ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಈ ನಿಯಮ ಪಾಲಿಸಿ – ಅದೃಷ್ಟ ನಿಮ್ಮದಾಗಲಿದೆ..!!

By Suvarna NewsFirst Published Jul 8, 2021, 12:13 PM IST
Highlights

ಮನೆಯಲ್ಲಿ ಮನಿಪ್ಲಾಂಟ್ ಅನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಗೆ ಸುಖ-ಸಮೃದ್ಧಿ ನೀಡುವ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಶುಭ ಸಸ್ಯವಿದು. ಮನೆಯ ವಾತಾವರಣ ಶುದ್ಧವಾಗುವುದಲ್ಲದೇ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಅದನ್ನು ಪೋಷಿಯಲು, ಇಲ್ಲದಿದ್ದಲ್ಲಿ ತಂದು ನೆಡಲು ಅನೇಕ ನಿಯಮಗಳನ್ನು ಉಲ್ಲೇಖಿಸಿದ್ದಾರೆ. ವಾಸ್ತುವಿನ ಅನುಸಾರ ಮನಿಪ್ಲಾಂಟ್ ಮನೆಯಲ್ಲಿದ್ದರೆ ಎಲ್ಲವೂ ಶುಭ. ಹಾಗಾಗದರೆ ಮನಿಪ್ಲಾಂಟ್ ಬಗ್ಗೆ ಇರುವ ವಾಸ್ತು ನಿಯಮಗಳನ್ನು ತಿಳಿಯೋಣ...

ಮನೆಗೆ ಸಕಾರಾತ್ಮಕ ಶಕ್ತಿಯನ್ನು ನೀಡುವ ಹಲವಾರು ವಸ್ತು ಮತ್ತು ವಿಷಯಗಳಲ್ಲಿ ಗಿಡ-ಮರಗಳು ಸಹ ಒಂದು ಭಾಗವಾಗಿವೆ. ಮನೆಯ ಎದುರಿಗೆ ತುಳಸಿ, ಸುತ್ತಲೂ ಉತ್ತಮ ಗಾಳಿಯನ್ನು ನೀಡುವುದಲ್ಲದೆ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಂತ ಗಿಡಗಳನ್ನು, ಮರಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಲ್ಲದೆ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಅನೇಕ ಸಮಸ್ಯೆಗಳಿಗೆ ತಕ್ಷಣದಲ್ಲಿ ಪರಿಹಾರ ದೊರಕುತ್ತದೆ ಇಂಥಹ ಸಸ್ಯಗಳಲ್ಲಿ ಒಂದಾದ ಮನಿಪ್ಲಾಂಟ್‌ನ ವಿಶೇಷತೆಯನ್ನು ತಿಳಿಯೋಣ....

ಮನಿಪ್ಲಾಂಟ್ ಹೆಸರೇ ಹೇಳುವಂತೆ ದುಡ್ಡಿನ ಗಿಡ, ಅಂದರೆ ಈ ಸಸ್ಯ ಮನೆಯಲ್ಲಿದ್ದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮನಿಪ್ಲಾಂಟ್‌ನಿಂದ ಅದೃಷ್ಟವನ್ನು ಪಡೆಯಬೇಕೆಂದಿದ್ದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಮನೆಯಲ್ಲಿ ಹೇಗೆ ಮತ್ತು ಎಲ್ಲಿ ನೆಡಬೇಕು? ಅದರ ಪಾಲನೆ ಮತ್ತು ಪೋಷಣೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳನ್ನು ತಿಳಿದುಕೊಳ್ಳುವುದು ಉತ್ತಮ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...! 

ವಾಸ್ತು ಶಾಸ್ತ್ರದ ಪ್ರಕಾರ ಮನಿಪ್ಲಾಂಟ್ ಅನ್ನು ಮನೆಯ ಆಗ್ನೇಯ ದಿಕ್ಕಿಗೆ ಇಡಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಸದಾ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗುತ್ತಾ ಬರುತ್ತದೆ. ಅಷ್ಟೇ ಅಲ್ಲದೆ ಆಗ್ನೇಯ ದಿಕ್ಕಿಗೆ ಇಡುವುದರಿಂದ ಹೆಚ್ಚು ಶುಭವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆಗ್ನೇಯ ದಿಕ್ಕು ಪ್ರಥಮ ಪೂಜಕ ಗಣೇಶನ ದಿಕ್ಕಾಗಿದೆ. ಈ ದಿಕ್ಕಿಗೆ ಮನಿಪ್ಲಾಂಟ್ ಇಡುವುದರಿಂದ ಮನೆಯ ಸದಸ್ಯರ ಅದೃಷ್ಟ ಖುಲಾಯಿಸುವಲ್ಲಿ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ.

ಮನಿಪ್ಲಾಂಟ್ ಅನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮವಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈಶಾನ್ಯ ದಿಕ್ಕು ದೇವಗುರು ಬೃಹಸ್ಪತಿಯ ಅಧಿಪತ್ಯದ ದಿಕ್ಕಾಗಿದೆ. ಶುಕ್ರ ಮತ್ತು ಗುರು ಪರಸ್ಪರ ವೈರಿಗಳಾಗಿದ್ದಾರೆ. ಹಾಗಾಗಿ ಅದೃಷ್ಟವನ್ನು ತಂದುಕೊಡುವ ಮನಿಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿಗೆ ಇಡಬಾರದು.

ಇದನ್ನು ಓದಿ: ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..! 

ಮನೆಯ ಪೂರ್ವ ಮತ್ತು  ಪಶ್ಚಿಮ ದಿಕ್ಕಿನಲ್ಲಿ ಮನಿಪ್ಲಾಂಟ್ ಅನ್ನು ನೆಡಬಾರದು. ಇದರಿಂದ ಮನೆಯ ಸದಸ್ಯರಲ್ಲಿ ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಪರಸ್ಪರ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಮನಿಪ್ಲಾಂಟ್ ನೆಲವನ್ನು ಸೋಕದಂತೆ ಇಡುವುದು ಉತ್ತಮ. ಹಾಗಾದಲ್ಲಿ ಇದು ಅಶುಭವನ್ನು ಸೂಚಿಸುತ್ತದೆ.  ಇದರಿಂದ ಆರ್ಥಿಕ ಹಾನಿ ಮತ್ತು ಸುಖ-ಸಮೃದ್ಧಿ ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ.


ಮನಿಪ್ಲಾಂಟ್ ಅನ್ನು ಯಾವುದಾದರು ದಾರ ಅಥವಾ ಕೋಲಿನಿಂದ ಕಟ್ಟಬೇಕು. ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಅದೃಷ್ಟ ಒಲಿಯುವುದಲ್ಲದೆ, ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಮನಿ ಪ್ಲಾಂಟ್‌ಗೆ ನೀರು ಹಾಕುವಾಗ ಅದಕ್ಕೆ ಹಾಲಿನ ಅಂಶವನ್ನು ಸೇರಿಕೊಳ್ಳಬೇಕು. ಇದರಿಂದ ಹಣವನ್ನು ಸಂಪಾದಿಸಲು ಹಲವು ದಾರಿಗಳು ತೆರೆದುಕೊಳ್ಳುತ್ತವೆ. ಭಾನುವಾರದಂದು ಮನಿಪ್ಲಾಂಟ್‌ಗೆ ನೀರು ಹಾಕುವುದು ಅಶುಭವೆಂದು ಹೇಳಲಾಗುತ್ತದೆ.

ಮನೆಯ ಅಂಗಳ ಅಥವಾ ಒಳಗೆ ನೆಡಬೇಕು
ಮನಿಪ್ಲಾಂಟ್ ಅನ್ನು ಮನೆಯ ಒಳಗೆ ಅಥವಾ ಹೊರಗಡೆ ಎಲ್ಲಿ ಬೇಕಾದರೂ ಇಡಬಹುದು. ಮನಿಪ್ಲಾಂಟ್ ಅನ್ನು ಮನೆಯ ಅಂಗಳದಿಂದ ಅಥವಾ ಕಾಂಪೌಂಡ್‌ನಿಂದ ಹೊರಗೆ ನೆಡಬಾರದು. ಮನಿಪ್ಲಾಂಟ್ ಅನ್ನು ಶುಕ್ರವಾರ ನೆಡುವುದು ಶುಭವೆಂದು ಹೇಳಲಾಗುತ್ತದೆ. ಈ ಸಸ್ಯವು ಕಾಂಪೌಂಡ್‌ನಿಂದ ಹೊರಗಿದ್ದಾಗ ನಕಾರಾತ್ಮಕ ಶಕ್ತಿಗೆ ಹೆಚ್ಚು ಸೋಕುವುದರಿಂದ ಮನಿಪ್ಲಾಂಟ್ ಸೊರಗಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನು ಓದಿ: ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..! 

ಶುಕ್ರ ಗ್ರಹಕ್ಕೆ ಬಲ ನೀಡುವ ಸಸ್ಯ ಮನಿಪ್ಲಾಂಟ್
ಶುಕ್ರವಾರದ ದಿನ ಮನಪ್ಲಾಂಟ್ ನೆಡುವುದು ಉತ್ತಮ. ಈ ಸಸ್ಯವು ಮನೆಯ ಸದಸ್ಯರ ಸುಖ-ಸಮೃದ್ಧಿಯ ಕಾರಕನಾದ ಶುಕ್ರನನ್ನು ಬಲಗೊಳಿಸುತ್ತದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ, ಸಂಪತ್ತು ನೆಲೆಸುತ್ತದೆ. ಅಷ್ಟೇ ಅಲ್ಲದೆ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಹಾಗಾಗಿ ಮನೆ ಮತ್ತು ಕಚೇರಿಗಳಲ್ಲಿ ಮನಿಪ್ಲಾಂಟ್ ಅನ್ನು ಆಗ್ನೇಯ ದಿಕ್ಕಿಗಿಡುತ್ತಾರೆ.

click me!