ಧರ್ಮ-ಅನುಷಾ ಪ್ರೀತಿ ದೂರ ಮಾಡಿದ ಪಶ್ಚಾತ್ತಾಪದಿಂದ ಕಣ್ಣೀರಿಟ್ಟ ಐಶ್ವರ್ಯಾ ಸಿಂಧೋಗಿ!

By Sathish Kumar KH  |  First Published Nov 13, 2024, 2:24 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ಐಶ್ವರ್ಯಾ ಸಿಂಧೋಗಿ ಧರ್ಮ ಕೀರ್ತಿರಾಜ್ ಜೊತೆ ಜೋಡಿಯಾಗಿದ್ದು, ಅನುಷಾ-ಧರ್ಮ ಪ್ರೀತಿ ದೂರವಾಯಿತೆಂದು ಕಣ್ಣೀರು ಹಾಕಿದ್ದಾರೆ. ಸ್ಪರ್ಧಿಗಳನ್ನು ಜೋಡಿ ಮಾಡಿ ಟಾಸ್ಕ್ ನೀಡಲಾಗಿದ್ದು, ಕೆಲವರಲ್ಲಿ ಹೊಂದಾಣಿಕೆ ಇಲ್ಲದವರನ್ನು ಜೋಡಿ ಮಾಡಲಾಗಿದೆ.


ಬೆಂಗಳೂರು (ನ.13): ಬಿಗ್ ಬಾಸ್ ಕನ್ನಡ ಸೀಸನ್ 11ರ 6ನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ಜೋಡಿ ಮಾಡಿ ಟಾಸ್ಕ್ ನೀಡಲಾಗುತ್ತಿದೆ. ಇದರಲ್ಲಿ ಬಿಗ್ ಬಾಸ್ ಐಶ್ವರ್ಯಾ ಸಿಂಧೋಗಿ ಹಾಗೂ ಧರ್ಮ ಕೀರ್ತಿರಾಜ್ ಅವರನ್ನು ಜೋಡಿಯಾಗಿ ಮಾಡಿದ್ದಾರೆ. ಆದರೆ, ಇದರಿಂದ ಬಿಗ್ ಬಾಸ್ ಮನೆಯ ಪ್ರಣಯ ಹಕ್ಕಿಗಳು ಎಂದೇ ಖ್ಯಾತವಾಗಿದ್ದ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ರೈ ಅವರ ಪ್ರೀತಿ ನನ್ನಿಂದ ದೂರವಾಯಿತು ಎಂದು ನಟಿ ಐಶ್ವರ್ಯಾ ಸಿಂಧೋಗಿ ಪಶ್ಚಾತ್ತಾಪದಿಂದ ಕಣ್ಣೀರು ಹಾಕುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋ ಇದೀಗ 6ನೇ ವಾರಕ್ಕೆ ಕಾಲಿಟ್ಟಿದ್ದು, 13 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಸ್ಪರ್ಧಿಗಳಿಗೆ ಜೋಡಿ ಟಾಸ್ಕ್ ಕೊಟ್ಟಿರುವ ಬಿಗ್ ಬಾಸ್ 6 ಜೋಡಿಗಳನ್ನು ಮಾಡಿದ್ದಾರೆ. ಆದರೆ, ಇದರಲ್ಲಿ ಒಬ್ಬರಿಗೊಬ್ಬರು ಪರಸ್ಪರ ಹೊಂದಾಣಿಕೆಯೇ ಇಲ್ಲದ ಜೋಡಿಗಳನ್ನು ಮಾಡಲಾಗಿದೆ. ಇದರಿಂದಾಗಿ ಕೆಲವು ಸ್ಪರ್ಧಿಗಳ ಪೈಕಿ ಈವರೆಗೆ ಹೊಂದಾಣಿಕೆ ಆಗದವರನ್ನು ಜಂಟಿಯನ್ನಾಗಿ ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಇನ್ನು ಕೆಲವರು ಇವರ ಸಹವಾಸವೇ ಬೇಡ ಎಂದುಕೊಂಡು ದೂರ ಇದ್ದವರನ್ನು ಕೂಡ ಜೋಡಿ ಮಾಡಲಾಗಿದ್ಉ, ಅನಿವಾರ್ಯವಾಗಿ ಆಟವಾಡುತ್ತಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಬಿಗ್ ಬಾಸ್ ಮಾಡಿದ್ದು ಸರಿನಾ? ಹೊಂದಾಣಿಕೆ ಇಲ್ಲದವರನ್ನು ಜೋಡಿ ಮಾಡಿ ವೀಕ್ಷಕರ ದಿಕ್ಕು ತಪ್ಪಿಸಿದ್ಯಾಕೆ?

ಬಿಗ್ ಬಾಸ್ ಮನೆಯಲ್ಲಿ ಇಬ್ಬರು ತುಂಬಾ ವರ್ಷಗಳಿಂದ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ ನಟ ಧರ್ಮ ಕೀರ್ತಿರಾಜ್ ಮತ್ತು ನಟಿ ಅನುಷಾ ರೈ ಅವರು ಒಟ್ಟಿಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಇವರನ್ನು ಪ್ರೇಮಿಗಳೆಂದೇ ಕರೆಯಲಾಗುತ್ತದೆ. ಆದರೆ, ಇಬ್ಬರೂ ತಮ್ಮ ಎಲ್ಲೆಗಳನ್ನು ಮೀರದೇ, ವೀಕ್ಷಕರು ನೋಡುತ್ತಿರುತ್ತಾರೆ ಎಂಬ ಕಾರಣಕ್ಕೆ ತಮ್ಮ ಪ್ರಣಯವನ್ನು ಅದುಮಿಟ್ಟು ವರ್ತಿಸುತ್ತಿದ್ದಾರೆ. ಹೀಗಾಗಿ, ಇವರ ಪ್ರಣಯ ಮಾತಿಗೆ, ಕಣ್ಣೋಟಕ್ಕೆ ಸೀಮಿತವಾಗಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಕೂಡ ಇವರಿಬ್ಬರೇ ಒಟ್ಟಾಗಿ ಇರುವುದನ್ನು ಕಂಡು ಆಗಾಗ ಗಾಸಿಪ್ ಕೂಡ ಮಾಡುತ್ತಾರೆ. ಆದರೆ, ಇದೀಗ ಬಿಗ್ ಬಾಸ್ ಪ್ರಣಯ ಪಕ್ಷಿಗಳನ್ನು ದೂರ ಮಾಡಿದ್ದಾರೆ.

ಧರ್ಮ ಕೀರ್ತಿರಾಜ್-ಐಶ್ವರ್ಯಾ ಸಿಂಧೋಗಿ ಹಾಗೂ ಅನುಷಾ ರೈ-ಗೋಲ್ಡ್ ಸುರೇಶ್ ಅವರನ್ನು ಜೋಡಿಯನ್ನಾಗಿ ಮಾಡಲಾಗಿದೆ. ಈಗ ಐಶ್ವರ್ಯಾ ಸಿಂಧೋಗಿ ಅವರಿಂದ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರ ಪ್ರೀತಿ ದೂರವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ, ನನ್ನಿಂದ ಅನುಷಾ-ಧರ್ಮ ಪ್ರೀತಿ ದೂರವಾಗಿದೆ ಎಂದು ಪಶ್ಚಾತ್ತಾಪ ಪಡುತ್ತಾ ಕಣ್ಣೀರಿಡುತ್ತಿದ್ದಾರೆ.

ಪಾಪಪ್ರಜ್ಞೆಯಲ್ಲಿ ಕೊರಗ್ತಿದ್ದಾರಾ ಐಶ್ವರ್ಯ?

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/7sctBYnxSQ

— Colors Kannada (@ColorsKannada)

ಬಿಗ್ ಬಾಸ್ ಮನೆಗೆ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಾಗ ಅವರಿಬ್ಬರ ನಡುವಿನ ಹಳೆಯ ಸ್ನೇಹದ ಬಗ್ಗೆ ಗೊತ್ತಿರದ ನಟಿ ಐಶ್ವರ್ಯಾ ಸಿಂಧೋಗಿ ನಟ ಧರ್ಮ ಕೀರ್ತಿರಾಜ್ ಜೊತೆಗೆ ಆತ್ಮೀಯತೆ ಹೊಂದಿದ್ದರು. ಆದರೆ, ಇವರಿಬ್ಬರ ಹಳೆಯ ಸ್ನೇಹವನ್ನು ಅರಿತ ನಂತರ ಅವರಿಂದ ದೂರವಾಗಿ, ನಟ ಶಿಶಿರ್ ಜೊತೆಗೆ ಹೆಚ್ಚಿನ ಆತ್ಮೀಯತೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಆಗಾಗ ಫ್ಲರ್ಟ್ ಮಾಡುವ ಅನೇಕ ದೃಶ್ಯಗಳು ಬಿಗ್ ಬಾಸ್ ಮನೆಯಲ್ಲಿ ನಡೆದಿವೆ. ಶಿಶಿರ್ ಏನಾದರೂ ಮಾತನಾಡಿದರೆ ಐಶ್ವರ್ಯಾ ಅವರು ಗಳಗಳನೇ ಕಣ್ಣೀರು ಹಾಕುತ್ತಾರೆ. ಆಗ ಶಿಶಿರ್ ಹೋಗಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಹೀಗಾಗಿ, ಇವರನ್ನೂ ಕೂಡ ಜೋಡಿ ಹಕ್ಕಿಗಳೆಂದು ಹೇಳುವುದರಲ್ಲಿ ತಪ್ಪಿಲ್ಲ. ಇದೀಗ ಐಶ್ವರ್ಯಾ ಅವರು ಧರ್ಮನ ಜೋಡಿ ಆಗಿದ್ದರೂ, ಶಿಶಿರ್ ಮಾತ್ರ ಎಂದಿಗೂ ಐಶ್ವರ್ಯಾಳಿಂದ ದೂರ ಇರುವುದಿಲ್ಲ.

ಇದನ್ನೂ ಓದಿ: BBK11: ನೇರ ನಾಮಿನೇಟ್‌ ಗೆ ಸಿಡಿದೆದ್ದ ಅನುಷಾ ಪ್ರಶ್ನೆಗೆ ಬಾಯಿ ಮುಚ್ಚಿದ ಸ್ಪರ್ಧಿಗಳು, 10ಮಂದಿ ನಾಮಿನೇಟ್‌!

click me!