ವಾಸ್ತು ದೋಷ ಮನೆ ಸಂತೋಷವನ್ನು ಹಾಳು ಮಾಡುತ್ತದೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಯಾವುದಕ್ಕೂ ಪರಿಹಾರ ಸಿಗದೆ ಒದ್ದಾಡ್ತೇವೆ. ಮನೆ ಬದಲಾವಣೆಗೆ ನಿರ್ಧಾರ ಮಾಡುವವರಿದ್ದಾರೆ. ಆದ್ರೆ ವಾಸ್ತು ದೋಷಕ್ಕೆ ಸುಲಭ ಪರಿಹಾರವಿದೆ ಎಂಬುದನ್ನು ನೀವು ತಿಳಿಯುವುದು ಅವಶ್ಯಕ.
ಸಂತೋಷದ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಕುಟುಂಬದಲ್ಲಿ ಸದಾ ಖುಷಿ, ಆರೋಗ್ಯವಿರಲಿ ಎಂದು ಎಲ್ಲರು ದೇವರನ್ನು ಪ್ರಾರ್ಥನೆ ಮಾಡ್ತಾರೆ. ಅನೇಕರು ಮನೆಯಲ್ಲಿ ಪೂಜೆ, ಹವನಗಳನ್ನು ಮಾಡ್ಸಿ, ದೇವರಲ್ಲಿ ಸುಖ, ಸಂತೋಷವನ್ನು ಬೇಡ್ತಾರೆ. ಆದ್ರೆ ಸಂತೋಷದ ಜೀವನಕ್ಕಾಗಿ ನೀವು ತುಂಬ ಕಷ್ಟಪಡ್ಬೇಕಾಗಿಲ್ಲ. ಮನೆ ವಾಸ್ತು ಸರಿಯಾಗಿದ್ರೆ ಸುಖಕರ ಜೀವನ ನಿಮ್ಮದಾಗುತ್ತದೆ. ಮನೆ ವಾಸ್ತು ದೋಷವನ್ನು ಒಂದು ಸಣ್ಣ ಮೂರ್ತಿ ಪರಿಹರಿಸಬಲ್ಲದು. ಹೌದು, ಬುದ್ಧನ ಮೂರ್ತಿಯಲ್ಲಿ ದೊಡ್ಡ ಶಕ್ತಿಯಿದೆ. ಮನೆಯಲ್ಲಿ ನೀವು ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡ್ಬಹುದು. ಸರಿಯಾದ ಜಾಗದಲ್ಲಿ ಬುದ್ಧನ ಮೂರ್ತಿ ಇಟ್ಟರೆ ಮನೆ ಸೌಂದರ್ಯ ಹೆಚ್ಚುವುದಲ್ಲದೆ ನಿಮ್ಮ ಮನೆಯ ಎಲ್ಲ ದೋಷಗಳು ಬಗೆಹರಿಯುತ್ತವೆ. ಮನೆ ಮಂದಿಯ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿ ಸದಾ ಶಾಂತಿ ನೆಲೆಸುತ್ತದೆ. ಬಯಸಿದ್ದೆಲ್ಲ ಈಡೇರ್ಬೇಕು, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕೆಂದ್ರೆ ಬುದ್ಧನ ಪ್ರತಿಮೆಯನ್ನು ಇಲ್ಲಿಡಬೇಕು ಎಂಬುದು ಗೊತ್ತಿರಬೇಕು. ಬುದ್ಧ (Buddha) ನ ಪ್ರತಿಮೆಗಳು ಸಾಕಷ್ಟಿವೆ. ಬೇರೆ ಬೇರೆ ಮುದ್ರೆಯಲ್ಲಿ ಬುದ್ಧ ಕುಳಿತಿದ್ದಾನೆ. ಹಾಗಾಗಿ ಒಂದೊಂದು ಮೂರ್ತಿ (Idol) ಇಡಲು ಒಂದೊಂದು ಜಾಗವಿದೆ.
ಮನೆ (House ) ಪ್ರವೇಶ ದ್ವಾರದ ಬಳಿ ಇರಲಿ ಈ ಮೂರ್ತಿ : ಬುದ್ಧಮ ಮೂರ್ತಿಯನ್ನು ಮನೆಗೆ ತಂದ್ರೆ ಎಲ್ಲಿಡಬೇಕೆಂಬ ಗೊಂದಲ ಕಾಡುತ್ತದೆ. ನೀವು ರಕ್ಷಾ ಮುದ್ರೆಯಲ್ಲಿ ಕುಳಿತಿರುವ ಬುದ್ಧನ ಮೂರ್ತಿಯನ್ನು ಮನೆಗೆ ತಂದ್ರೆ ಅದನ್ನು ಪ್ರವೇಶ ದ್ವಾರದ ಬಳಿ ಇಡಬೇಕು. ಇದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಒಂದು ಕೈನಲ್ಲಿ ಆಶೀರ್ವಾದ ಹಾಗೂ ಇನ್ನೊಂದು ಕೈ ಸುತ್ತಮುತ್ತಲಿನ ರಕ್ಷಣೆ ಮಾಡುತ್ತದೆ. ಯಾವಾಗ್ಲೂ ಬುದ್ಧನ ಮೂರ್ತಿಯನ್ನು ನೆಲದ ಮೇಲೆ ಇಡಬಾರದು. ಬುದ್ಧನ ಮೂರ್ತಿ ನೆಲದಿಂದ 3 -4 ಅಡಿ ಎತ್ತರದಲ್ಲಿ ಸ್ಥಾಪಿಸಬೇಕು.
undefined
ಬಲಕ್ಕೆ ವಾಲಿದ ಮೂರ್ತಿ ಇಲ್ಲಿಡಿ : ಬುದ್ಧನ ಮೂರ್ತಿ ಬಲಕ್ಕೆ ವಾಲಿದಂತಿದ್ದರೆ ಆ ಮೂರ್ತಿಯನ್ನು ನೀವು ಲೀವಿಂಗ್ ರೂಮಿನಲ್ಲಿ ಇಡುವುದು ಶುಭಕರ. ಪಶ್ಚಿಮಕ್ಕೆ ಅಭಿಮುಖವಾಗಿ ಈ ಮೂರ್ತಿಯನ್ನು ಇಡಬೇಕಾಗುತ್ತದೆ. ಬುದ್ಧನ ಈ ಮೂರ್ತಿಯನ್ನು ಟೇಬಲ್ ಮೇಲೆ ಅಥವಾ ಸೆಲ್ಫ್ ಮೇಲೆ ಇಡುವುದು ಒಳ್ಳೆಯದು. ಇದು ಮನೆಯಲ್ಲಿ ಸುಖ, ಶಾಂತಿ ತರುತ್ತದೆ ಎಂದು ನಂಬಲಾಗಿದೆ. ಲಿವಿಂಗ್ ರೂಮಿನಲ್ಲಿಡುವ ಈ ಮೂರ್ತಿ ಮನೆಯವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಧ್ಯಾನ ಮುದ್ರೆಯ ಮೂರ್ತಿಯನ್ನು ಇಲ್ಲಿಡಿ : ಭಗವಂತ ಬುದ್ಧನ ಧ್ಯಾನ ಮುದ್ರಾ ಭಂಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನೀವು ಮನೆಗೆ ಧ್ಯಾನ ಮುದ್ರೆಯಲ್ಲಿರುವ ಭಗವಂತನ ಮೂರ್ತಿ ತಂದ್ರೆ ಅದನ್ನು ಮನೆಯ ಶುದ್ಧ ಸ್ಥಳದಲ್ಲಿ ಸ್ಥಾಪನೆ ಮಾಡಬೇಕು. ಮನೆಯ ಉದ್ಯಾನವನದಲ್ಲಿ ಇದನ್ನು ಇಡುವುದು ಮಂಗಳಕರ. ಉದ್ಯಾನವನದಲ್ಲಿ ನೀವು ವಿಹರಿಸುವಾಗ ನಿಮಗೆ ಶಾಂತಿ ಮತ್ತು ಆರಾಮವನ್ನು ನೀಡುತ್ತದೆ ಎಂದು ನಂಬಲಾಗಿದೆ.
ಕಣ್ಣಿನ ಶೇಪ್ ಮೂಲಕ ತಿಳಿಯರಿ ನಿಮ್ಮವರ ಗುಣ ಹೇಗಿದೆ ಎಂದು
ಇದಲ್ಲದೆ ಬಹುತೇಕರು ಧ್ಯಾನ ಮುದ್ರೆಯಲ್ಲಿರುವ ಬುದ್ಧನ ವಿಗ್ರಹವನ್ನು ದೇವರ ಮನೆಯಲ್ಲಿ ಇಡ್ತಾರೆ. ಇದು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಬುದ್ಧನ ಮೂರ್ತಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಬುದ್ಧನ ಮೂರ್ತಿಯನ್ನು ದೇವರ ಮನೆಯಲ್ಲಿ ಪೂರ್ವಾಭಿಮುಖವಾಗಿ ಇಡಬೇಕು. ಹಾಗೆಯೇ ನಮ್ಮ ಕಣ್ಣಿನ ನೇರಕ್ಕೆ ಇಡಬೇಕು. ನಮ್ಮ ಕಣ್ಣಿನ ಕೆಳಗೆ ಮೂರ್ತಿಯನ್ನು ಇಡಬಾರದು.
ಗಣಪನ ಮೆಚ್ಚಿಸೋಕೆ ಗರಿಕೆ ಹುಲ್ಲು ಸಾಕು! ಅವನಿಗೇಕೆ ದೂರ್ವೆ ಇಷ್ಟ?
ಮಕ್ಕಳ ಕೋಣೆಯಲ್ಲಿ ಇರಲಿ ಬುದ್ಧನ ಮೂರ್ತಿ : ಬುದ್ಧನ ಪ್ರತಿಯೊಂದು ಭಂಗಿಯು ವಿಭಿನ್ನ ಅರ್ಥವನ್ನು ಹೊಂದಿದೆ. ಮಕ್ಕಳ ಟೇಬಲ್ ಮೇಲೆ ಬುದ್ಧನ ಪ್ರತಿಮೆ ಇಡುವುದು ಒಳ್ಳೆಯದು. ಈ ಮೂರ್ತಿ ಪೂರ್ವಕ್ಕೆ ಎದುರಾಗಿರುವಂತೆ ನೋಡಿಕೊಳ್ಳಿ. ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ. ಮನೆಯಲ್ಲಿ ಮಲಗಿರುವ ಬುದ್ಧ ಅಥವಾ ಸಣ್ಣ ತಲೆಯ ಬುದ್ಧ ಅಥವಾ ಲಾಫಿಂಗ್ ಬುದ್ಧನನ್ನು ಕೂಡ ಇಡಬಹುದು.