ಪುಟ್ಟ ಸಿಹಿನ ಸಾಯಿಸ್ಬೇಡ್ರಪ್ಪೋ : ಮತ್ತೆ ಮತ್ತೆ ವೀಕ್ಷಕರಿಂದ ಆರ್ತ ರಿಕ್ವೆಸ್ಟ್, ಸೀರಿಯಲ್ ಟೀಮ್ ಮನಸ್ಸು ಕರಗಿಬಿಟ್ತಾ?

By Bhavani Bhat  |  First Published Nov 6, 2024, 10:41 AM IST

ವಾರಗಳ ಹಿಂದೆ ಜೀ ಕನ್ನಡದಲ್ಲಿ ಪ್ರಸಾರವಾದ ಸಿಹಿ ಸತ್ತು ದೇವತೆ ಆಗುವ ಪ್ರೋಮೋ ಮತ್ತೆ ಮತ್ತೆ 'ಸೀತಾರಾಮ' ಸೀರಿಯಲ್ ವೀಕ್ಷಕರನ್ನು ಕಂಗೆಡಿಸ್ತಾ ಇದೆ. ಸಿಹಿನ ಸಾಯಿಸ್ಬೇಡಿ ಪ್ಲೀಸ್ ಅಂತ ವೀಕ್ಷಕರು ಮತ್ತೆ ಮತ್ತೆ ರಿಕ್ವೆಸ್ಟ್ ಮಾಡ್ತ ಇದ್ದಾರೆ. ಇದನ್ನು ಕಂಡು ಸೀರಿಯಲ್ ಟೀಮ್ ನವ್ರು ಮನಸ್ಸು ಬದಲಾಯಿಸಿಬಿಟ್ರಾ?


ಸೀತಾರಾಮ ಸೀರಿಯಲ್‌ನಲ್ಲಿ ಸಿಹಿ ಪುಟ್ಟ ಸತ್ತು ಪುಟ್ಟ ದೇವತೆ ಆಗುವ ಪ್ರೋಮೋ ಎರಡು ವಾರಗಳ ಹಿಂದೆ ಪ್ರಸಾರವಾಗ್ತಿತ್ತು. ಮಗುವಿನ ಪಾತ್ರ ಅಂತಾದಾಗ ವೀಕ್ಷಕರಿಗೆ ಬಹಳ ಎಮೋಶನಲೀ ಕನೆಕ್ಟ್ ಆಗಿರುತ್ತೆ. ಹೀಗಾಗಿ ಒಂದೇ ಸಲ ಆಕೆ ಸತ್ತು ಹೋಗೋದನ್ನು ತೋರಿಸಿದ್ರೆ ಈ ಸೀರಿಯಲ್ ವೀಕ್ಷಕರಿಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಹೋಗಬಹುದು ಅನ್ನೋ ಕಾರಣಕ್ಕೆ ಇದನ್ನು ಎರಡು ವಾರಗಳ ಹಿಂದೆ ತೋರಿಸಿದ್ದಾರೆ ಅನಿಸುತ್ತೆ. ಆದರೆ ಈ ಸೀರಿಯಲ್ ವೀಕ್ಷಕರಿಗೆ ಮಾತ್ರ ಇಂದಿಗೂ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯ ಆಗ್ತಾ ಇಲ್ಲ. ಸದ್ಯ ಬಹಳ ಸೀರಿಯಸ್ ಆಗಿ ಯಶೋದೆ, ದೇವಕಿಯರನ್ನು ಹೋಲೋ ಥರದ ಎಪಿಸೋಡ್ ಭಲೇ ಜೋರಿಂದ ನಡೀತಿದೆ. ಒಂದು ಹಂತದಲ್ಲಿ ಇದನ್ನು ನೋಡಿ ನೋಡಿ ವೀಕ್ಷಕರು ಬೇಸತ್ತಿದ್ದಾರೆ. ಬಹುಶಃ ಹೀಗೆ ಮಾಡಿ ಮಾಡಿ ಕೊನೆಗೆ ಸಿಹಿ ಪಾತ್ರಕ್ಕೆ ಇತಿಶ್ರೀ ಹಾಡಬಹುದು ಅನ್ನೋ ಗೆಸ್‌ನಲ್ಲಿ ವೀಕ್ಷಕರು ಇದ್ದಾರೆ. ಅವರಿಗೆ ಸಿಹಿಯನ್ನು ನೋಡದೇ ಇರೋದು ಬಹಳ ಕಷ್ಟ.

ಯಾಕೆಂದರೆ ಈ ಸೀರಿಯಲ್ ಕಥೆ ನಿಂತಿರೋದೆ ಸಿಹಿ ಎಂಬ ಪುಟ್ಟ ಹುಡುಗಿ ಪಾತ್ರದ ಮೇಲೆ. ಆ ಪಾತ್ರ ಸೀರಿಯಲ್ ಶುರುವಾದಾಗಿಂದ ವೀಕ್ಷಕರು ಮನಸ್ಸಲ್ಲಿ ಕೂತುಬಿಟ್ಟಿದೆ. ಮಾತ್ರ ಅಲ್ಲ, ಇಡೀ ಸೀರಿಯಲ್‌ಗೆ ಟಿಆರ್‌ಪಿ ಬರ್ತಿರೋದೆ ಈ ಪಾತ್ರದಿಂದ ಅನ್ನೋ ಹಾಗಾಗಿದೆ. ಆದರೆ ಸಡನ್ನಾಗಿ ಆ ಪಾತ್ರವನ್ನು ಕೊನೆಗಾಣಿಸೋಕೆ ಸೀರಿಯಲ್ ಟೀಮ್ ಹೊರಟಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಇನ್ನೂ ರಿವೀಲ್ ಮಾಡಿಲ್ಲ. ಆದರೆ ವೀಕ್ಷಕರ ಈ ರಿಕ್ವೆಸ್ಟ್ ನಿಂದ ಸೀರಿಯಲ್ ಟೀಮ್ ಮನಸ್ಸು ಬದಲಾಯಿಸಲು ಹೊರಟಿದ್ಯಾ?

Tap to resize

Latest Videos

undefined

ಹೆತ್ತ ಮಗಳ ಮೇಲೆ ಜೀವ ಇರಿಸಿಕೊಂಡದ್ದೇ ತಪ್ಪಾಗೋಯ್ತಾ? ಕಂಬಿಯ ಹಿಂದೆ ಸೀತಾ?

ಬಹುಶಃ ಈ ಸೀರಿಯಲ್‌ನಲ್ಲಿ ಪ್ರಧಾನ ಪಾತ್ರವಾಗಿರೋ ಸಿಹಿ ಪಾತ್ರವನ್ನು ನಿಭಾಯಿಸ್ತಾ ಇರೋ ಪುಟಾಣಿ ಬೇಬಿ ರಿತೂ ಸಿಂಗ್‌ಗೆ ಶಿಕ್ಷಣಕ್ಕೆ ಫೋಕಸ್ ನೀಡಬೇಕಾಗಿರಬಹುದು. ಈ ವಯಸ್ಸಲ್ಲಿ ಸ್ಕೂಲ್ ಬಹಳ ಮುಖ್ಯ ಆಗಿರುವ ಕಾರಣ ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಆಕೆಯ ಪಾತ್ರಕ್ಕೆ ಕೊನೆ ಹಾಡ್ತಾ ಇರಬಹುದು. ಆದರೆ ಆಕೆ ಇಲ್ಲದೆ ಈ ಸೀರಿಯಲ್ ನಿಲ್ಲೋದಿಲ್ಲ ಅನ್ನೋದನ್ನು ಅರಿಯದಷ್ಟು ದಡ್ಡರಲ್ಲಿ ಈ ಸೀರಿಯಲ್ ಮಂದಿ. ಇಲ್ಲೀವರೆಗೆ ಆಕೆ ಮನೆ ಮಗುವಷ್ಟೆ ಆಗಿದ್ದಳು. ಇನ್ನು ಮುಂದೆ ಆಕೆಯನ್ನು ಬೇರೆ ರೀತಿ ಅಂದರೆ ಈ ಹಿಂದೆ 'ಅಂಜಲಿ' ಅನ್ನೋ ಸೀರಿಯಲ್ ನಲ್ಲಿ ಬರ್ತಿದ್ದ ಹಾಗೆ ಪುಟ್ಟ ಗುಮ್ಮನಾಗಿ ತೋರಿಸೋ ಪ್ಲಾನ್ ಇರಬಹುದು.

ಅಥವಾ ಈಕೆ ಮುಂದೆ ಸೀತಾ ರಾಮರ ಮಗಳಾಗಿಯೇ ಹುಟ್ಟಿ ಬರ್ತಾಳೆ ಅಂತ ತೋರಿಸೋ ಪ್ಲಾನ್ ಇರಬಹುದು. ಹೀಗಾದಾಗ ಲೀಗಲ್ ಇಶ್ಯೂಗಳಿಲ್ಲದೆ ಅವಳೇ ರಾಮ ಸೀತೆಯ ಅಧಿಕೃತ ಮಗಳಾಗ್ತಾಳೆ ಅಂತ ತೋರಿಸಬಹುದು. ಇದ್ಯಾವುದೂ ಅಲ್ಲ ಅಂತಾದ್ರೆ ಇದನ್ನು ಸಿಹಿಯ ಕನಸಾಗಿಯೋ, ಸೀತಾ ಅಥವಾ ರಾಮರ ಕನಸಾಗಿಯೋ ತೋರಿಸಬಹುದು. ಅಥವಾ ಸಿಹಿ ಅಣ್ಣ ಭಾರ್ಗವಿ ಮಗನ ಕನಸಲ್ಲೂ ಈ ರೀತಿ ಬಂದಿರಬಹುದು. ಏಕೆಂದರೆ ಈ ಪ್ರೋಮೋದಲ್ಲಿ ಸಿಹಿ ಸಾವನ್ನು ಫೇರಿಟೇಲ್ ನಂತೆ ಆನಿಮೇಶನ್ ಟಚ್ ಕೊಟ್ಟು ತೋರಿಸಲಾಗಿದೆ. ಹೀಗಾಗಿ ಇದು ಕಾರ್ಟೂನ್ ನೋಡೋ ಮಕ್ಕಳ ಕನಸಾಗಿ ಕಾಣಬಹುದು.

ಸೈಕೋ ಜಯಂತ್ ವರ್ತನೆಗೆ ಚಿನ್ನುಮರಿ ಕಣ್ಣೀರು, ನೀನೇ ಮಾಡ್ಕೊಂಡಿದ್ದು, ಅನುಭವಿಸು ಅಂತಿರೋ ನೆಟ್ಟಿಗರು

ಏನೇ ಆದರೂ ಸಿಹಿ ಪಾತ್ರ ಇಲ್ಲಾಂದ್ರೆ ನಾವು ಈ ಸೀರಿಯಲ್ ನೋಡಲ್ಲ ಅಂತಿದ್ದಾರೆ ಈ ಸೀರಿಯಲ್ ಫ್ಯಾನ್ಸ್. 'ಸಿಹಿ' ಪಾತ್ರವನ್ನ ದಯವಿಟ್ಟು ಎಂಡ್ ಮಾಡಬೇಡಿ ಅನ್ನೋ ರಿಕ್ವೆಸ್ಟ್ ಮೇಲಿಂದ ಮೇಲೆ ಪ್ರತೀ ಪ್ರೋಮೋದಲ್ಲೂ ಹರಿದು ಬರ್ತಾನೇ ಇದೆ. ಸೋ ಇದು ಸೀರಿಯಲ್ ಟೀಮ್ ಮನಸು ಕರಗಿಸುತ್ತಾ ಇಲ್ಲಾ ಅವರು ಬೇರೆಯ ಏನಕ್ಕೋ ಸ್ಕೆಚ್ ಹಾಕ್ತಿದ್ದಾರ ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡಬಹುದು.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!