ಅಶೋಕನ ಹೆಂಡತಿ ಪ್ರಿಯಾಗೆ ಕ್ಯಾನ್ಸರ್ ಮುನ್ಸೂಚನೆ ಕೊಟ್ರಾ ವೈದ್ಯರು!

By Sathish Kumar KH  |  First Published Aug 27, 2024, 2:49 PM IST

ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾಗೆ ಗಂಭೀರ ಕಾಯಿಲೆ ಇರುವ ಶಂಕೆ ವ್ಯಕ್ತವಾಗಿದ್ದು, ಅಶೋಕ್ ಮುಂದೆ ದೊಡ್ಡ ಸವಾಲು ಎದುರಾಗಿದೆ. ವೈದ್ಯರ ಸೂಚನೆಯಂತೆ ಮುಂದಿನ ಪರೀಕ್ಷೆಗಳನ್ನು ಮಾಡಿಸಲು ನಿರ್ಧರಿಸಿದ್ದಾರೆ.


ಬೆಂಗಳೂರು (ಆ.27): ಸೀತಾರಾಮ ಧಾರಾವಾಹಿಯಲ್ಲಿ ರಾಮನ ಸ್ನೇಹಿತ ಅಶೋಕ್ ಹಾಗೂ ಸೀತಾಳ ಸ್ನೇಹಿತೆ ಪ್ರಿಯಾಗೂ ಪ್ರೀತಿ ಅಂಕುರಿಸಿ ಮದುವೆ ಮಾಡಿಸಿದ್ದ ನಿರ್ದೇಶಕರು ಈಗ ಅವರಿಬ್ಬರ ಸಂಸಾರಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ತಾನು ಗರ್ಭಿಣಿ ಎಂದು ವೈದ್ಯರ ಬಳಿ ಚೆಕಪ್‌ಗೆ ಹೋದ ಪ್ರಿಯಾಗೆ ನೀವು ಗರ್ಭಿಣಿ ಆಗಿಲ್ಲ ಎಂದು ಹೇಳುವ ಜೊತೆಗೆ ಬದಲಿ ವೈದ್ಯರನ್ನು ಕೂಡಲೇ ಸಂಪರ್ಕ ಮಾಡುವಂತೆಯೂ ಸೂಚನೆ ನೀಡಿದ್ದಾರೆ. ಅಂದರೆ ಪ್ರಿಯಾಗೆ ಗಂಭೀರ ಕಾಯಿಲೆ ಇರುವ ಮುನ್ಸೂಚನೆ ನೀಡಿರುವ ವೈದ್ಯರ ಮಾತು ಕೇಳಿದರೆ ಪ್ರಿಯಾಗೆ ಕ್ಯಾನ್ಸರ್ ಇದೆಯಾ ಎಂಬ ಅನುಮಾನವೂ ಕಾಡುತ್ತಿದೆ.

ಹೌದು, ಸೀತಾರಾಮ ಧಾರಾವಾಹಿಯಲ್ಲಿ ಕ್ಯೂಟೆಸ್ಟ್ ಜೋಡಿಗಳಲ್ಲಿ ಹಾಗೂ ನಿಷ್ಕಲ್ಮಶ ಮನಸುಗಳನ್ನು ಹೊಂದಿದ್ದ ಜೋಡಿ ಎಂದತೆ ಅದು ಪ್ರಿಯಾ ಅಶೋಕ್ ಜೋಡಿ ಆಗಿದೆ. ಒಂದು ಅವಧಿಯಲ್ಲಿ ಇವರಿಬ್ಬರ ಪ್ರೀತಿಯನ್ನು ನೋಡಿದ ವೀಕ್ಷಕರು ನೀವು ಸೀತಾ ರಾಮಗೆ ಮದುವೆ ಮಾಡಿಸದಿದ್ದರೂ ಸರಿ, ಅಶೋಕ್-ಪ್ರಿಯಾಗೆ ಮದುವೆ ಮಾಡಿಸಿ ಪುಣ್ಯ ಕಟ್ಕೊಳಿ ಅಶೋಕ್ ಎಂದು ಒತ್ತಾಯಿಸಿದ್ದರು. ಆದರೆ, ವೀಕ್ಷಕರ ನಿರೀಕ್ಷೆ ಹುಸಿ ಮಾಡದ ನಿರ್ದೇಶಕರು ಅಶೋಕ್ ಪ್ರಿಯಾಗೆ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಸೀತಾ-ರಾಮ ಅವರಿಗಿಂತಲೂ ಮೊದಲು ಮದುವೆ ಮಾಡಿ ವೀಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದರು.

Tap to resize

Latest Videos

ನಟಿ ಪದ್ಮಜಾ ರಾವ್‌ಗೆ ಜೈಲು ಶಿಕ್ಷೆ: ಚೆಕ್ ಬೌನ್ಸ್ ಆರೋಪ ಸಾಬೀತು

ಈಗ ಅಶೋಕ್ ಪ್ರಿಯಾ ಜೋಡಿಗೆ ಪ್ರಾಣ ಸ್ನೇಹಿತ ರಾಮನಿಂದ ಒಂದು ದೊಡ್ಡ ಮನೆಯನ್ನೂ ಗಿಫ್ಟ್ ಆಗಿ ಕೊಡಲಾಗಿದೆ. ಇವರಿಬ್ಬರೂ ಸುಖ ಸಂಸಾರ ಮಾಡುತ್ತಾ ಮನೆಗೊಂದು ಪುಟ್ಟ ಮಗುವಿನ ನಿರೀಕ್ಷೆಯಲ್ಲಿರುವಾಗ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ಪ್ರಿಯಾಗೆ ವಾಂತಿ ಆದ ತಕ್ಷಣವೇ ಅವರ ತಾಯಿ ಹಿಂದೂ ಮುಂದು ನೋಡದೇ ನೀನು ತಾಯಿ ಆಗಿದ್ದೀಯ ಎಂಬ ಭಾವನೆಯನ್ನು ತುಂಬಿ ತರಹೇವಾರಿ ತಿಂಡಿ ತಿನಿಸುಗಳನ್ನು ತಿನಿಸುತ್ತಾ, ಆಕೆಯ ತಾಯ್ತನದ ಬಗ್ಗೆ ಹೆಚ್ಚು ಬಯಕೆ ಮೂಡುವಂತೆ ಮಾಡಿದ್ದಾರೆ. ಇದಕ್ಕೆ ಪ್ರಿಯಾಳ ನಾದಿನಿ ಅಂಜಲಿ ಮೊದಲು ಒಮ್ಮೆ ತಾಯಿ ಆಗಿರುವ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಕ್ಕೆ ಪ್ರಿಯಾಳ ತಾಯಿ ಆಕೆಯನ್ನು ಬೈಯುತ್ತಾಳೆ. ಇದರಿಂದ ಗರ್ಭಿಣಿ ಆಗಿರುವ ಬಗ್ಗೆ ಪರೀಕ್ಷೆಯನ್ನು ಮಾಡಿಸದೇ ತಾನು ತಾಯಿ ಆಗುತ್ತಿದ್ದೇನೆ ಎಂದು ಊರ ತುಂಬಾ ತಮಟೆ ಸಾರಿಸಿದ್ದ ಪ್ರಿಯಾಗೆ ವೈದ್ಯರು ಶಾಕ್ ಕೊಟ್ಟಿದ್ದಾರೆ.

ಅಶೋಕ್ ಹಾಗೂ ಪ್ರಿಯಾ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ ಪ್ರಿಯಾ ತಾಯಿ ಆಗಿಲ್ಲವೆಂದು ಹೇಳಿದ್ದಾರೆ. ಇದರಿಂದ ಅಶೋಕ್ ಹಾಗೂ ಪ್ರಿಯಾ ಇಬ್ಬರೂ ಶಾಕ್ ಆಗಿದ್ದಾರೆ. ಆದರೆ, ಇದಕ್ಕೂ ಮುಂದುವರೆದು ವೈದ್ಯರು ನೀವು ಕೂಡಲೇ ನಾನು ಸೂಚಿಸಿದ ಈ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಅಂದರೆ, ಇಲ್ಲಿ ಪ್ರಿಯಾ ಗರ್ಭಿಣಿ ಆಗದಿದ್ದರೂ ಆಕೆಗೆ ಅಂತಹ ಎಲ್ಲ ಸೂಚನೆಗಳು ಹಾಗೂ ಭಾವನೆಗಳು ಕಂಡುಬರುತ್ತಿರುವುದೇ ಗಂಭೀರ ಕಾಯಿಲೆ ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ, ಈಗ ಬೇರೊಬ್ಬ ವೈದ್ಯರ ತಪಾಸಣೆ ಮಾಡಿಸಿಕೊಳ್ಳಲು ಹೇಳಿದ್ದರೂ, ಯಾವ ಕಾಯಿಲೆ ಇರಬಹುದು ಎಂಬುದರ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಪ್ರಿಯಾಗೆ ಕ್ಯಾನ್ಸರ್ ಇರಬಹುದಾ.? ಅಥವಾ ಮನೋರೋಗ ಇರಬಹುದಾ.? ಎಂಬ ಅನುಮಾನವೂ ಎದುರಾಗಿದೆ.

ದರ್ಶನ್ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶಿಫ್ಟ್ , ನ್ಯಾಯಾಲಯದ ಒಪ್ಪಿಗೆಯೊಂದೇ ಬಾಕಿ!

ರಾಮನ ರಕ್ಷಣೆಗೆ ನಿಂತಿದ್ದ ಅಶೋಕನಿಗೆ ಡಬಲ್ ಟೆನ್ಷನ್: ಅಶೋಕನ ಪ್ರಾಣ ಸ್ನೇಹಿತ ರಾಮ್ ದೇಸಾಯಿಗೆ ತಮ್ಮ ಚಿಕ್ಕಮ್ಮನಿಂದಲೇ ತೊಂದರೆ ಆಗುತ್ತಿರುವುದನ್ನು ಅರಿತು ಯಾವಾಗಲೂ ರಾಮನ ರಕ್ಷಣೆಗೆ ನಿಲ್ಲುತ್ತಿದ್ದ ಅಶೋಕನಿಗೆ ದೊಡ್ಡದೊಂದು ಸಮಸ್ಯೆ ಎದುರಾಗಿದೆ. ಈಗ ಅಶೋಕನ ಹೆಂಡತಿ ಪ್ರಿಯಾಗೆ ಗಂಭೀರ ಕಾಯಿಲೆ ಇದೆ ಎಂದು ಗೊತ್ತಾದರೆ ರಾಮನನ್ನು ಕಾಪಾಡುವುದು, ಹೆಂಡತಿಗೆ ಸಮಯ ಕೊಡುವುದು ಹೇಗೆ? ಅವನ ನೋವಿಗೆ ಕೊನೆಯೇ ಇಲ್ಲವೇ ಎಂಬುದು ವೀಕ್ಷಕರ ಚಿಂತನೆಯಾಗಿದೆ.

click me!