ಬೇವಿನ ಮರವು ಅನೇಕ ಔಷಧೀಯ ಮತ್ತು ಆಯುರ್ವೇದ ಗುಣಗಳನ್ನು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ದೈವಿಕ ಶಕ್ತಿಗಳ ನೆಲೆಯಾಗಿದೆ. ಬೇವನ್ನು ಬಳಸಿ ಶನಿ ದೋಷ, ಪಿತೃ ದೋಷದಿಂದ ಮುಕ್ತರಾಗಲು ಸಾಧ್ಯವಿದೆ.
ಬೇವು(neem) ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮರ. ರುಚಿ ಕಹಿಯಾದರೂ ದೇಹಕ್ಕೆ ಸಿಹಿ ಫಲಿತಾಂಶಗಳನ್ನು ನೀಡುತ್ತದೆ. ತೀವ್ರತರದ ಬರಗಾಲದಲ್ಲೂ ಬದುಕಿ ಜನರ ಬದುಕಿಗೆ ಸಾಧ್ಯಾವಾದಷ್ಟು ರೀತಿಯಲ್ಲಿ ನೆರವಾಗುವ ಮರ. ಬಡವರ ಪಾಲಿನ ಸಾಗುವಾನಿ ಎಂಬ ವಿಶೇಷಣ ಬೇವಿನ ಮರಕ್ಕಿದೆ. ಇದರ ತೊಗಟೆಯಿಂದ ಬರುವ , , ಉಪಯೋಗವಾಗುತ್ತದೆ. ಬೀಜದ ಹಿಂಡಿಯು ಉತ್ಕೃಷ್ಟ ಗೊಬ್ಬರವಾಗಿದೆ. ಬೇವಿನ ಎಳೆಯ ಕಡ್ಡಿ ಹಲ್ಲುಜ್ಜಲು ಬಳಸಲಾಗುತ್ತದೆ.
ನಮ್ಮ ಧಾರ್ಮಿಕ ಗ್ರಂಥಗಳಲ್ಲಿ, ಮರಗಳು ಮತ್ತು ಸಸ್ಯಗಳು ಸೇರಿದಂತೆ ಪ್ರಕೃತಿಯ ಎಲ್ಲಾ ಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅವುಗಳಲ್ಲಿ ಬೇವಿಗೆ ವಿಶೇಷ ಪ್ರಾಮುಖ್ಯತೆ ಇದೆ.
undefined
ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಜ್ಯೋತಿಷ್ಯ ಶಾಸ್ತ್ರ(Astrology)ದಲ್ಲಿ, ಈ ಮರವನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೇವಿನ ಮರವು ಶನಿ ಮತ್ತು ಕೇತುಗೆ ಸಂಬಂಧಿಸಿದೆ. ಈ ಎರಡು ಗ್ರಹದೋಷಗಳಲ್ಲಿ ಯಾವುದಾದರೂ ಒಂದು ಗ್ರಹ ದೋಷವು ನಿಮ್ಮ ಮೇಲೆ ಇದ್ದಲ್ಲಿ ಅಲ್ಲಿ ಬೇವಿನ ಮರವನ್ನು ನೆಟ್ಟು ಪೂಜಿಸುವುದರಿಂದ ಪರಿಹಾರ ದೊರೆಯುತ್ತದೆ. ಶನಿದೇವನ ಆಶೀರ್ವಾದ ಪಡೆಯಲು ಮತ್ತು ಪಿತೃದೋಷದಿಂದ ಮುಕ್ತಿ ಪಡೆಯಲು ಬೇವಿನ ಸೊಪ್ಪನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ.
ಶನಿ ದೋಷ(Saturn Dosh) ಪರಿಹಾರ
ಶನಿ ದೋಷದಿಂದ ಪರಿಹಾರ ಪಡೆಯಲು, ಬೇವಿನ ಮರದಿಂದ ಮಾಡಿದ ಮಾಲೆಯನ್ನು ಧರಿಸಿ. ಅಲ್ಲದೆ, ಬೇವಿನ ಮರದ ತೊಗಟೆಗಳನ್ನು ಹಾಕಿ ಹವನ ಮಾಡುವುದರಿಂದ ಶನಿದೇವನ ಕೋಪವು ಕಡಿಮೆಯಾಗುತ್ತದೆ ಮತ್ತು ಅವನು ಪ್ರಸನ್ನನಾಗುತ್ತಾನೆ. ಹೀಗೆ ಹವನ ಮಾಡಿಸಿದವರಿಗೆ ವಿಶೇಷ ಅನುಗ್ರಹವನ್ನು ನೀಡುತ್ತಾನೆ. ಮತ್ತು ಶನಿಯ ಅಶುಭ ಪರಿಣಾಮವಿಲ್ಲ.
Vastu Tips : ಧನ ಹಾನಿಗೆ ಕಾರಣವಾಗುತ್ತೆ ಮನೆಯಲ್ಲಿರುವ ಇನ್ವರ್ಟರ್
ಕೇತು ದೋಷ(Ketu Dosh)ಕ್ಕೆ
ಇದಲ್ಲದೇ ನೀರಿನಲ್ಲಿ ಬೇವಿನ ಸೊಪ್ಪನ್ನು ಬೆರೆಸಿ ಸ್ನಾನ ಮಾಡುವುದರಿಂದ ಕೇತುವಿನ ದೋಷಗಳು ನಿವಾರಣೆಯಾಗುತ್ತವೆ.
ಬೇವು ಪಿತೃ ದೋಷ(Pitru dosh)ವನ್ನು ಹೋಗಲಾಡಿಸುತ್ತದೆ!
ಬೇವಿನ ಮರವು ದೈವಿಕ ಶಕ್ತಿಗಳಿಗೆ ನೆಲೆಯಾಗಿದೆ. ಬೇವಿನ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಕು. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಇದರೊಂದಿಗೆ ಪೂರ್ವಜರ ಕೃಪೆಯೂ ಲಭಿಸಿ ಪಿತೃದೋಷ ನಿವಾರಣೆಯಾಗುತ್ತದೆ.
ಭಾನುವಾರ ಬೇವಿನ ಮರಕ್ಕೆ ನೀರು ಹಾಕಿ
ಭಾನುವಾರ(Sunday)ದಂದು ಸೂರ್ಯೋದಯದ ಸಮಯದಲ್ಲಿ ಬೇವಿನ ಮರಕ್ಕೆ ನೀರು ಕೊಡುವುದರಿಂದ ಜಾತಕದಲ್ಲಿ ಅಶುಭ ಫಲ ನೀಡುವ ಗ್ರಹಗಳು ಸಮಾಧಾನಗೊಳ್ಳುತ್ತವೆ.
ನಿಮ್ಮ ವಿವಾಹ ತಡವಾಗುತ್ತಿದೆಯೇ? ಕಾರಣಗಳಿಲ್ಲಿವೆ..
ವಾಸ್ತು ದೋಷ ಪರಿಹಾರ
ಮನೆಗೆ ಉತ್ತಮವಾದ ವಾಸ್ತು ಮರಗಳಲ್ಲಿ ಬೇವಿನ ಮರವೂ ಒಂದು. ಭಾರತದ ಅನೇಕ ಸ್ಥಳಗಳಲ್ಲಿ ಬೇವಿನ ಮರವನ್ನು ಮಾ ದುರ್ಗೆಯ ರೂಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೇವಿನ ಗಿಡ ಇಲ್ಲವೇ ಮರವಿರುವುದರಿಂದ ಸಂತೋಷ ಮತ್ತು ಧನಾತ್ಮಕತೆ ಹೆಚ್ಚುತ್ತದೆ. ಮನೆಗೆ ಉತ್ತಮ ಗಾಳಿಯನ್ನು ಪಸರಿಸುತ್ತದೆ. ಜೊತೆಗೆ ಇದೊಂದು ಶುಭ ಸಸ್ಯವಾಗಿಯೂ ಗುರುತಿಸಿಕೊಂಡಿದೆ. ವಾಸ್ತು ವಿಷಯವಾಗಿ ಬೇವಿನ ಮ್ಯಾಜಿಕ್ ನೋಡಬೇಕೆಂದರೆ ಇದನ್ನು ಮನೆಯ ವಾಯುವ್ಯ ಮೂಲೆ(Northwest corner)ಯಲ್ಲಿ ನೆಡಿ. ಆಗಾಗ ಕೆಲ ಬೇವಿನ ಎಲೆಗಳನ್ನು ಮನೆಯಲ್ಲಿ ಸುಟ್ಟು ಅದರ ಹೊಗೆ ಇಡೀ ಮನೆ ಆವರಿಸುವಂತೆ ಮಾಡಿ. ಇದರಿಂದಲೂ ವಾಸ್ತು ದೋಷ ನಿವಾರಣೆ ಸಾಧ್ಯವಾಗುವುದು.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.