ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ತಮ್ಮ ಪತ್ನಿ ಸುಧಾಮೂರ್ತಿಯವರ ತಂದೆಯನ್ನು ಮೊದಲ ಭೇಟಿಯಲ್ಲಿ ಇಂಪ್ರೆಸ್ ಮಾಡಲು ವಿಫಲರಾಗಿದ್ದ ಘಟನೆಯನ್ನು ಸುಧಾಮೂರ್ತಿಯವರೇ ಹಂಚಿಕೊಂಡಿದ್ದಾರೆ.
ತನ್ನ ಪ್ರೇಮಿಯ ಅಪ್ಪ ಅಮ್ಮನನ್ನು ಇಂಪ್ರೆಸ್ ಮಾಡೋದು ಪ್ರತಿಯೊಬ್ಬರಿಗೂ ಕಷ್ಟದ ಕೆಲಸ. ಅದು ಹುಡುಗನೇ ಆಗಲಿ ಹುಡುಗಿಯೇ ಆಗಲಿ ತನ್ನ ಗೆಳೆಯ ಗೆಳತಿಯ ಅಪ್ಪ ಅಮ್ಮನ ಮೆಚ್ಚಿಸುವುದು ಕಷ್ಟದ ಕೆಲಸ ಅದೇ ರೀತಿ ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ಕೂಡ ಗೆಳತಿ/ ಪತ್ನಿ ಸುಧಾಮೂರ್ತಿಯವರ ತಂದೆಯವರನ್ನು ಮೊದಲ ಭೇಟಿಯಲ್ಲೇ ಇಂಪ್ರೆಸ್ ಮಾಡಲು ವಿಫಲರಾಗಿದ್ದರಂತೆ . ಇದನ್ನು ಸ್ವತಃ ಸುಧಾಮೂರ್ತಿಯವರೇ ಹೇಳಿಕೊಂಡಿದ್ದಾರೆ.
ಸುಧಾಮೂರ್ತಿ ಈ ಹಿಂದೊಮ್ಮೆ ಕಪಿಲ್ ಶರ್ಮಾ ಅವರ ದಿ ಗ್ರೇಟ್ ಇಂಡಿಯಾ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಈಗ ಅವರು ಮತ್ತೆ ತಮ್ಮ ಪತಿಯ ಜೊತೆ ಈ ಶೋದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ತಮ್ಮ ತಂದೆಯ ಜೊತೆ ಪತಿ ನಾರಾಯಣ ಮೂರ್ತಿ ಅವರ ಮೊದಲ ಭೇಟಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಹಳೆಯ ದಿನಗಳನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರೆ.
ಸುಧಾಮೂರ್ತಿಯವರ ತಂದೆಯನ್ನು ಮೊದಲ ಭೇಟಿಯಲ್ಲೇ ಮೆಚ್ಚಿಸಬೇಕು ಎಂದು ನಾರಾಯಣ ಮೂರ್ತಿ ಬಹಳ ಉತ್ಸಾಹದಿಂದಿದ್ದರಂತೆ ಆದರೆ ಎರಡು ಗಂಟೆ ತಡವಾಗಿ ಬರುವ ಮೂಲಕ ಅವರ ಮಾವನನ್ನು ಮೊದಲ ಭೇಟಿಯಲ್ಲೇ ಮೆಚ್ಚಿಸುವ ನಾರಾಯಣ ಮೂರ್ತಿಯವರ ಆಸೆಗೆ ತಣ್ಣೀರು ಬಿದ್ದಂತಾಗಿತ್ತು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ ಸುಧಾಮೂರ್ತಿ.
ನಾರಾಯಣ ಮೂರ್ತಿಯವರ ನಮ್ಮ ತಂದೆಯವರನ್ನು ಭೇಟಿ ಮಾಡುವುದಕ್ಕೆ ಮೊದಲ ಬಾರಿ ಬರುತ್ತಿದ್ದಾಗಲೇ ಅವರ ಟಾಕ್ಸಿ ಮಾರ್ಗಮಧ್ಯೆಯೇ ಹಾಳಾಗಿದ್ದರಿಂದ ಅವರು ಎರಡು ಗಂಟೆ ತಡವಾಗಿ ಬಂದರು. ಇತ್ತ ನನ್ನ ತಂದೆ ಅವರ ಬಗ್ಗೆ ನನ್ನಲ್ಲಿ ಕೇಳುತ್ತಲೇ ಇದ್ದರು. ಬದುಕಿಗಾಗಿ ಆತ ಏನು ಮಾಡುತ್ತಾನೆ, ಆತನ ಕೆಲಸ ಏನು ಹೀಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಆದರೆ ನನ್ನ ತಂದೆಯನ್ನು ಭೇಟಿ ಮಾಡಿದ ನಾರಾಯಣ ಮೂರ್ತಿ, ತಾನು ರಾಜಕಾರಣಕ್ಕೆ ಸೇರಬೇಕೆಂದು ಬಯಸಿದ್ದೇನೆ ಜೊತೆಗೆ ಅನಾಥಾಶ್ರಮವನ್ನು ಸ್ಥಾಪಿಸಬೇಕೆಂದಿದ್ದೇನೆ. ಆದರೆ ನನ್ನ ತಂದೆ ನಾನು ಅವರ ಪಾಲಿನ ದೊಡ್ಡ ಉಡುಗೊರೆ ಎಂದು ಭಾವಿಸಿದ್ದರು. ಏಕೆಂದರೆ ಆ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಯಾರೂ ಕೂಡ ಎಂಜಿನಿಯರಿಂಗ್ ಮಾಡಲು ಮುಂದೆ ಬಂದಿರಲಿಲ್ಲ, ಹೀಗಿರುವಾಗ ಈ ನಾರಾಯಣ ಮೂರ್ತಿ ನಿಗದಿಗಿಂತ ಬಹಳ ತಡವಾಗಿ ಬಂದು ನನ್ನ ತಂದೆಯನ್ನು ಇಂಪ್ರೆಸ್ ಮಾಡಬಹುದು ಎಂದು ಭಾವಿಸಿದ್ದರು. ಆದರೆ ನನ್ನ ತಂದೆಗೆ ಸಮಯ ಅಂದರೆ ಸಮಯ, ಹೇಳಿದ ಸಮಯಕ್ಕೆ ಸರಿಯಾಗಿ ಇರಬೇಕು ಎಂಬಂತಹ ಚಿಂತನೆಯವರಾಗಿದ್ದರು ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ.
ಸುಧಾಮೂರ್ತಿಯವರ ಮಾತಿನ ನಡುವೆ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ಆ ಸಮಯದಲ್ಲಿ ನಾನು ಸ್ವಲ್ಪ ತುಂಟಾಟಗಾರನಾಗಿದೆ( playfulness) ಓಕೆ ಆತ ಕೋಪಗೊಳ್ಳುವಂತೆ ಮಾಡೋವ ಎಂಬ ಮನೋಭಾವ ನನ್ನದಾಗಿತ್ತು, ಜೊತೆಗೆ ಆಗ ಸ್ವಲ್ಪ ಸಾಹಸಮಯನಾಗಿದ್ದೆ (adventurous) ಎಂದು ಹೇಳಿದ್ದಾರೆ. ಇದೇ ವೇಳೆ ಸುಧಾಮೂರ್ತಿಯವರನ್ನು ಮೊದಲ ಬಾರಿ ಭೇಟಿಯಾಗಿದ್ದನ್ನು ನೆನಪು ಮಾಡಿಕೊಂಡ ನಾರಾಯಣ ಮೂರ್ತಿ, ಆಕೆಯನ್ನು ಮೊದಲ ಬಾರಿ ಭೇಟಿಯಾಗಿದ್ದು ತಾಜಾ ಗಾಳಿಯನ್ನು ಉಸಿರಾಡಿದಂತೆ. ಆಕೆ ಎಲ್ಲಾ ವಿಚಾರಗಳಲ್ಲಿ ಸದಾ ಪಾಸಿಟಿವ್ ಆಗಿರುತ್ತಿದ್ದಳು. ಅಲ್ಲದೇ ಆಕೆ ತುಂಬಾ ಮಾತನಾಡುತ್ತಿದ್ದಳು ( talkative) ಆಕೆಗೆ ಒಳ್ಳೆಯ ಕೇಳುಗನೋರ್ವ ಬೇಕಿತ್ತು. ಹೀಗಾಗಿ ಆಕೆಯೂ ಖುಷಿಯಾಗಿದ್ದಾಳೆ ನಾನು ಖುಷಿಯಾಗಿದ್ದೇನೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
ತಂತ್ರಜ್ಞಾನ ಲೋಕ, ಉದ್ಯಮ ಹಾಗೂ ದಾನಕ್ಕೆ ಸಾಕಷ್ಟು ಕೊಡುಗೆ ನೀಡಿರುವ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಈ ದೇಶದ ಸುಪ್ರಸಿದ್ಧ ಜೋಡಿಯಾಗಿದ್ದಾರೆ. ನಾರಾಯಣಮೂರ್ತಿಯವರು ಐಟಿ ದೈತ್ಯ ಇನ್‌ಫೋಸಿಸ್‌ನ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, ಇದು ಭಾರತ ಟೆಕ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಹಾಗೆಯೇ ಗಂಡನ ಎಲ್ಲಾ ಮಹಾನ್ ಕಾರ್ಯಗಳಿಗೆ ಜೊತೆಯಾಗಿರುವ ಸುಧಾಮೂರ್ತಿಯವರು ಸ್ವತಃ ಬರಹಗಾರರು ಆಗಿದ್ದು, ಅವರ ಹಲವು ಪುಸ್ತಕಗಳು ಬೆಸ್ಟ್ ಸೆಲ್ಲರ್‌ಗಳಾಗಿವೆ. ಅವರು ಮುನ್ನಡೆಸುತ್ತಿರುವ ಇನ್‌ಫೋಸಿಸ್ ಪ್ರತಿಷ್ಠಾನವು ಭಾರತದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.