ಹೆತ್ತ ಮಗಳ ಮೇಲೆ ಜೀವ ಇರಿಸಿಕೊಂಡದ್ದೇ ತಪ್ಪಾಗೋಯ್ತಾ? ಕಂಬಿಯ ಹಿಂದೆ ಸೀತಾ?

By Suchethana D  |  First Published Nov 5, 2024, 6:31 PM IST

ಸಿಹಿಯನ್ನು ಬಿಟ್ಟಿರಲಾಗದೇ ಮೇಘಶ್ಯಾಮ್​  ಮನೆಗೆ ಹೋದ ಸೀತಾಳ ಮೇಲೆ ಕಾನೂನು ಕ್ರಮ ಜರುಗುತ್ತಾ? ಸೀತಾ ಅರೆಸ್ಟ್​  ಆಗ್ತಾಳಾ? 
 


ಒಂದೆಡೆ ಕಾನೂನು, ಇನ್ನೊಂದೆಡೆ ಮಾತೃ-ಪಿತೃ ವಾತ್ಸಲ್ಯ. ಇವೆರಡರ ನಡುವೆ ಒಂದನ್ನು ಆಯ್ಕೆ ಮಾಡಿ ಎಂದರೆ ಬಹುತೇಕ ಎಲ್ಲರೂ ಹೇಳುವುದು ವಾತ್ಸಲ್ಯದ ಮುಂದೆ ಎಲ್ಲವೂ ನಗಣ್ಯ ಎನ್ನುವುದು. ಆದರೆ ಕಾನೂನು ಹಾಗೆ ಹೇಳಲ್ಲ. ಕಾನೂನು ಎಂಬುದು ಬಂದರೆ ಅದರ  ಮುಂದೆ ಎಲ್ಲವೂ-ಎಲ್ಲರೂ ತಲೆಬಾಗಲೇಬೇಕು ಎನ್ನುವುದು ಸತ್ಯ.  ಆದ್ದರಿಂದ ಯಾವುದು ಮೇಲು ಎಂಬ ಪ್ರಶ್ನೆಗೆ ಉತ್ತರಿಸೋದು ಬಲು ಕಷ್ಟ. ಇದೀಗ ಸೀತಾರಾಮ ಸೀರಿಯಲ್​ ಸೀತಾ-ರಾಮರ ಕಥೆಯೂ ಇದೇ ಆಗಿದೆ. ಮೇಘಶ್ಯಾಮ್ ಮನೆಗೆ ಸಿಹಿ ಬಂದಿದ್ದಾಳೆ. ಶಾಲಿನಿಗೆ ಮಕ್ಕಳು ಎಂದರೆ ಆಗಿ ಬರುವುದಿಲ್ಲವಾದರೂ, ಸಿಹಿಯನ್ನು ಗಂಡನ ಒತ್ತಾಯಕ್ಕೆ ಕರೆದುಕೊಂಡು ಬಂದಿದ್ದಾಳೆ. ಅವಳಿಗೆ ಸಿಹಿಯ ಮೇಲೆ ಯಾವ ಮಮಕಾರ, ಅಕ್ಕರೆಯೂ ಇಲ್ಲ. ಇವಳೊಬ್ಬಳು ನಮ್ಮ ಜೀವನಕ್ಕೆ ಹೊರೆ ಎಂದೇ ಅವಳು ಭಾವಿಸುತ್ತಿದ್ದಾರೆ. ಅದೇ ಇನ್ನೊಂದೆಡೆ ಚಾಂದನಿಗೆ ಸೀತಾಳ ಮೇಲೆ ಸಿಟ್ಟು.
 
ಇವೆಲ್ಲರ ನಡುವೆ ಬಲಿಯಾಗುತ್ತಿರುವುದು ಪುಟಾಣಿ ಸಿಹಿ. ಮೇಘಶ್ಯಾಮ್​ ಅಂತೂ ಸಿಹಿಯನ್ನು ಬಿಡುವಂತೆ ಕಾಣುವುದಿಲ್ಲ. ಇತ್ತ ಮೇಘಶ್ಯಾಮ್​ಗೆ ಸಹಾಯ ಮಾಡಲು ಕಾನೂನಿನ ನೆರವು ಪಡೆದ ರಾಮ್​ಗೆ ಸಿಹಿಯೇ ಅವನ ಮಗಳು ಎನ್ನುವುದು ಕೇಳಿ ಮರ್ಮಾಘಾತವಾಗಿದೆ. ಅವನ ಮಗಳನ್ನು ಹುಡುಕಲು ಮಾಡಿದ ಪ್ರಯತ್ನ ಅವನಿಗೇ ಮುಳ್ಳಾಗಿ ಬಿಟ್ಟಿದೆ. ಇನ್ನು ಸೀತಾಳ ವಿಷಯವಂತೂ ಹೇಳುವುದೇ ಬೇಡ.  ಅತ್ತ ಸಿಹಿ ಕೂಡ ಮೇಘಶ್ಯಾಮ್​  ಮನೆಯಲ್ಲಿ ಸುಖವಾಗಿ ಇಲ್ಲ. ಹೆತ್ತ ಸೀತಮ್ಮನನ್ನು ಬಿಟ್ಟು ಇರುವುದು ಆಕೆಗೆ ಅದೆಷ್ಟು ಕಷ್ಟವಾಗಿರಬೇಕಿಲ್ಲ, ಅಷ್ಟಕ್ಕೂ ಪುಟಾಣಿಗೆ ಈ ಬಾಡಿಗೆ ತಾಯಿ, ಕಾನೂನು ಏನು ಗೊತ್ತು? ಅಲ್ಲಿ ಇರುವುದು ಕೇವಲ ಅಮ್ಮನ ಮೇಲಿನ ವಾತ್ಸಲ್ಯ ಅಷ್ಟೇ.

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

Tap to resize

Latest Videos

undefined

ಸೀತಾ ರಾಮ ಇಬ್ಬರಿಗೂ ಸಿಹಿಯನ್ನು ಬಿಟ್ಟಿಡಲು ಆಗುತ್ತಿಲ್ಲ. ಇಬ್ಬರೂ ಪ್ಲ್ಯಾನ್​ ಮಾಡಿ ಮೇಘಶ್ಯಾಮ್​  ಮನೆಗೆ ಬಂದಿದ್ದಾರೆ. ಸೀತಾ ಕದ್ದುಮುಚ್ಚಿ ಒಳಗೆ ಹೋಗುತ್ತಿದ್ದಂತೆಯೇ ಶಾಲಿನಿ ಸಿಹಿ ಹಠ ಮಾಡಿದಳು ಎಂದು ಹೊಡೆಯಲು ಮುಂದಾಗಿದ್ದಾಳೆ. ಅದನ್ನು ನೋಡಿ ಸೀತಾಳಿಗೆ ಕೋಪ ಉಕ್ಕೇರಿದೆ. ಶಾಲಿನಿ ಮೇಲೆ ರೇಗಾಡಿದ್ದಾಳೆ. ಈಗ ಶಾಲಿನಿ ಸೀತಾಳ ಮೇಲೆ ಕಂಪ್ಲೇಂಟ್​ ಕೊಡಲು ಮುಂದಾಗಿದ್ದಾಳೆ. ಕಾನೂನಿನ ಪ್ರಕಾರ ಕೋರ್ಟ್​ ಅನುಮತಿ ಇಲ್ಲದೇ ಅವಳು ಅಲ್ಲಿಗೆ ಬಂದದ್ದು ತಪ್ಪು. ಸಾಲದು ಎನ್ನುವುದಕ್ಕೆ ಬಾಡಿಗೆ ತಾಯಿಯಾಗಿ ಮಗುವನ್ನು ಕದ್ದುಕೊಂಡು ಹೋಗಿರುವ ಆರೋಪವೂ ಇದೆ. ಕಾನೂನಿನ ದೃಷ್ಟಿಯಲ್ಲಿ ಸೀತಾ ಸದ್ಯ ಆರೋಪಿ. ಆದರೆ ಮಾತೃವಾತ್ಸಲ್ಯದ ಮುಂದೆ ಯಾವ ಕಾನೂನೂ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಕಾನೂನಿಗೆ ಅದ್ಯಾವುದೂ ಬೇಡ.

ಈಗ ಮೇಘಶ್ಯಾಮ್​ ಮತ್ತು ಶಾಲಿನಿ ಕೋರ್ಟ್​ ಮೊರೆ ಹೋಗಲು ಪ್ಲ್ಯಾನ್​ ಹಾಕಿರೋ ಕಾರಣ, ಸೀತಾಳಿಗೆ ಜೈಲು ಆಗುತ್ತಾ? ಕಾನೂನು ಮೀರಿರುವ ಆಕೆಗೆ ಮಾತೃವಾತ್ಸಲ್ಯವೇ ಕಂಟಕವಾಗುತ್ತಾ ಎನ್ನುವುದು ಈಗಿರುವ ಪ್ರಶ್ನೆ. ಅದೇ ಇನ್ನೊಂದೆಡೆ,  ಶಾಲಿನಿಗೆ ಈ ಮಗು ಇಷ್ಟವಿಲ್ಲ ಎನ್ನುವುದು ಮೇಘಶ್ಯಾಮ್​ಗೆ ಗೊತ್ತು. ಬಾಡಿಗೆ ತಾಯಿ ಸುಳ್ಳು ಹೇಳಿದ್ದಲ್ಲ, ಬದಲಿಗೆ ಶಾಲಿನಿನೇ ಮಗು ಸತ್ತಿರುವುದಾಗಿ ಸುಳ್ಳು ಹೇಳಿದ್ದಾಳೆ ಎನ್ನುವ ಸತ್ಯ ಅವನಿಗೆ ತಿಳಿದಿದೆ. ಅಷ್ಟೇ  ಅಲ್ಲದೇ, ಸಿಹಿಯ ಮೇಲೆ ಸೀತಾ ಮತ್ತು ರಾಮ್​ ಅದೆಷ್ಟರಮಟ್ಟಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ ಎನ್ನುವ ವಿಷಯವೂ ಅವನಿಗೆ ಗೊತ್ತು. ಆದರೂ ಮಗುವನ್ನು ಆತ  ಬಿಟ್ಟು ಕೊಡಲು ರೆಡಿ ಇಲ್ಲ. ಇವೆಲ್ಲದರ ನಡುವೆ ಅಮ್ಮ-ಮಗಳು ಜರ್ಜರಿತರಾಗಿದ್ದಾರೆ. ಮುಂದೇನು? 

ಲವರ್​ ಜೊತೆ ಹನಿಮೂನ್​ಗೆ ಹೊರಟ ಪತಿಗೆ, ಪತ್ನಿಯದ್ದೇ ಅಡುಗೆ! ಹೀಗಿದೆ ನೋಡಿ ಭಾಗ್ಯಳ ಭಾಗ್ಯ....

click me!