ಈ ದಿನಗಳಲ್ಲಿ ನಾವು ಎಚ್ಚರಿಕೆ ವಹಿಸಬೇಕಾದ ಹಲವು ವಿಚಾರಗಳಿವೆ. ಅವುಗಳಲ್ಲಿ ಒಂದು ಕೊರೋನಾ ಸೋಂಕು ನಮ್ಮ ಮನೆಯೊಳಗೆ ಪ್ರವೇಶಿಸಬಹುದಾ ಅನ್ನುವುದು. ನಮ್ಮ ಹಿಂದಿನವರು, ದುಷ್ಡ ಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆಯಲು ಅನೇಕ ವಿಧಾನಗಳನ್ನು ಕಂಡುಕೊಂಡಿದ್ದರು. ಅವೆಲ್ಲವೂ ಇಂದಿಗೂ ಅರ್ಥಪೂರ್ಣವಾಗಿವೆ.
ಈ ದಿನಗಳಲ್ಲಿ ನಾವು ಎಚ್ಚರಿಕೆ ವಹಿಸಬೇಕಾದ ಹಲವು ವಿಚಾರಗಳಿವೆ. ಅವುಗಳಲ್ಲಿ ಒಂದು ಕೊರೋನಾ ಸೋಂಕು ನಮ್ಮ ಮನೆಯೊಳಗೆ ಪ್ರವೇಶಿಸಬಹುದಾ ಅನ್ನುವುದು. ನಮ್ಮ ಹಿಂದಿನವರು, ದುಷ್ಡ ಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆಯಲು ಅನೇಕ ವಿಧಾನಗಳನ್ನು ಕಂಡುಕೊಂಡಿದ್ದರು. ಅವೆಲ್ಲವೂ ಇಂದಿಗೂ ಅರ್ಥಪೂರ್ಣವಾಗಿವೆ.
- ನಿಮ್ಮ ಮನೆ ಮುಖ್ಯ ರಸ್ತೆಯ ಪಕ್ಕದಲ್ಲಿದ್ದರೆ ಅಥವಾ ಮುಖ್ಯಬಾಗಿಲು ಮುಖ್ಯ ರಸ್ತೆಯ ಕಡೆಗೆ ಮುಖ ಮಾಡಿದ್ದರೆ ಸ್ವಲ್ಪ ರಿಸ್ಕ್ ಇದೆ. ಮುಖ್ಯದ್ವಾರಕ್ಕೆ ಇನ್ನೊಂದು ಕಬ್ಬಿಣದ ಕಟಾಂಜನ ಅಳವಡಿಸಬಹುದು. ಮುಖ್ಯ ದ್ವಾರದ ಪಕ್ಕದಲ್ಲೇ ಕಿಚನ್ ಇರಬಾರದು. ಬಾಗಿಲು ಹಾಲ್‌ಗೆ ತೆರೆದುಕೊಂಡು, ಪ್ಯಾಸೇಜ್ ಮೂಲಕ ಕಿಚನ್, ಬಾತ್‌ರೂಂಗಳಿಗೆ ಹೋಗುವ ಸೌಲಭ್ಯ ಇದ್ದರೆ ಓಕೆ. ಕಿಚನ್ ಅಥವಾ ರೂಮಿನ ಕಿಟಕಿಗಳು ರಸ್ತೆಯ ಕಡೆಗೆ ತೆರೆದಿದ್ದರೆ ಅವನ್ನು ಮುಚ್ಚಿಬಿಡಿ. ಫಸ್ಟ್ ಫ್ಲೋರಿನ ಕಿಟಕಿಗಳಾದರೆ ತೆರೆದಿಡಬಹುದು.
undefined
- ಮನೆಗೆ ಬರಲು ಎರಡು ಬಾಗಿಲುಗಳಿದ್ದರೆ ಒಂದನ್ನು ಭದ್ರವಾಗಿ ಅಗುಳಿ ಹಾಕಿಡಿ. ಸದ್ಯ ತೆರೆಯಲು ಹೋಗಬೇಡಿ.
- ಮನೆಯ ಎದುರು ಯಾವ ಮರಗಿಡಗಳಿವೆ ಗಮನಿಸಿ. ಹೊಂಗೆ ನೇರಳೆ ಅತ್ತಿ ಬೇವು ಇತ್ಯಾದಿಗಳು ಆರೋಗ್ಯಕರ. ಮಾವು ಆಲ ಜಾಲಿ ಇತ್ಯಾದಿಗಳು ಅಷ್ಟು ಒಳ್ಳೆಯದಲ್ಲ. ಇವುಗಳಿದ್ದರೆ ಇವುಗಳ ನೆಗೆಟಿವ್ ಪರಿಣಾಮ ಬ್ಯಾಲೆನ್ಸ್ ಮಾಡುವ ಅತ್ತಿ ನೇರಳೆಯಂಥ ಇನ್ನೊಂದು ಗಿಡವನ್ನು ಹಚ್ಚಬಹುದು.
ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು ...
- ಮನೆಯ ಎದುರು ಬಾಗಿಲು ಮುಂದೆ ತುಳಸಿ ಗಿಡ ಇಡುವುದು ಕಡ್ಡಾಯ. ಇದು ಸೋಂಕುರೋಧಕ, ಆರೋಗ್ಯಕಾರಿ. ಹೊರಗಿಂದ ಮನೆ ಸೇರುವ ಮೊದಲು ಒಮ್ಮೆ ತುಳಸಿ ಗಿಡದ ಮೇಲಿನ ಗಾಳಿಯನ್ನು ದೀರ್ಘವಾಗಿ ಆಘ್ರಾಣಿಸಿ.
- ಮನೆಯೊಳಗೆ ಬೆಳಕು ಬೀಳುವ ಜಾಗದಲ್ಲಿ ಕೆಲವು ಆರೋಗ್ಯಕಾರಿ ಮೂಲಿಕೆ ಒಳಾಂಗಣ ಸಸ್ಯಗಳನ್ನು ಪಾಟ್‌ಗಳಲ್ಲಿ ಬಳಸಿ. ಉದಾಹರಣೆಗೆ ಅಲೋವೆರಾ, ಸಾಂಬ್ರಾಣಿ, ರೋಸ್‌ಮೇರಿ, ಅಮೃತಬಳ್ಳಿ ಇತ್ಯಾದಿ. ಇವು ಮನೆಯೊಳಗಿನ ವಾಯು ಮಾಲಿನ್ಯವನ್ನು ತಗ್ಗಿಸಿ ಗಾಳಿಯನ್ನು ಶುದ್ಧೀಕರಿಸುತ್ತವೆ.
- ಹೊರಗಿನಿಂದ ಬಂದ ಅದೇ ದಿರಿಸಿನಲ್ಲೇ ಮನೆಯೆಲ್ಲ ಓಡಾಡದಿರಲು ಬಾಗಿಲ ಬಳಿ ಒಂದು ಬಕೆಟ್ ಇಟ್ಟುಕೊಳ್ಳಿ. ಮೇಲಿನ ಬಟ್ಟೆಗಳನ್ಬು ತೆಗೆದು ಅದಕ್ಕೆ ಹಾಕಿ, ಬಳಿಕ ತೊಳೆಯಿರಿ.
- ನಿಮ್ಮ ಮನೆಯ ಮುಂಬಾಗಿಲು ದಕ್ಷಿಣಕ್ಕೆ ಮುಖ ಮಾಡಿದ್ದರೆ (ಇರಬಾರದು) ಆಗ ರಿಸ್ಕ್ ಇದೆ. ಆದರೆ ಮೇಲೆ ಹೇಳಿದ ಕ್ರಮಗಳು ಹಾಗೂ ವಾಸ್ತುಯಂತ್ರಗಳ ಮೂಲಕ ಇದನ್ನು ನಿವಾರಿಸಿಕೊಳ್ಳಬಹುದು. ದಕ್ಷಿಣಕ್ಕೆ ಮುಂಬಾಗಿಲಿದ್ದರೆ ಅದರ ನೆಗೆಟಿವ್ ಎಫೆಕ್ಟ್ ನಿವಾರಣೆಗೆ ಪೂರ್ವಕ್ಕೆ ಮುಖ ಮಾಡಿದ ಒಂದು ಬಾಗಿಲಾದರೂ ಮನೆಯಲ್ಲಿ ಇರಬೇಕು. ಹೆಬ್ಬಾಗಿಲಿಗೆ ಮಾಡುವ ಪೂಜಾಂಶದಲ್ಲಿ ಒಂದು ಪಾಲು ಈ ಬಾಗಿಲಿಗಿರಲಿ.
- ಕಿಚನ್ ಮತ್ತು ಬಾತ್‌ರೂಮ್‌ಗಳು ಎದುರುಬದುರಾಗಿರಬಾರದು. ಹಾಗೊಂದು ವೇಳೆ ಇದ್ದರೆ, ತೆಳುವಾದ ಪರದೆಯಿಂದ ಆದರೂ ಅದನ್ನು ಮರೆ ಮಾಡಿರಬೇಕು.
- ಅಡುಗೆ ಮನೆ ಆಗ್ನೇಯಕ್ಕೆ, ಬಾತ್‌ರೂಮು ದಕ್ಷಿಣಕ್ಕೆ, ಬೆಡ್‌ರೂಮು ಈಶಾನ್ಯಕ್ಕೆ, ಹಾಲ್ ವಾಯುವ್ಯ ಅಥವಾ ಪಶ್ಚಿಮ, ದೇವರ ಕೋಣೆ ನೈರುತ್ಯ ಅಥವಾ ಪೂರ್ವ, ಮುಂಬಾಗಿಲು ನೈರುತ್ಯ ಅಥವಾ ಪೂರ್ವಕ್ಕೆ ಇರುವುದು ಸರಿಯಾದ ಕ್ರಮ. ಇಂಥ ಮನೆಯಲ್ಲಿ ದುಷ್ಟ ಶಕ್ತಿಗಳು ಸುಲಭವಾಗಿ ಪ್ರವೇಶಿಸದಂತೆ ವಾಸ್ತು ಪುರುಷನು ಕಾವಲು ಕಾಯುತ್ತಾನೆ.
ಗ್ರಹಗಳ ದಿಕ್ಕನ್ನೇ ಬದಲಿಸುವ ಶಕ್ತಿ ಧ್ಯಾನಕ್ಕಿದೆ, ನೀವೂ ಹೀಗೆ ಮಾಡಿ ಆರೋಗ್ಯವಾಗಿರಿ... ...
- ಮುಖ್ಯವಾಗಿ ಮನೆಯಲ್ಲಿ ತಾತ- ಅಜ್ಜಿ ಇದ್ದರೆ ಅವರಿಗೆ ಸ್ವಚ್ಛ ಶುದ್ಧ ಗಾಳಿ ಬೆಳಕು ಓಡಾಡುವ ರೂಮು ಇರಬೇಕು. ಎಳೆಬಿಸಿಲು ಬೀಳುವ ದಿಕ್ಕಿನಲ್ಲಿದ್ದರೆ ಒಳ್ಳೆಯದು.
- ಶೀತಕಾರಿ ಮರಗಳು ಮನೆಗಿಂತ ಎತ್ತರ ಹೋಗಲು ಬಿಡಬಾರದು. ಉದಾ: ಹೊಂಗೆ.