ನಿಮ್ಮ ಮಕ್ಕಳು ವಾಸ್ತು ಪ್ರಕಾರ ಓದುತ್ತಿದ್ದಾರೆಯೇ?

By Suvarna News  |  First Published Apr 7, 2020, 7:11 PM IST

ಮಕ್ಕಳ ಓದು ಅವರ ಮುಂದಿನ ಜೀವನಕ್ಕೆ ಬುನಾದಿ ಎಂದೇ ಹೇಳಲಾಗುತ್ತದೆ. ಇಂಥದ್ದರಲ್ಲಿ ಮಕ್ಕಳು ಸರಿಯಾಗಿ ಓದುತ್ತಿಲ್ಲವೆಂದರೆ ಯಾವ ಪೋಷಕರಿಗೆ ತಾನೇ ದಿಗಿಲಾಗುವುದಿಲ್ಲ ಹೇಳಿ. ಹೀಗಿರುವಾಗ ಅನೇಕ ಹರಕೆಗಳನ್ನೂ ಹೊತ್ತುಕೊಳ್ಳುವುದುಂಟು. ಆದರೆ, ದೈವೀಕೃಪೆಯ ಜೊತೆಜೊತೆ ನಿಮ್ಮ ಮನೆಯಲ್ಲಿ ಮಗು ಇರುವ ಕೊಠಡಿಯ ವಾಸ್ತುವೂ ಪರಿಗಣನೆಗೆ ಬರುತ್ತದೆ ಎಂಬುದನ್ನು ಮನಗಾಣಿ. ಅದರಲ್ಲಿ ಈ ಅಂಶಗಳಿಲ್ಲದಿದ್ದರೆ ಕೂಡಲೇ ಬದಲಾಯಿಸಿ ನೋಡಿ, ಅನುಕೂಲವಾಗಬಹುದು.


ನಿಮ್ಮ ಮಕ್ಕಳು ಏನೆಂದರೂ ಗಮನಕೊಟ್ಟು ಓದುತ್ತಿಲ್ಲವೆಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ಮಗುವಿನ ಓದಿಗೂ ವಾಸ್ತುವಿಗೂ ಏನು ಸಂಬಂಧ ಎಂದು ನೀವು ಭಾವಿಸಬಹುದು. ಆದರೆ, ಮಗುವಿನ ಪ್ರತಿಯೊಂದು ಚಟುವಟಿಕೆ ಹಿಂದೆ ಇದರ ಪ್ರಭಾವ ಇದೆ ಎನ್ನುತ್ತಾರೆ ತಜ್ಞರು.
 
ಎಲ್ಲ ಅಪ್ಪ- ಅಮ್ಮಂದಿರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಶಾಲೆಯಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಬೇಕು ಎಂಬ ಕನಸು ಇದ್ದೇ ಇರುತ್ತದೆ. ಆದರೆ, ಮನೆಯಲ್ಲಿ ಕಷ್ಟಪಟ್ಟೇ ಈ ಮಕ್ಕಳು ಓದಿದರೂ ಪರೀಕ್ಷೆಯಲ್ಲಿ ಮಾತ್ರ ಓದಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕ್ರಮೇಣ ಇದು ಮಗುವಿನ ಮನಸ್ಸಿನ ಮೇಲೂ ಪರಿಣಾಮ ಬೀರಿ ಓದಿನಿಂದ ಸಾಕಷ್ಟು ದೂರ ಸರಿಯುವ ಇಲ್ಲವೇ ಸಬೂಬು ಹೇಳುವ ಪರಿಪಾಠ ಶುರುವಾಗುತ್ತದೆ. 
ಈ ಎಲ್ಲ ಅಡೆತಡೆಗಳಿಗೆ ನಿಮ್ಮ ಮನೆಯಲ್ಲಿರುವ ವಾಸ್ತುವಿನಲ್ಲಿ ಕೆಲವು ಉಪಾಯಗಳು ಇವೆ. ಅದನ್ನು ಒಮ್ಮೆ ಪಾಲಿಸಿ ಪ್ರಯತ್ನಿಸಿ. ಆಗ ಶಿಕ್ಷಣ ಕ್ಷೇತ್ರದಲ್ಲಿ ಸಫಲತೆ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ: ಅಂದುಕೊಂಡಿದ್ದು ಕೈ ಹಿಡಿಯಲು ವಿಷ್ಣು ಸಹಸ್ರನಾಮ ಸಹಸ್ರ ಯೋಗ!
 
ಕೋಣೆ ಇರುವ ದಿಕ್ಕು
ಓದಿನಲ್ಲಿ ಮಕ್ಕಳು ಚುರುಕಾಗಿರಬೇಕೆಂದರೆ ಅವರು ಮಲಗುವ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಯಾವುದಾದರೂ ಒಂದು ದಿಕ್ಕಿನಲ್ಲಿರುವುದರಿಂದ ಸೂರ್ಯ, ಬುಧ ಮತ್ತು ಗುರು ಗ್ರಹದ ಕೃಪೆಗೆ ಪಾತ್ರರಾಗುತ್ತಾರೆ.
 
ಸೂರ್ಯ ರಶ್ಮಿ ತಾಕಲಿ
ಮುಂಜಾನೆಯ ಸೂರ್ಯನ ಕಿರಣ ನಿಮ್ಮ ಮಗುವಿನ ಕೊಠಡಿಯೊಳಗೆ ಬರುತ್ತದೆ ಎಂದಾದರೆ ಕಿಟಕಿ ಬಾಗಿಲನ್ನು ತೆರೆದಿಡಿ. ಆಗ ಆ ಸೂರ್ಯನ ಸಕಾರಾತ್ಮಕ ಶಕ್ತಿಯಿಂದ ಓದಿನಲ್ಲಿ ಲಾಭವಾಗುತ್ತದೆ.

ಸರಸ್ವತಿ ಭಾವಚಿತ್ರ
ನಿಮ್ಮ ಮಗು ಇರುವ ಸ್ಥಳದಲ್ಲಿ ಸರಸ್ವತಿಯ ಭಾವಚಿತ್ರ ಇದ್ದರೆ ಬಹಳ ಉತ್ತಮ. ಓದಲು ಶುರು ಮಾಡುವುದಕ್ಕಿಂತ ಮುಂಚಿತವಾಗಿ ಸರಸ್ವತಿಗೆ ನಮಸ್ಕರಿಸಿ ಪ್ರಾರಂಭಿಸುವ ಪರಿಪಾಠ ಬೆಳೆಸಿ. ಪ್ರಾತಃಕಾಲದಲ್ಲಿ ಸರಸ್ವತಿ ಮಂತ್ರವನ್ನು ಜಪಿಸಿದರೆ ಇನ್ನೂ ಒಳ್ಳೆಯದು.

ಇದನ್ನೂ ಓದಿ: ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಚಂಚಲತೆ ಓಡಿಸಲು ಹಸಿರು ಬಣ್ಣ
ಯಾವ ಮಕ್ಕಳಿಗೆ ಓದು ಎಂದ ತಕ್ಷಣ ಆಲಸಿತನ ಬರುತ್ತದೋ? ಅಥವಾ ಮನಸ್ಸಿನಲ್ಲಿ ಚಂಚಲತೆ ಮೂಡುತ್ತದೆಯೋ? ಅಂಥ ಮಕ್ಕಳ ಕೊಠಡಿಗೆ ಹಸಿರು ಬಣ್ಣ ಬಳಿದು ಪ್ರಯತ್ನಿಸಿ ನೋಡಿ. ಒಂದು ವೇಳೆ ಕೊಠಡಿಯು ಬಿಳಿ ಬಣ್ಣದಿಂದ ಕೂಡಿದ್ದರೆ ಮಕ್ಕಳಿಗೆ ಸದಾ ಸುಸ್ತಾದಂತೆ ಭಾಸವಾಗುತ್ತಿರುತ್ತದೆ ಎಂದು ಹೇಳಲಾಗುತ್ತದೆ.

Tap to resize

Latest Videos

ಇಂಥ ಛಾಯಾಚಿತ್ರ ಬೇಡ
ಮಕ್ಕಳ ಓದಿಗೆ ಸಂಬಂಧಪಡದ ಛಾಯಾಚಿತ್ರಗಳನ್ನು ಹಾಕದಿರುವುದು ಒಳಿತು. ತುಂಬಾ ಹಳೆಯ ಫೋಟೋಗಳಿದ್ದರೆ ತೆಗೆದುಬಿಡಿ. ನೀವು ಹಾಕುವ ಛಾಯಾಚಿತ್ರಗಳು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುತ್ತದೆ.
 
ಓದಿನ ಕೋಣೆಯಲ್ಲಿರಲಿ ಇಂಥ ಗಿಡ
ಓದಿನ ಕೋಣೆಯಲ್ಲಿ ಗಿಡಗಳನ್ನು ಇಡಬಹುದು. ಪೂರ್ವ ದಿಕ್ಕಿನಲ್ಲಿ ಕಿಟಕಿಯಿದ್ದರೆ ಅಂಥ ಕಡೆ ಮೊನಿಪ್ಲಾಂಟ್‌ಗಳಂತಹ ಗಿಡಗಳನ್ನು ಬೆಳೆಸಬಹುದು.

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

 ನೇರ ಕಿರಣ ಒಳ್ಳೇದಲ್ಲ
ಮಗು ಕೊಠಡಿಯಲ್ಲಿ ಓದುತ್ತಿರುವಾಗ ಸೂರ್ಯಕಿರಣಗಳು ನೇರವಾಗಿ ಪುಸ್ತಕದ ಮೇಲೆ ಬೀಳುವುದು ಒಳ್ಳೆಯದಲ್ಲ. ಕಿರಣಗಳು ಈ ರೀತಿ ಬೀಳದಂತೆ ಪರ್ಯಾಯ ಮಾರ್ಗವನ್ನು ಅನುಸರಿಸಬಹುದು.

"

click me!