ಮಗುಚಿಬಿದ್ದ ತೆಪ್ಪ, ವೈಷ್ಣವಿ ಗೌಡ ಮತ್ತು ಟೀಮ್ ಸ್ವಲ್ಪದರಲ್ಲೇ ಪಾರು! ಅಷ್ಟಕ್ಕೂ ಸೀತಮ್ಮಂಗೆ ಏನಾಗಿತ್ತು ಗೊತ್ತಾ?

Published : Mar 10, 2025, 12:53 PM ISTUpdated : Mar 10, 2025, 01:23 PM IST
ಮಗುಚಿಬಿದ್ದ ತೆಪ್ಪ, ವೈಷ್ಣವಿ ಗೌಡ ಮತ್ತು ಟೀಮ್ ಸ್ವಲ್ಪದರಲ್ಲೇ ಪಾರು! ಅಷ್ಟಕ್ಕೂ  ಸೀತಮ್ಮಂಗೆ ಏನಾಗಿತ್ತು ಗೊತ್ತಾ?

ಸಾರಾಂಶ

ಆ ಸೀರಿಯಲ್‌ ಶೂಟಿಂಗ್‌ಗೆ ತೆಪ್ಪದ ಮೇಲೆ ಹೋಗಬೇಕಿತ್ತು. ಸೀರಿಯಲ್‌ ಟೀಮ್‌ನವರು ಶೂಟಿಂಗ್‌ಗೆ ಅಂತ ತೆಪ್ಪ ಏರಿದ್ದಾರೆ. ಆದರೆ ನಡುವೆ ತೆಪ್ಪ ಮಗುಚಿಬಿದ್ದಿದೆ.

ವೈಷ್ಣವಿ ಗೌಡ ಸದ್ಯ ಸೀತಾರಾಮ ಸೀರಿಯಲ್‌ನ ಸೀತಮ್ಮ ಅಂತಲೇ ಫೇಮಸ್ಸು. ತನ್ನ ವಯಸ್ಸಿಗಿಂತಲೂ ಕೊಂಚ ಪ್ರೌಢ ಅನಿಸೋ ಪಾತ್ರವನ್ನು ಇವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಕಲಾವಿದರಿಗೆ ನಟನೆ ಅನ್ನೋದು ಅಂಥಾ ಸವಾಲೇನಲ್ಲ. ಆದರೆ ಒಂದು ಪಾತ್ರಕ್ಕೆ ಜೀವ ತುಂಬೋದು, ಅದರಲ್ಲೂ ತನಗೆ ಯಾವ ಬಗೆಯಲ್ಲೂ ಅನುಭವ ಇಲ್ಲದ ಪಾತ್ರವೊಂದರಲ್ಲಿ ಅಭಿನಯಿಸೋದು ಚಾಲೆಂಜಿಂಗ್‌ ಅಲಲ್ ಅನ್ನೋದಕ್ಕಾಗಲ್ಲ. ವೈಷ್ಣವಿ ಗೌಡ ಹೇಳಿ ಕೇಳಿ ಭರತನಾಟ್ಯ ಕಲಾವಿದೆ. ಬಾಲ್ಯದಿಂದಲೇ ಯೋಗ, ನಾಟ್ಯ ಅಂತೆಲ್ಲ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರೋ ಬಹುಮುಖ ಪ್ರತಿಭೆ. ಇವರು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸೀರಿಯಲ್ ತಂದುಕೊಟ್ಟ ಹೆಸರು ಸಿನಿಮಾದಲ್ಲಿ ಬರಲಿಲ್ಲ. ಅದಕ್ಕೆ ಕಾರಣಗಳು ಏನೇನೋ ಇವೆ. ಸೀರಿಯಲ್‌ ಅನ್ನು ನೋಡೋ ಜನ ಥೇಟರ್‌ಗೆ ಹೋಗಿ ಸಿನಿಮಾ ನೋಡೋದು ಕಡಿಮೆ. ಅವರು ಮೊಬೈಲ್ ಟಿವಿ ಪರದೆಯಲ್ಲಿ ಕಂಡುಕೊಳ್ಳುವ ಎಂಟರ್‌ಟೇನ್‌ಮೆಂಟ್‌ಗೆ ಅಟ್ಯಾಚ್ ಆಗಿರುತ್ತಾರೆ. ಅವರಿಗೆ ಥೇಟರ್‌ನಲ್ಲಿ ಅರ್ಧ ದಿನ ವೇಸ್ಟ್ ಮಾಡೋದಕ್ಕೆ ಮನಸ್ಸಿಲ್ಲ. ಜೊತೆಗೆ ಸೀರಿಯಲ್ ಚೆನ್ನಾಗಿಲ್ಲ ಅಂದರೆ ಚಾನಲ್ ಚೇಂಜ್ ಮಾಡಬಹುದು. ಆದರೆ ಸಿನಿಮಾದಲ್ಲಿ ಆ ಆಯ್ಕೆ ಇಲ್ವಲ್ಲಾ.

ಸೋ ವೈಷ್ಣವಿ ಸಿನಿಮಾ ರಂಗಕ್ಕೆ ಬಂದಾಗಲೂ ಕೊಂಚ ಮಟ್ಟಿಗೆ ಹೀಗೇ ಆಗಿರಬೇಕು. ಸಿನಿಮಾ ನೋಡೋ ಪ್ರೇಕ್ಷಕರು ಕೇವಲ ಕಲಾವಿದರನ್ನಷ್ಟೇ ನೋಡದೇ ಬೇರೆ ಬೇರೆ ಆಂಗಲ್‌ನಿಂದ ಸಿನಿಮಾವನ್ನು ಜಡ್ಜ್ ಮಾಡ್ತಾರೆ. ಒಟ್ಟಿನಲ್ಲಿ ಕಾರಣ ಏನೇ ಇರಬಹುದು. ವೈಷ್ಣವಿ ಅಂತೂ ಸಿನಿಮಾದಲ್ಲಿ ಅಂಥಾ ಸಕ್ಸಸ್ ಕಂಡಿಲ್ಲ. ಹಾಗಂತ ಸೀರಿಯಲ್ ಅವರನ್ನ ಕೈಬಿಟ್ಟಿಲ್ಲ.

ಜಾನು ತವರಿನಲ್ಲಿಯೂ ಜಯಂತ್‌ನ ಕಿತಾಪತಿ; ಚಿನ್ನುಮರಿಗೆ ವಿಷ್ಯ ಗೊತ್ತಾದ್ರೆ ಉಳಿಗಾಲವೇ ಇಲ್ಲ!

ಇತ್ತೀಚೆಗೆ ವೈಷ್ಣವಿ ಅವರು ಸೀರಿಯಲ್‌ ಬಿಟ್ಟು ರೀಲ್ಸ್‌ನಲ್ಲೂ ಹೆಚ್ಚೆಚ್ಚಾಗಿ ಕಾಣಿಸಿಕೊಳ್ತಾರೆ. ಅದೇ ರೀತಿ ಜಾಹೀರಾತುಗಳಲ್ಲೂ ಲೈವ್ಲೀ ಆಗಿ ನಟಿಸುತ್ತಾರೆ. ಇತ್ತೀಚೆಗೆ ಅವರು ತನ್ನ ತಾಯಿಯ ಜೊತೆ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಟ್ ಇದು ಹೇಗಿದೆ ಅಂದರೆ ಅಪ್ಪಿತಪ್ಪಿಯೂ ಜಾಹೀರಾತು ಬರೋವರೆಗೆ ಇದು ಅಡ್ವರ್ಟೈಸ್‌ಮೆಂಟ್ ಅಂತ ದೇವ್ರಾಣೆಗೂ ಗೊತ್ತಾಗಲ್ಲ. ವೈಷ್ಣವಿ ಜೊತೆ ಇದರಲ್ಲಿ ಅವರ ಅಮ್ಮ ಕಾಣಿಸಿಕೊಂಡಿದ್ದಾರೆ. ಅಮ್ಮ ಅಂದರೆ ವೈಷ್ಣವಿಗೆ ಮೊದಲಿಂದಲೂ ಕೊಂಚ ಭಯವೇ. ಅವರ ಮಾತನ್ನು ಮೀರೋ ಧೈರ್ಯ ಇಲ್ವೇ ಇಲ್ಲ. ಅಮ್ಮನ ಕೈಯಿಂದ ಏಟು ತಿಂದಿದ್ದು, ಬೈಯಿಸ್ಕೊಂಡಿದ್ದನ್ನೆಲ್ಲ ಅವರು ಬಿಗ್‌ಬಾಸ್‌ನಲ್ಲಿ ಸುದೀಪ್‌ ಜೊತೆ ಹೇಳ್ಕೊಂಡಿದ್ರು. ಆದರೆ ಈಗ ಅಮ್ಮನ ಜೊತೆಗೆ ಹೆಚ್ಚೇ ಫ್ರೀ ಆಗಿದ್ದಾರೆ. ಅಮ್ಮನ ಜೊತೆಗಿನ ಮಾತುಕಥೆಯಲ್ಲಿ ವೈಷ್ಣವಿ ತನ್ನ ಬಗ್ಗೆ ಅಮ್ಮನ ಬಳಿ ಪ್ರಶ್ನೆ ಕೇಳಿದ್ದಾರೆ. 'ಇಷ್ಟು ದಿನ ನಾನು ಬೇರೆ ಬೇರೆ ರೋಲ್‌ಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಒಂದು ಪಾತ್ರವನ್ನು ಮತ್ತೆ ನಟಿಸಬೇಕು ಅಂದರೆ ಯಾವ ಪಾತ್ರ ಇಷ್ಟ?' ಅಂತ ವೈಷ್ಣವಿ ಅಮ್ಮನನ್ನ ಕೇಳಿದ್ದಾರೆ.

ಆಗ ಅಮ್ಮ, 'ನನಗೆ ನೀನು ಮೊದಲ ಸಲ ನಟಿಸಿರೋ ದೇವಿ ಸೀರಿಯಲ್‌ ಬಹಳ ಇಷ್ಟ' ಅಂದಿದ್ದಾರೆ. ವೈಷ್ಣವಿಗೆ ಅದನ್ನು ಕೇಳಿ ಆಶ್ಚರ್ಯ ಆಗಿದೆ. ನಾನಾಗ ಬಹಳ ಚಿಕ್ಕವಳಿದ್ದೆ.. ಎನ್ನುತ್ತಲೇ ತನ್ನ ಸೀರಿಯಲ್‌ನ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಸೀರಿಯಲ್‌ ಶೂಟಿಂಗ್‌ಗೆ ತೆಪ್ಪದ ಮೇಲೆ ಹೋಗಬೇಕಿತ್ತು.

ಮಾತು ಬಾರದ, ಕಿವಿ ಕೇಳಿಸದ ಪ್ರಖ್ಯಾತ ನಟಿಯ ಮದುವೆ ಫಿಕ್ಸ್‌, ಗಂಟೆ ಬಾರಿಸೋ ಫೋಟೋ ಹಂಚಿಕೊಂಡ ನಟಿ!

ಸೀರಿಯಲ್‌ ಟೀಮ್‌ನವರು ಶೂಟಿಂಗ್‌ಗೆ ಅಂತ ತೆಪ್ಪ ಏರಿದ್ದಾರೆ. ಆದರೆ ನಡುವೆ ತೆಪ್ಪ ಮಗುಚಿಬಿದ್ದಿದೆ. ತೆಪ್ಪ ನದಿಯಲ್ಲಿ ಹಾಗೆ ಮಗುಚಿದಾಗ ಎಲ್ಲರಿಗೂ ಗಾಭರಿಯಾಗಿದೆ. ಆದರೆ ಪುಣ್ಯ ಮುಳುಗುವಷ್ಟು ನೀರಿರಲಿಲ್ಲ. ಸೋ, ಎಲ್ಲರಿಗೂ ನೀರಿಗೆ ಬಿದ್ದಿದ್ದು ಹಾಯೆನಿಸಿದೆ. ಶೂಟಿಂಗ್ ಮಾಡೋದು ಬಿಟ್ಟು ಎಲ್ಲ ನೀರಾಟ ಆಡುತ್ತ ಕೂತಿದ್ದಾರೆ. ಅದರ ನಡುವೆಯೇ ಶೂಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ. ಆದರೆ ಅಲ್ಲಿ ಹೆಚ್ಚು ನೀರಿಲ್ಲದ್ದು ಇವರೆಲ್ಲ ಇಂದು ಇಷ್ಟು ಖುಷಿಯಿಂದ ಆ ಕ್ಷಣವನ್ನು ನೆನೆಸಿಕೊಳ್ಳುವ ಹಾಗಾಗಿದೆ.ಒಂದು ವೇಳೆ ನೀರು ಹೆಚ್ಚಿದ್ದರೆ ಮಾತ್ರ ಏನಾಗ್ತಿತ್ತೋ ಗೊತ್ತಿಲ್ಲ. ಇರಲಿ, ವೈಷ್ಣವಿ ಅಮ್ಮನ ಜೊತೆಗೆ ಮಾತನಾಡುತ್ತ ಆಡುತ್ತ ಬಹಳ ಖುಷಿಯಿಂದ ಇದನ್ನು ನೆನಪು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಾಯಿಯೇ ತನ್ನ ಅತಿ ದೊಡ್ಡ ಸ್ಫೂರ್ತಿ ಅಂತಲೂ ವೈಷ್ಣವಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!