Vastu Remedies 2022: ಈ ವಿಗ್ರಹ ಮನೆಯಲ್ಲಿದ್ರೆ ಬಯಸಿದ್ದೆಲ್ಲ ಸಿದ್ದಿಸುತ್ತೆ!

By Suvarna NewsFirst Published Jun 6, 2022, 1:31 PM IST
Highlights

ಕಾಮಧೇನು ಎಂದರೆ ಕೇಳಿದ್ದೆಲ್ಲ ಕೊಡುವುದೆಂದರ್ಥ. ಮನೆಯಲ್ಲಿ ಕಾಮಧೇನುವಿನ ಇಂಥ ವಿಗ್ರಹವನ್ನು ವಾಸ್ತು ಶಾಸ್ತ್ರದ ಅನುಸಾರ ಸರಿಯಾದ ದಿಕ್ಕಿನಲ್ಲಿಟ್ಟರೆ ಎಲ್ಲ ಬಯಕೆಗಳೂ ಈಡೇರುತ್ತವೆ. ವಿಗ್ರಹ ಕೊಳ್ಳುವ ಮೊದಲು ಅದು ಹೇಗಿರಬೇಕೆಂದು ತಿಳಿಯಿರಿ. 

ಸಮುದ್ರ ಮಂಥನ(Samudra Manthan) ಸಮಯದಲ್ಲಿ ಮಥಿಸಿ ಹೊರ ಬಂದ ಪವಿತ್ರವಾದ 14 ಸಂಗತಿಗಳಲ್ಲಿ ಕಾಮಧೇನು(Kamadhenu)ವೂ ಒಂದು. ಇದು ಸ್ವರ್ಗದಲ್ಲಿರುವ ದೈವಿಶಕ್ತಿಯುಳ್ಳ ಹಸು. ಹಿಂದೂ ಪುರಾಣಗಳ ಪ್ರಕಾರ, ಈ ಹಸುವು ಕೇಳಿದ್ದೆಲ್ಲ ಕೊಡುವ ಶಕ್ತಿ ಹೊಂದಿದೆ. ಕಾಮಿಸಿದ್ದನ್ನೆಲ್ಲ ನೀಡುವ ಧೇನು ಅಂದರೆ ಕೇಳಿದ್ದೆಲ್ಲ  ಕೊಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರ(Indra)ನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು. ಈ ಕಾಮಧೇನುವಿನಲ್ಲಿ ಮುಕ್ಕೋಟಿ ದೇವರು ಇರುತ್ತಾರೆ ಮತ್ತು ಎಲ್ಲ ಹಸುಗಳಲ್ಲಿಯೂ ಕಾಮದೇನುವಿನ ಅಂಶವಿರುತ್ತದೆ ಎಂಬುದು ಹಿಂದೂಗಳ ನಂಬಿಕೆ

ಇಂಥ ಪವಿತ್ರವಾದ ಹಸುವಿನ ವಿಗ್ರಹಕ್ಕೆ ವಾಸ್ತು ಶಾಸ್ತ್ರ(Vastu Shastra)ದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಸಂತೋಷ ಮತ್ತು ಸಮೃದ್ಧಿಯ ಮಾನದಂಡವಾಗಿ ಅವುಗಳನ್ನು ಮನೆಯಲ್ಲಿ ಇರಿಸಲಾಗುತ್ತದೆ. ಅದನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸದಾ ಸಂತೋಷ ಉಳಿಯುತ್ತದೆ. ಅದೃಷ್ಟ ಮತ್ತು ಪ್ರೀತಿ ಕುಟುಂಬದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ.

ಕಾಮಧೇನುವಿನ ಪ್ರತಿಮೆ
ದೈವಿಕ ಹಸುವಾದ ಕಾಮಧೇನುವಿನಲ್ಲಿ ಅನೇಕ ಶಕ್ತಿಗಳು ಕುಳಿತಿವೆ. ಮಂಥನದ ಸಮಯದಲ್ಲಿ ಕಾಮಧೇನು ಹಸು ಹುಟ್ಟಿದಾಗ ಅದನ್ನು ಯಾರು ಸಾಕುತ್ತಾರೆ ಎಂಬ ಚರ್ಚೆ ದೇವತೆಗಳಲ್ಲಿ ಉಂಟಾಯಿತು. ನಂತರ  ಪರಶುರಾಮನ ತಂದೆ ಜಮದಗ್ನಿಯ ಬಳಿ ಅದನ್ನು ಬಿಡಲಾಯಿತು. ಕೆಲವು ದಿನಗಳ ಕಾಲ ದೇವತೆಗಳ ಬಳಿ ಇದ್ದ ಕಾಮಧೇನುವನ್ನು ದೇವತೆಗಳ ರಾಜ ಇಂದ್ರನಿಗೆ ನೀಡಲಾಗುತ್ತದೆ. 

ನಿಮ್ಮ ವಿವಾಹ ತಡವಾಗುತ್ತಿದೆಯೇ? ಕಾರಣಗಳಿಲ್ಲಿವೆ..

ಈ ದಿಕ್ಕಿಗೆ ಇರಿಸಿ
ಕಾಮಧೇನು ಹಸುವಿನ ವಿಗ್ರಹವನ್ನು ಮನೆಯಲ್ಲಿಡುವಾಗ ಸರಿಯಾದ ದಿಕ್ಕಿನಲ್ಲಿ(direction) ಇಡದಿದ್ದರೆ, ಅದು ವಿರುದ್ಧ ಪರಿಣಾಮವನ್ನು ಬೀರುತ್ತದೆ. ಕಾಮಧೇನು ಹಸುವಿನ ವಿಗ್ರಹವನ್ನು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡಿದರೆ ವಾಸ್ತು ದೋಷಗಳು ಬರುವುದಿಲ್ಲ. ಮನೆಯಲ್ಲಿ ಶಾಂತಿ ನೆಲೆಸಲಿದೆ. 

ಹೀಗಿರಲಿ ವಿಗ್ರಹ
ಮನೆಯಲ್ಲಿ ಹಸುವಿನ ಜೊತೆ ಕರುವಿನ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿದ್ದರೆ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ರೋಗದಿಂದ ಮುಕ್ತಿ ಸಿಕ್ಕಿ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ, ಕಾಮಧೇನು ಹಸುವಿನ ಜೊತೆ ಕರುವೂ ಇರುವಂಥ ವಿಗ್ರಹವನ್ನು ಮನೆಗೆ ತನ್ನಿ. 

ಇಲ್ಲಿ ಇರಿಸಿ
ಸಾಮಾನ್ಯವಾಗಿ ಕಾಮಧೇನು ಗೋವಿನ ವಿಗ್ರಹವನ್ನು ಜನರು ಪೂಜಾ ಸ್ಥಳ(Pooja room)ದಲ್ಲಿ ಇಡುತ್ತಾರೆ. ಇದು ಉತ್ತಮ ಅಭ್ಯಾಸ. ಇದರ ಹೊರತಾಗಿ, ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಈ ವಿಗ್ರಹವನ್ನು ಇಡಬಹುದು. ಇದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ವಿಗ್ರಹ ಸಾಧ್ಯವಾಗದಿದ್ದರೆ ಕಾಮಧೇನು ತಾಯಿ ಹಾಗೂ ಕರು ನಂದಿನಿ ಇರುವ ಫೋಟೋವನ್ನಾದರೂ ಮನೆಯಲ್ಲಿರಿಸಬೇಕು. 

ಹಾವು ಕಚ್ಚೋ ಕನಸು ನಿಮ್ಮ ಎಚ್ಚರಿಕೆ ಗಂಟೆ! ಇಗ್ನೋರ್ ಮಾಡ್ಬೇಡಿ..

ಈ ರೀತಿಯ ವಿಗ್ರಹವನ್ನು ಮನೆಗೆ ತನ್ನಿ
ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಮಧೇನು ಗೋವಿನ ವಿಗ್ರಹವನ್ನು ಇಡುತ್ತಾರೆ. ಏಕೆಂದರೆ ಬೆಳ್ಳಿ ಅಥವಾ ಬಂಗಾರದ ವಿಗ್ರಹವನ್ನು ಎಲ್ಲರೂ ಮನೆಯಲ್ಲಿ ಇಡಲು ಸಾಧ್ಯವಿಲ್ಲ. ನೀವು ಬಯಸಿದರೆ, ನೀವು ತಾಮ್ರದ ವಿಗ್ರಹವನ್ನು ಅಥವಾ ಹಿತ್ತಾಳೆಯ ವಿಗ್ರಹವನ್ನು ಸಹ ಇರಿಸಬಹುದು. ಇದು ಸಹ ಸಾಧ್ಯವಾಗದಿದ್ದರೆ, ನೀವು ಸರಳವಾದ ಫೋಟೋ ಇರಿಸಬಹುದು. ನೀವು ಯಾವ ರೂಪದಲ್ಲಿಟ್ಟರೂ ಅದು ಒಳ್ಳೆಯತನದ ಸಂಕೇತವೇ ಆಗಿದೆ. ಮನೆಯಲ್ಲಿ ಇಡುವುದರಿಂದ ಮನೆಯ ಸರ್ವ ಸದಸ್ಯರ ಬಯಕೆಗಳು ಈಡೇರುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!