ಮನೆಮುಂದೆ ತುಳಸಿಯನ್ನು ಬೆಳೆಸಿ ಪೂಜೆ ಮಾಡುವುದು ಸಂಪ್ರದಾಯ. ತುಳಸಿಯೊಂದಿಗೆ ಕಪ್ಪು ದತ್ತೂರ ಗಿಡವನ್ನೂ ಬೆಳೆಸಿ ಪೂಜಿಸಿದರೆ ಲಕ್ಷ್ಮೀ ದೇವಿಯ ಕಟಾಕ್ಷವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಕಪ್ಪು ದತ್ತೂರ ಗಿಡ ಧನಾಕರ್ಷಣೆ ಮಾಡುತ್ತದೆ.
ಹಿಂದು (Hindu) ಧರ್ಮದಲ್ಲಿ ತುಳಸಿ (Tulsi) ಗಿಡಕ್ಕೆ ಅತ್ಯಂತ ಪವಿತ್ರ (Sacred) ಸ್ಥಾನವಿದೆ. ಬೇರ್ಯಾವ ಗಿಡವನ್ನು ನೆಡಲಾಗದವರು ಕೂಡ ತುಳಸಿಯನ್ನು ಮನೆಯ ಎದುರು ನೆಟ್ಟು ಬೆಳೆಸುತ್ತಾರೆ. ತುಳಸಿ ಗಿಡದಲ್ಲಿ ಲಕ್ಷ್ಮೀ (Goddess Lakshmi) ದೇವಿ ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ. ಹೀಗಾಗಿ, ಮನೆಯಲ್ಲಿ ತುಳಸಿ ಗಿಡ ಇರುವುದನ್ನು ಶುಭಕಾರಕ ಎಂದು ಭಾವಿಸಲಾಗುತ್ತದೆ. ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮೀ ದೇವಿಯ ಜತೆಗೆ ವಿಷ್ಣುದೇವರ ಕೃಪೆಯೂ ಲಭಿಸುತ್ತದೆ ಎನ್ನುವ ನಂಬಿಕೆಯೂ ಜನಮಾನಸದಲ್ಲಿ ಬಲವಾಗಿ ಬೇರೂರಿದೆ.
ನಿಮಗೆ ಗೊತ್ತೇ? ತುಳಸಿಯಂತೆಯೇ ಮನೆಯಲ್ಲಿ ಇರಬೇಕಾದ ಇನ್ನೂ ಎರಡು ಗಿಡಗಳಿವೆ. ತುಳಸಿ ಜತೆಗೆ ಅವುಗಳನ್ನೂ ನೆಡುವುದರಿಂದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಪೂಜೆ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಅವು, ಶಮೀ ಗಿಡ (Shami) ಮತ್ತು ಕಪ್ಪು ದತ್ತೂರ ಗಿಡ (Black Dhatura). ಇದರಿಂದ ಹಣಕಾಸಿಗೆ (Financial) ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಕಪ್ಪು ದತ್ತೂರ ಗಿಡದಲ್ಲಿ ಭಗವಾನ್ ಶಿವ (Shiva) ನೆಲೆಸುತ್ತಾನೆ ಎನ್ನುವ ಪ್ರತೀತಿ ಇದೆ.
ವಾಸ್ತುಶಾಸ್ತ್ರದ (Vastu) ಪ್ರಕಾರ, ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಆ ಮನೆ ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಹಾಗೆಯೇ, ನೌಕರಿ (Job) ಮತ್ತು ವ್ಯಾಪಾರ, ವಹಿವಾಟುಗಳಲ್ಲೂ (Business) ಉತ್ತಮ ಪ್ರಗತಿ (Development) ಸಾಧ್ಯವಾಗುತ್ತದೆ. ತುಳಸಿಯೊಂದಿಗೆ ಕಪ್ಪು ದತ್ತೂರ ಗಿಡವನ್ನು ನೆಡುವುದು ತುಂಬ ಉತ್ತಮ. ಇದರಿಂದ ಅದರ ಫಲ ಹಲವಾರು ಪಟ್ಟು ಹೆಚ್ಚಾಗುತ್ತದೆ. ಮಾತೆ ಲಕ್ಷ್ಮೀ ಎಂದರೆ ಭಗವಾನ್ ವಿಷ್ಣುವಿಗೆ ಅತಿ ಪ್ರಿಯ. ತುಳಸಿಯ ಗಿಡದ ಕಾಂಡದಲ್ಲಿ ಬ್ರಹ್ಮ ದೇವರು ವಾಸವಾಗಿರುತ್ತಾರೆ. ಹೀಗಾಗಿ, ತುಳಸಿ ಜತೆಗೆ ಕಪ್ಪು ದತ್ತೂರ ಗಿಡವನ್ನೂ ನೆಟ್ಟು ಜತೆಗಾಗಿ ಪೂಜಿಸುವುದರಿಂದ ಫಲ ಹೆಚ್ಚು. ಬ್ರಹ್ಮ, ವಿಷ್ಣು, ಮಹೇಶ್ವರ ಮೂವರನ್ನೂ ಪೂಜಿಸಿದಂತಾಗುತ್ತದೆ. ಹೀಗೆ ಪೂಜೆ ಮಾಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ. ಕುಟುಂಬದಲ್ಲಿ ಸುಖ ನೆಲೆಸಿ ಸಮೃದ್ಧಿ ಉಂಟಾಗುತ್ತದೆ.
ತುಳಸಿ ಬೀಜಿದಿಂದಲೂ ಇದೆ ಹಲವು ಉಪಯೋಗ
ತಾವು ಪಿತೃ ದೋಷದಿಂದ ಮುಕ್ತಿ ಬಯಸುತ್ತೀರಿ ಎಂದಾದರೆ ಹೀಗೆ ಮಾಡಿ. ಬೆಳಗ್ಗೆ ಸ್ನಾನ (Bath) ಮಾಡಿದ ಬಳಿಕ, ಶುದ್ಧವಾದ ಜಲಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ತುಳಸಿ ಹಾಗೂ ಕಪ್ಪು ದತ್ತೂರ ಗಿಡಕ್ಕೆ ಎರೆಯಬೇಕು.
ಹಾಗೆಯೇ ಶಮೀ ವೃಕ್ಷದ ಪೂಜೆ ಮಾಡುವುದರಿಂದ ಶನಿಯ (Saturn) ಪ್ರಭಾವ ಕಡಿಮೆ ಆಗುತ್ತದೆ. ಶಮೀ ಗಿಡವನ್ನು ಮನೆಯ ಬಳಿ ನೆಡುವುದರಿಂದ ವಾಮಾಚಾರದಂತಹ ನಕಾರಾತ್ಮಕ (Negative) ಶಕ್ತಿಯ ದುಷ್ಟಪರಿಣಾಗಳು ಮನೆ ಹಾಗೂ ಮನುಷ್ಯದ ಮೇಲೆ ಉಂಟಾಗುವುದಿಲ್ಲ.
undefined
ಉಮ್ಮತ್ತಿ ಜಾತಿಯ ಗಿಡ
ಕಪ್ಪು ದತ್ತೂರ ಗಿಡಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಈ ಗಿಡದಲ್ಲಿ ಗಾಢ ನೇರಳೆ ಬಣ್ಣದ ಹೊರಮೈ ಹಾಗೂ ಬಿಳಿಭಾಗದ ಒಳಮೈ ಹೊಂದಿರುವ ದೊಡ್ಡ ಆಕಾರದ ಹೂವುಗಳು ಬಿಡುತ್ತವೆ. ದತ್ತಾತ್ರೇಯ ಗಿಡವೆಂದು ಸಹ ಕೆಲವು ಭಾಗಗಳಲ್ಲಿ ಇದನ್ನು ಕರೆಯಲಾಗುತ್ತದೆ. ಇದು ಉಮ್ಮತ್ತಿಯ ಜಾತಿಗೇ ಸೇರಿರುವ ಗಿಡವಾಗಿದ್ದು, ಉಮ್ಮತ್ತಿಯಲ್ಲಿ ಬಿಳಿಯದಾದ ಹೂವು ಬಿಡುತ್ತದೆ. ಇದರಲ್ಲಿ ನೇರಳೆ ಹೂವಿರುತ್ತದೆ. ಈ ಗಿಡವನ್ನು ಮನೆಯ ಎದುರು ಬೆಳೆಸುವುದರಿಂದ ಯಾರದ್ದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಖರ್ಚು ಹೆಚ್ಚಾಗಿ ಆದಾಯ ಕಡಿಮೆ ಆಗುವುದನ್ನು ಇದು ತಪ್ಪಿಸುತ್ತದೆ ಎನ್ನುವ ನಂಬಿಕೆ ಇದೆ. ಹಲವು ವ್ಯಾಪಾರಸ್ಥರು ಈ ಗಿಡದ ಬೇರುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುತ್ತಾರೆ. ಏಕೆಂದರೆ, ಧನಾಕರ್ಷಣೆ ಆಗುತ್ತದೆ ಎನ್ನುವ ನಂಬಿಕೆ ಬೇರೂರಿದೆ. ಈ ಗಿಡದ ಬೇರು ಅಥವಾ ಕಾಂಡವನ್ನು ತಾಯತದಂತೆ ಮಾಡಿ ಕಟ್ಟಿಕೊಂಡರೆ ಆ ವ್ಯಕ್ತಿಗೆ ದೃಷ್ಟಿದೋಷ ಆಗುವುದಿಲ್ಲ ಎನ್ನಲಾಗುತ್ತದೆ. ಅಲ್ಲದೆ, ಇದರಲ್ಲಿ ಔಷಧೀಯ (Medicine) ಗುಣ ಅಪಾರ. ಹಲವು ರೀತಿಯ ಚರ್ಮರೋಗಗಳಿಗೆ (Skin Problem) ಇದು ರಾಮಬಾಣ.
ಲಕ್ಷ್ಮಿ ಕೃಪ ಕಟಾಕ್ಷಕ್ಕೆ ಗೋಧಿ ಹಿಟ್ಟಿನ ಪರಿಹಾರ