
ಭಾರತದ ಸಂಸ್ಕೃತಿ ಪ್ರಕಾರ ಪಾದರಕ್ಷೆಗಳನ್ನು ಮನೆಯಿಂದ ಹೊರಗಡೆ ಬಿಡಲಾಗುತ್ತದೆ. ಚಪ್ಪಲಿ ಬಿಚ್ಚಿಟ್ಟ ಕೂಡಲೇ ಕಾಲಿ ತೊಳೆದುಕೊಂಡು ಆನಂತರ ಮನೆ ಪ್ರವೇಶಿಸುತ್ತಿದ್ದರು. ಹಿರಿಯರು ಇರುವ ಮನೆಗಳಲ್ಲಿ ಹಾಗೂ ಹಳ್ಳಿ ಕಡೆ ಇದನ್ನು ಈಗಲೂ ಫಾಲೋ ಮಾಡುತ್ತಾರೆ. ಆದರೆ ಸಿಟಿ ಜೀವನಕ್ಕೆ ಅಡ್ಜಸ್ಟ್ ಆಗಿರುವವರು ಮನೆಯೊಳಗೆ ಒಂದು ಚಪ್ಪಲಿ, ಮನೆ ಹೊರಗೆ ಒಂದು ಚಪ್ಪಲಿ, ಆಫೀಸ್‌ಗೆ ಒಂದು ಚಪ್ಪಲಿ ಅಂತ ಲೆಕ್ಕವಿಲ್ಲದಷ್ಟು ಇಟ್ಟುಕೊಂಡಿರುತ್ತಾರೆ. ಇಲ್ಲಿ ಚಪ್ಪಲಿ ಧರಿಸುವುದು ತಪ್ಪು ಎಂದು ಹೇಳುತ್ತಿಲ್ಲ...ಧರಿಸಿರುವ ಚಪ್ಪಲಿಯನ್ನು ಹೇಗೆ ಬಿಡಬೇಕು ಎಲ್ಲಿ ಬಿಡಬೇಕು..ಎಲ್ಲಿ ಬಿಟ್ಟರೆ ಒಳ್ಳೆಯದು ಎಂದು ತಿಳಿಸಲಾಗುತ್ತಿದೆ.
ಸಾಮಾನ್ಯವಾಗಿ ಬರೀ ಕಾಲಿನಲ್ಲಿ ಓಡಾಡುವುದು ಕಷ್ಟ ಅಂತ ಮನೆಯಲ್ಲಿ ಚಪ್ಪಲಿ ಧರಿಸುತ್ತಾರೆ. ಅಡುಗೆ ಮನೆಗೆ ಚಪ್ಪಲಿ ಧರಿಸಲೇ ಬಾರದು ಅಂತಾರೆ ಆದರೆ ನಿಂತುಕೊಂಡು ಅಡುಗೆ ಮಾಡುವಾಗ ಕಷ್ಟ ಆಗುತ್ತದೆ ಎಂದು ಧರಿಸುತ್ತಾರೆ. ಆದರೆ ಚಪ್ಪಲಿಯನ್ನು ಅಡುಗೆ ಮನೆಯೊಳಗೆ ಹಾಕಿಕೊಳ್ಳುವುದು ಅರ್ಜೆಂಟ್ ಎಂದು ಅಲ್ಲೇ ಬಿಡುವುದು ತಪ್ಪು. ಬೆಡ್‌ರೂಮ್‌ನಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಹುದು ಆದರೆ ಹಾಸಿಗೆ ಕೆಳಗೆ ಬಿಡುವುದು ಮತ್ತು ಹಣ ಇಟ್ಟಿರುವ ಲಾಕರ್‌ಗಳ ಬಳಿ ಬಿಡುವುದು ಮಾಡಬಾರದು. ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಅಶಾಂತಿ, ಸಂಬಂಧಗಳಲ್ಲಿ ಅಸಮಾಧಾನ ಉಂಟಾಗುತ್ತದೆ ಎಂದು ವಾಸ್ತು ಪ್ರಕಾರ ಹೇಳಲಾಗುತ್ತದೆ. ನೀವು ವಾಸ್ತು ನಂಬದೇ ಇದ್ದರೂ ಕೂಡ ಅಡುಗೆ ಮನೆಯಲ್ಲಿ ಸ್ವಚ್ಛತೆ, ಆರೋಗ್ಯ ಸಮಸ್ಯೆಗಳು ಆಗಬಾರದು ಅಂದರೆ ಚಪ್ಪಲಿಯನ್ನು ದೂರವಿಡಬೇಕು.
ಅಯ್ಯೋ....ಸ್ನಾನದ ನಂತರ ಬಕೆಟ್ ಖಾಲಿ ಬಿಟ್ಟರೆ ಈ ಸಮಸ್ಯೆ ವಕ್ಕರಿಸುತ್ತೆ!
ಹೊರಗಡೆ ಸುತ್ತಾಡಲು ಬಳಸುವ ಚಪ್ಪಲಿಯನ್ನು ಮನೆಯೊಳಗೆ ಬಳಸಬಾರದು. ಮನೆಯ ಮುಖ್ಯದ್ವಾರದಿಂದ ಮೂರು ಅಡಿ ದೂರದಲ್ಲಿ ಚಪ್ಪಲಿಗಳನ್ನು ಬಿಡಬೇಕು. ಹೊರಗಡೆ ಸುತ್ತಾಡಿಕೊಂಡು ಬರುವ ಚಪ್ಪಲಿಯಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ಚಪ್ಪಲಿ ಬಿಚ್ಚಿಟ್ಟ ಕೂಡಲೆ ಕಾಲು ತೊಳೆದುಕೊಳ್ಳಬೇಕು. ನೀವು ಧರಿಸುವ ಚಪ್ಪಲಿಯನ್ನು ಮತ್ತೊಬ್ಬರಿಗೆ ಕೊಡಬೇಡಿ ಹಾಗೂ ಮತ್ತೊಬ್ಬರ ಚಪ್ಪಲಿಯನ್ನು ನೀವು ಧರಿಸಬೇಕು. ಅಷ್ಟೇ ಅಲ್ಲ ಮೂರು ಅಡಿ ದೂರದಲ್ಲಿ ಚಪ್ಪಲಿ ಬಿಟ್ಟರೂ ಕೂಡ ಸರಿಯಾಗಿ ಬಿಡಬೇಕು. ಒಂದು ಸರಿಯಾಗಿ ಒಂದು ಉಲ್ಟಾ ಬಿಡಬಾರದು. ಉಲ್ಟಾಪಲ್ಟಾ ಚಪ್ಪಲಿ ಬಿಟ್ಟರೆ ಮನೆಯೊಳಗೆ ಲಕ್ಷ್ಮಿ ಬರುವುದಿಲ್ಲ ಎನ್ನುತ್ತಾರೆ. ಹೀಗಾಗಿ ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಬಿಡುವುದು ಸೂಪರ್ ಐಡಿಯಾ. ಇಷ್ಟೆಲ್ಲಾ ರೂಲ್ ಮಾಡುವವರು ಅಪ್ಪಿತಪ್ಪಿಯೂ ದೇವರ ಕೋಣೆ ಬಳಿ ಚಪ್ಪಲಿ ಬಿಡಬೇಡಿ. ಇಷ್ಟು ಫಾಲೋ ಮಾಡಿ ನೀವು ಇದನ್ನು ಮಾಡಿಬಿಟ್ಟರೆ ಅಶಾಂತಿ, ಸಾಲ, ಕೆಟ್ಟ ದೃಷ್ಟಿ ಮತ್ತು ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಣ ಮತ್ತು ದೇವರಿಗೆ ನಮ್ಮಲ್ಲಿ ವಿಶೇಷ ಗೌರವವಿದೆ. ದೇವರ ಕೋಣೆ ಮುಂದೆ ಚಪ್ಪಲಿ ಧರಿಸಿ ಓಡಾಡಬಾರದು ಅಂತಾರೆ.
ಉಪ್ಪು ಮತ್ತು ಹುಣಸೆ ಹಣ್ಣು ಪ್ಲಾಸ್ಟಿಕ್ ಡಬ್ಬದಲ್ಲಿದ್ದರೆ ಮನೆಗೆ ಹಣ ಬರಲ್ಲ; ಭಯವಾದರೆ ಇದನ್ನು ಪಾಲಿಸಿ
ಒಟ್ಟಾರೆ ಮನೆಯ ಮುಖ್ಯ ದ್ವಾರದಿಂದ ಮೂರು ಅಡಿ ದೂರದಿಂದ ಚಪ್ಪಲಿ ಬಿಡುವುದು ಒಳ್ಳೆಯದು. ಮನೆಯಲ್ಲಿ ಬಾಲ್ಕಾನಿ ಅಥವಾ ಸಿಟ್‌ಔಟ್ ಏರಿಯಾ ಇದ್ದರೆ ಅಲ್ಲಿ ಚಪ್ಪಲಿ ಬಿಡುವುದು ಇನ್ನೂ ಒಳ್ಳೆಯ ಐಡಿಯಾ. ಮನೆಯ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ಚಪ್ಪಲಿ ಬಿಟ್ಟರೆ ಯಾವ ಸಮಸ್ಯೆನೂ ಎದುರಾಗುವುದಿಲ್ಲ.
ಎಚ್ಚರ..... ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ!