ್ಯಾಪ್ ಇಟ್ಟುಕೊಳ್ಳಬೇಕು.
7. ಹಾರುವ ಪಕ್ಷಿಗಳ ಚಿತ್ರವು ನಿಮ್ಮ ಹಣಕಾಸಿನ ಶಕ್ತಿಯನ್ನು (Economic Power) ಬಲಪಡಿಸುತ್ತದೆ. ಉದಯಿಸುತ್ತಿರುವ ಸೂರ್ಯನು ಅದೃಷ್ಟವನ್ನು (Luck) ತರುತ್ತಾನೆ, ಆದರೆ ತಪ್ಪು ಪೇಂಟಿಂಗ್ ಆಯ್ಕೆಯು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾರಿಗಾದರೂ ಹೃದಯ ಸಂಬಂಧಿ ಕಾಯಿಲೆ (Heart Related Ailment) ಇದ್ದಲ್ಲಿ ಅಥವಾ ಖಿನ್ನತೆಯ ಹಿಸ್ಟರಿ ಇದ್ದರೆ ಮನೆಯಲ್ಲಿ ಕೆಂಪು ಬಣ್ಣವನ್ನು ಹಾಕಬಾರದು. ಹಸಿರು (Green) ಬಣ್ಣವು ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ.
8. ಓಡುತ್ತಿರುವ ಏಳು ಕುದುರೆಗಳ ಚಿತ್ರವು ಮನೆಯಲ್ಲಿ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಕುದುರೆಗಳು ಗಾಢ ಕಪ್ಪು ಅಥವಾ ಬಿಳಿಯ ಬಣ್ಣವನ್ನು ಹೊಂದಿರಬೇಕು. ಆದರೆ ಮಿಶ್ರ ಬಣ್ಣದ್ದಾಗಿರಬಾರದು.
9. ತಪ್ಪಾಗಿ ಆಯ್ಕೆ ಮಾಡಿದ ಪೇಂಟಿಂಗ್‌ಗಳು ನಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಸರಿಯಾದ ವರ್ಣಚಿತ್ರಗಳನ್ನು ಆಯ್ಕೆ ಮಾಡುವಾಗ ಈ ಮುಂದಿನ ಅಂಶಗಳನ್ನು ಗಮನಿಸುವುದು ಮುಖ್ಯ. ಭೂತದ ಮನೆಗಳು, ಅವಶೇಷಗಳು, ಕೊಳಗಳು, ಬಾವಿಗಳು, ಆಯುಧಗಳು, ನಿಂತ ನೀರು, ಗಾಢ ನೋವಿನ ಬಣ್ಣಗಳು, ಕಣ್ಣಿಗೆ ಅಹಿತಕರವಾದ ಚಿತ್ರಕಲೆ, ಪ್ರಾಣಿಗಳ ಚಿತ್ರಗಳು ಅಥವಾ ಜಗಳದ ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ದುಃಖದ ಭಾವನೆಯನ್ನು ಚಿತ್ರಿಸುವ ಪೇಂಟಿಂಗ್ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.
ನಿಮ್ಮ Signature, ವ್ಯಕ್ತಿತ್ವವನ್ನೆ ರೂಪಿಸುತ್ತಂತೆ… ತಜ್ಞರು ಹೇಳೋದೇನು ಕೇಳಿ