ಮಗನ ಜೊತೆ ದೇವರಿದ್ದಾನೆ; ವೀಕೆಂಡ್ ವಿತ್ ರಮೇಶ್‌ನಲ್ಲಿ ಅವಿನಾಶ್- ಮಾಳವಿಕಾ ವಿಶೇಷಚೇತನ ಪುತ್ರ

Published : Apr 21, 2023, 03:50 PM IST
ಮಗನ ಜೊತೆ ದೇವರಿದ್ದಾನೆ; ವೀಕೆಂಡ್ ವಿತ್ ರಮೇಶ್‌ನಲ್ಲಿ ಅವಿನಾಶ್- ಮಾಳವಿಕಾ ವಿಶೇಷಚೇತನ ಪುತ್ರ

ಸಾರಾಂಶ

ವೀಕೆಂಡ್ ವಿತ್ ರಮೇಶದ ಸಾಧಕರ ಕುರ್ಚಿಯಲ್ಲಿ ಅವಿನಾಶ್. ಮೊದಲ ಸಲ ಮಗನನ್ನು ಜನರಿಗೆ ಪರಿಚಯಿಸಿಕೊಟ್ಟ ಜೋಡಿ....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಸಾಧಕರ ಕುರ್ಚಿಯಲ್ಲಿ ಈ ವೀಕೆಂಡ್ ನಟ ಅವಿನಾಶ್ ಆಗಮಿಸಲಿದ್ದಾರೆ. ರಂಗಭೂಮಿಯಿಂದ ಸಿನಿಮಾ ಜರ್ನಿ, ಪತ್ನಿ ಸಿಕ್ಕ ಗಳಿಗೆ ಹಾಗೂ ದೇವರು ಕೊಟ್ಟಿರುವ ಪುತ್ರನ ಬಗ್ಗೆ ಹೆಮ್ಮೆಯಿಂದ ಮಾತನಾಡುವ ನಟನ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ. ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ಪುತ್ರ ಮೊದಲ ಸಲ ವೇದಿಕೆ ಮೇಲೆ ಬರಲಿದ್ದಾರೆ. ಆತ ದೇವರ ಮಗ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಟ ಅವಿನಾಶ್ ಮತ್ತು ಮಾಳವಿಕಾರಿಗೆ ವಿಶೇಷಚೇತನ ಪುತ್ರ ಜನಿಸಿದ್ದಾನೆ. ಸಿಕ್ಕಾಪಟ್ಟೆ ಫೇರ್‌ ಆಂಟ್ ತುಂಟಾಟ ಮಾಡುವ ಮುದ್ದು ಮಗ ಮೊದಲ ಸಲ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾನೆ. ಮಗನ ಕೈ ಹಿಡಿದುಕೊಂಡು ಸ್ಟಾರ್ ದಂಪತಿ ವೇದಿಕೆ ಮೇಲೆ ಮಾತನಾಡುತ್ತಾರೆ. ಬಿಡುಗಡೆಯಾಗಿರುವ ಪ್ರೋಮೋ ವೈರಲ್ ಆಗುತ್ತಿದ್ದಂತೆ ಇಡೀ ಕುಟುಂಬ ಕರ್ನಾಟಕದ ಜನತೆ ಧೈರ್ಯ ಹೇಳಿದ್ದಾರೆ ಹಾಗೂ ಅವರ ಪರ ನಿಂತಿದ್ದಾರೆ.

ಪುತ್ರನಿಗೆ ಮನೆಯಲ್ಲಿಯೇ ಹೇರ್‌ ಕಟ್‌ ಮಾಡಿದ ಮಾಳವಿಕಾ- ಅವಿನಾಶ್!

 'ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಹೀಗೆ ಇದ್ದಾರೆ. ಒಬ್ಬೊಬ್ಬರು ಒಂದೊಂದು ತರ ಅವನ ಬಗ್ಗೆ ಮಾತನಾಡುವರು. ಕೆಲವೊಂದು ಸಲ ಅನಿಸುತ್ತದೆ ನಮ್ಮ ಮನೆಯಲ್ಲಿ ಯಾಕೆ ಹೀಗೆ? ಎಲ್ಲರ ಮನೆ ಮಕ್ಕಳು ಸ್ಕೂಲ್‌ಎ ಹೋಗುತ್ತಾರೆ ಅಲ್ವಾ. ಸೋಷಿಯಲ್ ಗ್ಯಾದರಿಂಗ್‌ಗಳಿಗೆ ಹೋಗೋದೇ ಇಲ್ಲ ನಾವು. ನಾವು ಎನು ಮಾತನಾಡಲಿ? ಅವಿನಾಶ್ ಮಗ ಕಣೋ ಇವರು...ಅಲ್ಲೊಂದು ದೇವಸ್ಥಾನವಿದೆ ಅಲ್ಲಿ ಹೋಗಿ ತಾಯಿತ ಕಟ್ಟಿಸಿ' ಎಂದು ಮಾಳವಿಕಾ ಮಾತನಾಡುತ್ತಾರೆ. ಆಗ 'ಈಗ ದೇವರು ನನ್ನ ಮಗನ ಜೊತೆಗಿದ್ದಾನೆ' ಎಂದು ಅವಿನಾಶ್ ಹೇಳುತ್ತಾರೆ.

ಕೆಲವು ತಿಂಗಳುಗಳ ಹಿಂದೆ ಮಾಳವಿಕಾ ಜೋಡಿ ನಂ 1 ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು.  ಗಣೇಶ ಹಬ್ಬದ ಪ್ರಯುಕ್ತ ನಡೆದ ಮಹಾ ಸಂಗಮದಲ್ಲಿ ಪುತ್ರನನ್ನು ನೆನೆದು ಭಾವುಕರಾಗಿದ್ದರು.ಡಿಕೆಡಿ ತಂಡದಲ್ಲಿ ವಿಶೇಷಚೇತನ ಸ್ಪರ್ಧಿ ಸಹನಾ. ಆಕೆ ಬದುಕಿ ಬೆಳೆದಿರುವ ಹಾದಿ ಬಗ್ಗೆ ಕೇಳಿ ಮಾಳವಿಕಾ ಅವಿನಾಶ್ ಭಾವುಕರಾಗಿದ್ದಾರೆ.

ಮೈಗ್ರೇನ್‌ನಿಂದ ನಟಿ ಮಾಳವಿಕಾ ಅವಿನಾಶ್‌ ಮುಖವೇ ಬದಲು; ಆಸ್ಪತ್ರೆಗೆ ದಾಖಲಾದ ನಟಿ

'ಎಲ್ಲಾ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟ ಬೇಕು ಅಂತ ಯಾವ ಮಗುನೂ ಹುಟ್ಟುವುದಿಲ್ಲ. ಇಂಥದೇ ಮನೆಯಲ್ಲಿ ಹುಟ್ಟಬೇಕು ಅಂತ ಹುಟ್ಟುವುದಿಲ್ಲ. ಇದೆಲ್ಲಾ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೀವಿ. ಇದರಲ್ಲಿ ವಿಶೇಷ ಏನಪ್ಪ ಅಂದ್ರೆ ಈ ಮಗುವಿನಲ್ಲಿರುವ ಪ್ರತಿಭೆ. ಭಗವಂತ ಯಾವುದನ್ನೋ ಕಿತ್ಕೊಂಡು ಇನ್ನೇನೋ ಕೊಡ್ತಾನೆ. ಅಪ್ಪ ಅಮ್ಮ ಅದೇ ಸಮಾಧಾನ ಅಂದುಕೊಳ್ಳುತ್ತೀನಿ. ಈ ಮಗುವಿನ ಕೇಳಿಸುವುದಿಲ್ಲ ಅಂದ್ರಿ ಅಲ್ವಾ? ನನ್ನ ಮಗನಿಗೆ ಕೇಳಿಸುತ್ತೆ ಆದರೆ ಮಾತನಾಡುವುದಕ್ಕೆ ಅಗೋಲ್ಲ. ನಡಿಗೆನೂ ಬಂದಿಲ್ಲ ಹೆಚ್ಚೇನೂ ಬಂದಿಲ್ಲ ಆದರೆ ಬರ್ತಾ ಇದೆ' ಎಂದು ಮಾಳವಿಕಾ ಮಾತನಾಡಿದ್ದರು.

'ಶಿವರಾಜ್‌ಕುಮಾರ್ ಮತ್ತು ಅರ್ಜುನ್‌ ಜನ್ಯ ಇದ್ದಾರಲ್ಲ ಇವರು ಮಹಾನುಭಾವರು. ಇವರೆಲ್ಲಾ ನಮ್ಮನ್ನ ರಂಜಿಸೋದು ದೊಡ್ಡ ವಿಷಯ ಏನಲ್ಲ ನನ್ನ ಮಗನ ತರದ ಮಕ್ಕಳನ್ನ ಜೀವನದಲ್ಲಿ ಇವರು ಪ್ರವೇಶ ಮಾಡಿದ್ದಾರೆ. ಈ ವಿಚಾರ ಅವರಿಗೆ ಗೊತ್ತಿಲ್ಲ. ಮಗನಿಗೆ 6 ಅಥವಾ 8ನೇ ತಿಂಗಳಿಗೆ ಸಂಗೀತದ ಅಭಿರುಚಿ ಬಂತು. ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಬಗ್ಗೆ ಬಹಳ ಅಭಿರುಚಿ ಇದೆ. ಅದರ ಜೊತೆಗೆ ಭಕ್ತಿ ಸಂಗೀತ ಕೂಡ. ಸಾಮಾನ್ಯವಾಗಿ ಸಂಜೆ 6 ಗಂಟೆ ಮೇಲೆ ನಾನು ಎಲ್ಲೂ ಇರುವುದಿಲ್ಲ ರಾತ್ರಿ 8.30 ಆದರೂ ಮನೆಯಲ್ಲಿ ಇರಬೇಕು ಆ ಕೊನೆಯ ಊಟ ಆದರೂ ಕೊಡಬೇಕು ಅಂತ. ಆ ರಾತ್ರಿ 8.30 ಇವರೆಲ್ಲಾ ನನ್ನ ಬದುಕಿನಲ್ಲಿ ಇರುತ್ತಾರೆ. ಅವನಿಗೆ ಊಟ ಮಾಡಿಸಲು ನಮಗೆ ಬೇರೆ ಮಾರ್ಗವಿಲ್ಲ ಚೋಟಾ ಭೀಮ್ ಅಥವಾ ಟಾಮ್ ಆಂಡ್ ಜರಿ ಅರ್ಥ ಆಗುವುದಿಲ್ಲ ಅವನಿಗೆ, ಅರ್ಥ ಆಗುವುದು ಸಂಗೀತ ಮಾತ್ರ. ಅಪ್ಪಾಜಿ ಅವರು ಹೋಗಿ ಯಾವ ಕಾಲ ಆಯ್ತು ಆದರೆ ನಮ್ಮ ಮನೆಯಲ್ಲಿ ಪ್ರತಿನಿತ್ಯಾ ಪ್ರತ್ಯಕ್ಷ ಅಗುತ್ತಾರೆ. ನಾಲ್ಕೈದು ಗ್ಯಾಜೆಟ್‌ನಲ್ಲಿ ಅವರದ್ದೆ ಹಾಡು. ಅವನಿಗೆ ಹಾಡಿನಲ್ಲಿ ಭಕ್ತಿ ಇರಬೇಕು. ಅರ್ಜುನ್ ಜನ್ಯ ಅವರು ನನಗೆ ಪರಿಚಯ ಅಗಿದ್ದೇ ನನ್ನ ಮಗನಿಂದ. ಕೆಲವರಗೆ ಗೊತ್ತಿದ್ದು ಪ್ರೀತಿ ತೋರಿಸುತ್ತಾರೆ ಆದರೆ ನಮ್ಮ ಮನೆಯಲ್ಲಿ ಅವರಿಗೆ ಗೊತ್ತಿಲ್ಲದೆ ಪ್ರೀತಿ ತೋರಿಸುತ್ತಾರೆ' ಎಂದಿದ್ದರ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?