ಬೋರ್ಡಿಂಗ್ ಸ್ಕೂಲ್ ಆಯ್ತು, ಈಗ ತಮ್ಮನ ಬೇಡಿಕೆ: ಈ ಕಿಲಾಡಿ ತಾತಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ವಾ?

By Bhavani Bhat  |  First Published Aug 27, 2024, 3:34 PM IST

 ಸೀತಾರಾಮ ಸೀರಿಯಲ್‌ನ ಕಿಲಾಡಿ ತಾತ ಸೂರಿ ಅಲಿಯಾಸ್‌ ಸೂರ್ಯಪ್ರಕಾಶ್ ದೇಸಾಯಿ ಮತ್ತೆ ಪುಟ್ಟ ಸಿಹಿನ ರಾಮ್ ಸೀತಾ ಮೇಲೆ ಛೂ ಬಿಟ್ಟಿದ್ದಾರೆ. ಈ ತಾತಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಗೊಣಗ್ತಿದ್ದಾರೆ ಫ್ಯಾನ್ಸ್‌.


ಸೀತಾರಾಮ ಸೀರಿಯಲ್‌ನ ಸೂರಿ ತಾತ ಸಖತ್ ಕಿಲಾಡಿ. ಈ ತಾತಂಗೆ ದೂರದೃಷ್ಟಿ ಭಾಳ ಇದೆ. ಅದರಪ್ಪನಷ್ಟು ಕಿಲಾಡಿತನ ಇದೆ. ಸಖತ್ ಪೋಲಿ, ತುಂಟತನ ತುಂಬಿರೋ ಈ ತಾತ ಎಡವಟ್ಟು ಮಾಡೋದ್ರಲ್ಲೂ ಹಿಂದೆ ಬಿದ್ದೋರಲ್ಲ. ಈ ತಾತನ ಮೈನಸ್ ಪಾಯಿಂಟ್ ಅಂದರೆ ಸೊಸೆ ಭಾರ್ಗವಿಯನ್ನು ಪೂರ್ತಿಯಾಗಿ ನಂಬಿರೋದು. ಆಕೆ ಮಾಡಿದ್ದೆಲ್ಲ ಸರಿ ಅಂತ ನಂಬಿರೋದು. ಅದಕ್ಕೆ ಸರಿಯಾಗಿ ನಯವಾಗಿ ಬತ್ತಿ ಇಡೋದೂ ಈ ವಿಲನ್ ಭಾರ್ಗವಿಗೆ ನೀರು ಕುಡಿದಷ್ಟೇ ಸಲೀಸು. ಎಷ್ಟೇ ಆದ್ರೂ ಮೇಲಿರೋ ಭಗವಂತ ವಿಲನ್‌ಗಳ ಕೈಗೆ ಪೂರ್ತಿ ಸ್ವಾತಂತ್ರ್ಯ ಕೊಡಲ್ಲ, ಜಸ್ಟ್ ಸ್ಯಾಂಪಲ್‌ ತೋರ್ಸಿ ಜೂಟಾಟ ಆಡ್ತಾನೆ ಅನ್ನೋ ಮಾತಿದೆಯಲ್ಲಾ, ಅದೇ ಥರ ಈ ವಿಲನ್‌ ಭಾರ್ಗವಿ ತಾನು ಹೇಳಿದಂತೆ ತಾತನನ್ನ ಕುಣಿಸೋದಕ್ಕೆ ನೋಡಿದ್ರೂ ಅವಳು ಅಂದುಕೊಂಡದ್ದೆಲ್ಲ ಆಗ್ತಿಲ್ಲ. ಪರಿಸ್ಥಿತಿಯೇ ರಾಮ ಸೀತೆ ಸಿಹಿಯನ್ನು ಒಂದು ಮಾಡ್ತಿದೆ. ಜೊತೆಗೆ ರಾಮ ಸೀತೆ ಸಿಹಿಗೆ ಕಷ್ಟ ಬಂದರೂ ಅದು ಸುಖಾಂತ್ಯ ಕಾಣೋ ಹಾಗೆ ಆಗುತ್ತೆ.

ಇನ್ನು ಸದ್ಯ ಈ ಸೀರಿಯಲ್‌ನಲ್ಲಿ ಹಠ ಮಾಡಿ ಬೋರ್ಡಿಂಗ್‌ ಸ್ಕೂಲಿಗೆ ಹೋಗಿದ್ದ ಸಿಹಿ ಈಗ ಮನೆಗೆ ಬಂದಿದ್ದಾಳೆ, ಸಿಹಿ ಮನೆಗೆ ಬಂದಿರೋದು ಎಲ್ಲರಿಗೂ ಖುಷಿ ತಂದಿದೆ. ತನ್ನ ಬೋರ್ಡಿಂಗ್‌ ಸ್ಕೂಲಿನ ಕಥೆಯನ್ನೆಲ್ಲ ಸಿಹಿ ಅಪ್ಪ ಅಮ್ಮನ ಹತ್ರ ಹೇಳಿಕೊಂಡಿದ್ದಾಳೆ.

Tap to resize

Latest Videos

ಅಶೋಕನ ಹೆಂಡತಿ ಪ್ರಿಯಾಗೆ ಕ್ಯಾನ್ಸರ್ ಮುನ್ಸೂಚನೆ ಕೊಟ್ರಾ ವೈದ್ಯರು!

'ನನಗೆ ಫ್ರೆಂಡ್ಸ್ ಯಾರೂ ಇರಲಿಲ್ಲ, ನನ್ನ ಬಟ್ಟೆ ನಾನೇ ಹಾಕಿಕೊಳ್ಳಬೇಕಿತ್ತು, ನಾನೇ ಸ್ನಾನ ಮಾಡಬೇಕಿತ್ತು, ಮಲಗುವಾಗ ಯಾರೂ ಕಥೆ ಹೇಳುತ್ತಿರಲಿಲ್ಲ. ತುಂಬ ಬೇಸರ ಆಯ್ತು” ಅಂತ ಸಿಹಿ ಸೀತಾಳ ಮುಂದೆ ಹೇಳಿದ್ದಳು. ಇನ್ನು ರಾಮ್ ಕೂಡ ಮಗಳನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸೋದಿಲ್ಲ ಅಂತ ಹೇಳಿದ್ದಾನೆ. ಸೋ ಇನ್ಮೇಲೆ ಸಿಹಿ ಮನೆಯಲ್ಲಿ ಸೀತಾ ರಾಮನ ಜೊತೆಗೆ ಇರ್ತಾಳೆ ಅನ್ನಬಹುದಾದರೂ ಡಾ ಮೇಘಶ್ಯಾಮ್ ಪಾತ್ರ ಇರುವ ಕಾರಣ ಅವಳ ಬೋರ್ಡಿಂಗ್ ಸ್ಕೂಲ್ ಎಪಿಸೋಡ್‌ ಮುಂದುವರಿಯೋ ಸಾಧ್ಯತೆಯೂ ಇದೆ.

ಸದ್ಯಕ್ಕಂತೂ ಮನೆಯಿಂದಲೇ ಸ್ಕೂಲಿಗೆ ಹೋಗ್ತೀನಿ ಅಂತಿರೋ ಸಿಹಿಗೆ ಅವಳ ತಾತ ಸೂರಿ ಹಿಂದೆ ಬಿದ್ದಿದ್ದಾರೆ. ಈ ತಾತಂಗೆ ಈಗ ಮರಿ ಮೊಮ್ಮಗುವಿನ ಚಿಂತೆ.

ಸಿಹಿಯ ಗುಟ್ಟು ತಿಳಿದಿರೋ, ಮೇಲಿಂದ ಮೇಲೆ ಶಾಕ್​ ಕೊಡ್ತಿರೋ ನಿಗೂಢ ವೈದ್ಯೆ ಅನಂತಲಕ್ಷ್ಮಿ ಯಾರು?

ಹೀಗಾಗಿ ಈ ತಾತ ರಾಮ್-ಸೀತಾಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರೆ. 'ನೀವಿಬ್ರೂ ಒಟ್ಟಿಗೆ ಟೈಮ್ ಕಳೆಯಿರಿ, ಹನಿಮೂನ್‌ಗೆ ಹೋಗಿ' ಅಂತೆಲ್ಲ ಈ ತಾತ ಗೋಳು ಹೊಯ್ಕೊಳ್ತಿದ್ದಾರೆ. ಇದನ್ನೆಲ್ಲ ಕೇಳಿ ಕೇಳಿ ಸೀತಾ, ರಾಮ್‌ಗೆ ಬೇಸರ ಆಗಿದೆ. ಇನ್ನೊಂದು ಕಡೆ ಇನ್ನೊಂದು ಮಗು ಬೇಡ ಅಂತ ರಾಮ್-ಸೀತಾ ಫಿಕ್ಸ್ ಆಗಿದ್ದಾರೆ. ಆದರೆ ಈ ತಾತ ಅಷ್ಟು ಸುಲಭಕ್ಕೆ ಬಿಡೋ ಲಕ್ಷಣ ಕಾಣ್ತಿಲ್ಲ. ಮಗುವಿನ ಬಾಯಿಂದ ಹೇಳಿಸಿದರೆ ತನ್ನ ಪ್ಲಾನ್ ವರ್ಕೌಟ್ ಆಗಬಹುದು ಅನ್ನೋದು ಅವರ ತಲೆಗೆ ಬಂದಿದೆ. ಹೀಗಾಗಿ ಅವರು ಸಿಹಿ ಬಳಿ ಹೇಗಾದ್ರೂ ಮಾಡಿ ಅಪ್ಪ ಅಮ್ಮನನ್ನು ಒಪ್ಪಿಸಿ ನಿನಗೊಬ್ಬ ತಮ್ಮ ಬರೋ ಹಾಗೆ ಮಾಡು ಅಂತ ದುಂಬಾಲು ಬಿದ್ದಿದ್ದಾರೆ. 'ನಿನ್ನ ಅಪ್ಪ ಅಮ್ಮ ನಿಂಗೊಬ್ಬ ಮುದ್ದಾದ ತಮ್ಮನನ್ನು ಕೊಟ್ಟರೆ ನಾನು ಫುಲ್ ಖುಷಿಯಾಗ್ತೀನಿ' ಅಂತ ಪುಟ್ಟ ಸಿಹಿಯ ಕಿವಿ ಊದಿದ್ದಾರೆ. ಈ ವಿಷಯ ಕೇಳಿ ಸಿಹಿ ತಾಯಿ ಬಳಿ ತಮ್ಮ ಬೇಕು ಅಂತ ಕೇಳ್ತೀನಿ ಎಂದಿದ್ದಾಳೆ. ಈ ವಿಷಯ ಇನ್ನೆಲ್ಲಿಗೆ ಮುಟ್ಟತ್ತೋ ಏನೋ! ಈ ವಿಷಯವೇ ಸೀತಾ-ರಾಮ್ ಮಧ್ಯೆ ಅಂತರ ತರಬಹುದು ಎಂಬ ಊಹೆ ವೀಕ್ಷಕರದು.

ಮುಖ್ಯಮಂತ್ರಿ ಚಂದ್ರು ಸೂರಿ ತಾತ ಪಾತ್ರದಲ್ಲಿ ಮಸ್ತಾಗಿ ನಟಿಸುತ್ತಿದ್ದಾರೆ. ಅವರ ನಟನೆಗೆ ವೀಕ್ಷಕರು ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!