ಜೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಒಂದು ಕಡೆ ಚಟಪಟ ಪಟಾಕಿ ಲೀಲಾ ಮತ್ತು ಮಿ ಪರ್ಫೆಕ್ಟ್ ಎಜೆ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಶುರುವಾಗಿದೆ. ಡಿವೋರ್ಸನ್ನೇ ಅಸ್ತ್ರವಾಗಿಟ್ಟುಕೊಂಡು ಇವರಿಬ್ಬರನ್ನು ಬೇರೆ ಮಾಡಲು ಸೊಸೆ ದುರ್ಗಾ ಪ್ಲಾನ್ ಮಾಡ್ತಿದ್ದಾಳೆ.
ಹಿಟ್ಲರ್ ಕಲ್ಯಾಣ (Hitler Kalyana) ಉತ್ತಮ ಟಿಆರ್‌ಪಿ (TRP) ಪಡೆಯುತ್ತಿರುವ ಸೀರಿಯಲ್. ಇಲ್ಲೀವರೆಗೆ ಮಿ ಪಫೆಕ್ಟ್ ಏಜೆ( AJ) ಮತ್ತು ಮಹಾ ಎಡವಟ್ಟು ಲೀಲಾ (Leela) ಕಿತ್ತಾಡ್ಕೊಂಡಿದ್ದು, ಜಗಳ, ಕದನ ಮಾಡ್ಕೊಂಡಿದ್ದೇ ಹೆಚ್ಚು. ಈಗ ಹಾವು ಮುಂಗುಸಿಯಂತಿದ್ದ ಇವರಿಬ್ಬರ ನಡುವೆ ಪ್ರೀತಿಯ ಕಚಗುಳಿ ಶುರುವಾಗ್ತಿದೆ. ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಳ್ಳುವ ಮೂಲಕ ಈ ಸೀರಿಯಲ್ ವೀಕ್ಷಕರಿಗೆ ಹತ್ತಿರವಾಗ್ತಿದೆ. ದಿನ ಕಳೆದಂತೆ ಏಜೆ ಲೀಲಾಗೆ ಹತ್ತಿರವಾಗುತ್ತಿದ್ದಾನೆ. ಅವಳ ಕಣ್ಣಿನ ಒಂದು ಮೆಚ್ಚುಗೆಗೆ ಆತ ಹಪಹಪಿಸುವ ಹಾಗಾಗಿದೆ. ಏಜೆಗೆ ಲೀಲಾ ಕಂಡರೆ ಪ್ರೀತಿ, ಇಷ್ಟವಾಗುತ್ತಿದೆ. ತನ್ನ ಇಷ್ಟಾರ್ಥವನ್ನೆಲ್ಲ ಎಜೆ ಅರ್ಥಮಾಡಿಕೊಂಡು ಅದನ್ನು ಪೂರ್ಣ ಮಾಡುತ್ತಿರುವುದನ್ನು ಕಂಡ ಲೀಲಾಗೆ ಖುಷಿಯಾಗಿದೆ. ಮಗ ಸೊಸೆ ದೂರಾಗುವ ಆತಂಕದಲ್ಲಿದ್ದ ಅಜ್ಜಿ ಎಜೆ ಮತ್ತು ಲೀಲಾ ನಡುವೆ ಪ್ರೇಮಾಂಕುರವಾಗುತ್ತಿರುವುದನ್ನು ಕಂಡು ಖುಷಿಯಲ್ಲಿದ್ದಾರೆ.
ಆದರೆ ಲೀಲಾ ತಾಯಿ ಕೌಸಲ್ಯ ಮಾಡಿದ ಒಂದು ಯಡವಟ್ಟು ಈಗತಾನೇ ಕುಡಿ ಒಡೆಯುತ್ತಿರುವ ಲೀಲಾ ಏಜೆ ಪ್ರೀತಿಗೆ ಬೆಲೆ ತೆರುವಂತೆ ಮಾಡುತ್ತಿದೆ. ಮಗಳನ್ನೇ ಕೇಳದೇ ಲೀಲಾ ತಾಯಿ ಕೌಸಲ್ಯ ವಿಚ್ಚೇದನ(Divorce)ಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ವಕೀಲರನ್ನು ಮನೆಗೆ ಬರ ಹೇಳಿ ಅವರ ಬಳಿ ಮಾತನಾಡಿ 70 ಕೋಟಿಯ ಆಸೆಗೆ ಮಗಳ ಜೀವನವನ್ನೇ ಬುಡಮೇಲು ಮಾಡಲು ಹೊರಟಿದ್ದಾಳೆ. ಕೌಸಲ್ಯಳ ನಿರ್ಧಾರ ಯಾರಿಗೂ ತಿಳಿದಿಲ್ಲ ಮನೆಯವರಿಂದ ಗೌಪ್ಯವಾಗಿಟ್ಟುಕೊಂಡು ಮಗಳು ನಾನೇನೇ ಹೇಳಿದರು ಮಾಡುತ್ತಾಳೆ ಎಂಬ ನಂಬಿಕೆಯಿಂದ ಈ ರೀತಿ ಕೆಲಸ ಮಾಡುತ್ತಿದ್ದಾಳೆ.
undefined
ನಾಟಕ ಕಂಪನಿ ಸೇರಿಕೊಂಡ ಸೀರಿಯಲ್ ನಟಿ ಪ್ರಿಯಾಂಕಾ ಶಿವಣ್ಣ, ಕಿರುತೆರೆಗೆ ಗುಡ್ ಬೈ ಹೇಳ್ತಾರಾ?
ಆದರೆ ಲಾಯರ್ ಮಾಡಿರೋ ಕಾಲ್ ಮೂಲಕ ಎಜೆ ಸೊಸೆಯರಿಗೆ ವಿಚ್ಛೇದನದ ಸಂಗತಿ ತಿಳಿದುಬಿಟ್ಟಿದೆ. ಇದೀಗ ಈ ವಿಚಾರವನ್ನು ಎಜೆಗೆ ತಿಳಿಸಿ ಲೀಲಾಳನ್ನು ಮನೆಯಿಂದ ಓಡಿಸುವ ಪ್ಲಾನ್(Plan) ಇವರದ್ದು. ಲೀಲಾಳ ಮೇಲೆ ಇನ್ನೊಂದು ಬ್ರಹ್ಮಾಸ್ತ್ರ ಬಿಡಲು ದೊಡ್ಡ ಸೊಸೆ ದುರ್ಗಾ ಮಾಸ್ಟರ್ ಪ್ಲಾನ್(Master Plan) ಮಾಡುತ್ತಿದ್ದಾಳೆ. ಇನ್ನಿಬ್ಬರು ಸೊಸೆಯರು ಅವಳು ಹೊರಹೋಗ್ತಾಳೆ ಅನ್ನೋ ಖುಷಿಯಲ್ಲಿ ಅಷ್ಟರವರೆಗಾದರೂ ಅವಳ ಸೇವೆ ಮಾಡೋಣ ಅಂತ ಸೇವೆಗೆ ನಿಂತಿದ್ದಾರೆ. ಆದರೆ ಸದ್ಯಕ್ಕೆ ಡಿವೋರ್ಸ್ (Divorce) ವಿಷಯ ಏಜೆಗೆ ಇದು ತಿಳಿದಿಲ್ಲ. ಆತ ಲೀಲಾ ಮಾತಿಗೆ ಮರುಳಾಗುತ್ತಿದ್ದಾನೆ. ದಿನ ಕಳೆದಂತೆ ಇಬ್ಬರು ಜೋಡಿಗಳು ಒಂದಾಗುವ ಸೂಚನೆ ತೋರಿಸಿದರೆ, ಇನ್ನೊಂದೆಡೆ ಇವರಿಬ್ಬರನ್ನು ಬೇರೆ ಮಾಡಲು ದುರ್ಗಾ ಬಕಪಕ್ಷಿಯಂತೆ ಕಾಯುತ್ತಿದ್ದಾಳೆ.
Hitler Kalyana : ಏಜೆ ಮತ್ತು ಲೀಲಾ ನಡುವಿನ ಪ್ರೀತಿಯ ಕಿಡಿ ಹಚ್ಚುತ್ತಿರುವ ಬ್ರಹ್ಮಗಂಟು ಗುಂಡಮ್ಮ ಗೀತಾ ಭಾರತಿ
ಕಲ್ಮಶವೇ ಇಲ್ಲ ಸ್ವಚ್ಛ ಮನಸ್ಥಿತಿಯ ಲೀಲಾಗೆ ಏಜೆ ತಂಗಿ ಸೌಮ್ಯಾ ಕಂಡರೆ ಅಕ್ಕರೆ. ವೀಲ್‌ಚೇರ್‌ನಲ್ಲೇ ಸಮಯ ಕಳೆಯುವ ಸೌಮ್ಯಾಗೆ ಚೇಂಜ್(Change) ಇರಲಿ ಅಂತ ಲೀಲಾ ಅವಳನ್ನು ಸುಂದರವಾಗಿ ಅಲಂಕರಿಸಿದ್ದಾಳೆ. ಆಮೇಲೆ ಗಾರ್ಡನ್ ಗೆ ಕರೆತಂದು ಅವಳ ಜೊತೆಗೆ ಮಾತನಾಡುತ್ತಿರುತ್ತಾಳೆ. ಇತ್ತ ಏಜೆ ತಂಗಿ ರೂಮಲ್ಲಿ ಇಲ್ಲದ್ದನ್ನು ಕಂಡು ಹೆದರಿ ತಂಗಿಯನ್ನು ಕರೆಯುತ್ತಾನೆ. ಕೊನೆಗೆ ಗಾರ್ಡನ್‌ನತ್ತ ಬರುತ್ತಾನೆ, ಅಲ್ಲಿ ಲೀಲಾ ಜೊತೆಗೆ ತಂಗಿ ಇರೋದು ಕಾಣುತ್ತೆ. ಆಕೆಗೆ ರೂಮಲ್ಲೇ ಕೂತು ಬೇಸರವಾಗಿರುತ್ತೆ, ಸ್ವಲ್ಪ ಚೇಂಜ್ ಇರಲಿ ಎಂದು ಗಾರ್ಡನ್‌ಗೆ ಕರೆದುಕೊಂಡು ಬಂದೆ ಲೀಲಾ ಹೇಳುತ್ತಾಳೆ. ಲೀಲಾ ಪ್ರಯತ್ನಕ್ಕೆ ಖುಷಿಯಾದ ಏಜೆ ಸೌಮ್ಯಳನ್ನು ನೋಡಿದ ಏಜೆಗೆ ಕಣ್ಣಂಚಲಿ ನೀರು ಜಿನುಗಿತು. ಅದೆಷ್ಟೋ ಪ್ರೀತಿಯಿಂದ ನೋಡಿಕೊಂಡ ತಂಗಿ ಇದೀಗ ವೀಲ್‌ಚೇರ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಬಂತಲ್ಲ ಎಂದು ಬೇಸರವಾಗುತ್ತೆ. ಇನ್ನೊಂದೆಡೆ ಏಜೆಗೆ ಲೀಲಾ ಸರ್‌ಪ್ರೈಸ್(Surprise) ನೀಡಲು ಕಾಯುತ್ತಿದ್ದಾಳೆ. ಇದರಲ್ಲೂ ಲೀಲಾ ಎಡವಟ್ಟು ಮಾಡಿಕೊಳ್ಳುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಈ ಸೀರಿಯಲ್ ಎಲ್ಲ ಬಗೆಯ ಎಮೋಶನ್, ತಂತ್ರಗಳ ಮೂಲಕ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಏಜೆ ಪಾತ್ರದಲ್ಲಿ ದಿಲೀಪ್ ರಾಜ್(Dileep Raj), ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್(Malaika Vasupal) ನಟಿಸಿದ್ದಾರೆ.