ಸೀತಾರಾಮ ಸೀರಿಯಲ್ ಎಲ್ಲರ ಮುದ್ದಿನ ಮಗಳು ಸಿಹಿಗೆ ಕಾರು ಗುದ್ದಿದೆ. ಸಿಹಿ ಸೀತಾರಾಮರಿಂದ ದೂರವಾಗುವ ಸಮಯ ಹತ್ತಿರ ಬಂದಿದೆ. ಸೀರಿಯಲ್ ಗೆ ಬಿಗ್ ಟ್ವಿಸ್ಟ್ ಸಿಕ್ತಿದ್ದು, ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ.
ಝೀ ಕನ್ನಡ (Zee Kannada) ದಲ್ಲಿ ಪ್ರಸಾರವಾಗ್ತಿರುವ ಸೀತಾರಾಮ ಸೀರಿಯಲ್ (SeethaRaama) ದಿನಕ್ಕೊಂದು ತಿರುವು ಪಡೆಯುತ್ತಿದೆ. ಸೀತಾ – ಸಿಹಿ (Sihi) ಗುಟ್ಟು ಮನೆಯವರಿಗೆಲ್ಲ ತಿಳಿದಿದೆ. ಈ ಮಧ್ಯೆ ಸೀರಿಯಲ್ ಮತ್ತೊಂದು ಟ್ವಿಸ್ಟ್ ನೀಡಲು ನಿರ್ದೇಶಕರು ಮುಂದಾಗಿದ್ದಾರೆ. ಸೀರಿಯಲ್ ನಲ್ಲಿ ಸಿಹಿ ಪಾತ್ರವೇ ಇನ್ಮುಂದೆ ಇರೋದಿಲ್ವಾ? ಸೀತಾರಾಮನಿಂದ ಸಿಹಿ ದೂರವಾಗ್ತಾಳಾ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಕಾರಣ ಝೀ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ.
ಝೀ ಕನ್ನಡ ತನ್ನ ಇನ್ಸ್ಟಾ ಖಾತೆಯಲ್ಲಿ ಹೊಸ ಪ್ರೋಮೋ ಪೋಸ್ಟ್ ಮಾಡಿದೆ. ಅದ್ರಲ್ಲಿ ಸಿಹಿ, ಸೀತಾ ಹಾಗೂ ರಾಮ ಮಾರುಕಟ್ಟೆಯಲ್ಲಿರೋದನ್ನು ನೋಡ್ಬಹುದು. ಸಿಹಿ ಜೋಳ ಎನ್ನುತ್ತಿದ್ದಂತೆ ಸೀತಾ ಅದನ್ನು ಕೊಡಿಸಲು ಮುಂದಾಗ್ತಾರೆ. ಈ ವೇಳೆಗೆ ಫೋನ್ ಬಂದ ಕಾರಣ ರಾಮ್ ಅಲ್ಲಿಂದ ಹೋಗ್ತಾನೆ. ಸಿಹಿ ಕೈನಲ್ಲಿದ್ದ ವಸ್ತು ಕೆಳಗೆ ಬೀಳೋದ್ರಿಂದ ಅದನ್ನು ತೆಗೆಯಲು ಸೀತಾ ಮುಂದಾಗ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕಾರನ್ನು ನೋಡಿದ ಸಿಹಿ, ಅಮ್ಮನ ರಕ್ಷಣೆಗೆ ಮುಂದಾಗ್ತಾಳೆ. ಆದ್ರೆ ಕಾರು ಸಿಹಿಗೆ ಡಿಕ್ಕಿಹೊಡೆಯುವ ಕಾರಣ ಸಿಹಿ ನೆಲಕ್ಕೆ ಬೀಳ್ತಾಳೆ. ಸಿಹಿ ಆತ್ಮ, ಸೀತಾ ಮತ್ತು ರಾಮನ ಮುಂದೆ ಮಾತನಾಡುವಂತ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಭಾಗರ್ವಿ, ಚಾಲಕನಿಗೆ ಕರೆ ಮಾಡಿ ಕಥೆ ಮುಗಿಸುವಂತೆ ಆದೇಶ ಮಾಡ್ತಾಳೆ.
undefined
ಎಲ್ಲ ಬಿಟ್ಟು ರಾವಣನ ಪಾತ್ರವನ್ನೇಕೆ ಒಪ್ಪಿದ್ರು ಯಶ್, ಅವರೇ ಹೇಳಿದ್ದಾರೆ ಕೇಳಿ
ಈ ಪ್ರೋಮೋ ನೋಡಿದ ವೀಕ್ಷಕರು ಕೋಪಗೊಂಡಿದ್ದಾರೆ. ಸಿಹಿ ಇಲ್ಲದೆ ಸೀರಿಯಲ್ ನೋಡೋದು ಕಷ್ಟ, ಸೀತಾರಾಮ ಮತ್ತು ಸಿಹಿಯನ್ನು ದೂರ ಮಾಡ್ಬೇಡಿ ಎಂದು ಮನವಿ ಮಾಡಿದ್ದಾರೆ. ಇದು ಕನಸಾಗ್ಲಿ, ನನಸಾಗೋದು ಬೇಡ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಈ ಸೀನ್ ನೋಡಿ ಕಣ್ಣಲ್ಲಿ ನೀರು ಬಂತು ಅಂತ ಒಬ್ಬರು ಹೇಳಿದ್ರೆ, ಮನೆ ಮನೆ ಕಥೆಯಾಯ್ತು ಇನ್ಮುಂದೆ ದೆವ್ವದ ಕಥೆ ನೋಡ್ಬೇಕಾ ಎಂದು ಮತ್ತೊಬ್ಬರು ಹೇಳಿದ್ದಾರೆ. ಝೀ ಕನ್ನಡ ಎಲ್ಲ ಧಾರಾವಾಹಿಯಲ್ಲಿ ಪಾತ್ರಗಳನ್ನು ಸಾಯಿಸ್ತಿದೆ, ಇಂಥ ಟ್ವಿಸ್ಟ್ ಅಗತ್ಯವಿರಲಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ.
ಸೀತಾರಾಮದಲ್ಲಿ ಇಲ್ಲಿಯವರೆಗೆ ಸೀತಾ ಮುಚ್ಚಿಟ್ಟ ಗುಟ್ಟು ಹೊರಗೆ ಬಿದ್ದಿದೆ. ಸೀತಾ, ಸಿಹಿಯ ಬಾಡಿಗೆ ತಾಯಿ ಎಂಬುದು ಮನೆಯವರಿಗೆಲ್ಲ ತಿಳಿದಿದೆ. ತನ್ನ ಮಗುವನ್ನು ಸೀತಾ ಇಟ್ಕೊಂಡಿದ್ದಾಳೆ ಎಂಬ ಸತ್ಯ ಗೊತ್ತಾಗಿ ಶ್ಯಾಮ ಹಾಗೂ ಶಾಲಿನಿ ಗಲಾಟೆ ಮಾಡ್ತಿದ್ದಾರೆ. ಆದ್ರೆ ಸೀತಾ ಬಾಳಲ್ಲಿ ನಡೆದ ಎಲ್ಲ ವಿಷ್ಯವನ್ನು ಸರಿಯಾಗಿ ತಿಳಿಯುವ ರಾಮ್, ಸೀತಾಗೆ ಬೆಂಬಲವಾಗಿ ನಿಂತಿದ್ದಾನೆ. ಏನೇ ಕಷ್ಟಬಂದ್ರೂ ನಿನ್ನೊಂದಿಗಿರುವೆ ಎಂಬ ಭರವಸೆ ನೀಡಿದ್ದಾನೆ.
ಈ ಎಲ್ಲರ ಮಧ್ಯೆ ಭಾರ್ಗವಿ ತನ್ನ ಆಟ ಶುರು ಮಾಡಿದ್ದಾಳೆ. ಇಡೀ ಆಸ್ತಿಯನ್ನು ಕಬಳಿಸಲು, ಮಾವನಿಗೆ ಸೀತಾ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಮನೆಯಲ್ಲಿ ಸೀತಾರಾಮ ಮತ್ತು ಸಿಹಿ ಕಾಣದೆ ಹೋದಾಗ, ರಾಮನನ್ನು ಸೀತಾ ಕರೆದೊಯ್ದಿದ್ದಾಳೆಂದು ಮಾವನ ಮುಂದೆ ನಾಟಕವಾಡ್ತಿದ್ದು, ಅತ್ತ ಚಾಂದನಿಗೆ ರಾಮನ ಆಸೆ ತೋರಿಸಿ ತನ್ನ ಕೆಲಸ ಮಾಡಿಕೊಳ್ತಿದ್ದಾಳೆ.
ಶ್ವಾಸಕೋಶದ ಸಮಸ್ಯೆ ಮುಕ್ತಿಗೆ, ಮಕ್ಕಳಾಗೋದಕ್ಕೆ ಅರಳಿ ಮರನೇ ಯಾಕೆ? ಡಾ. ಗೌರಿಯಮ್ಮನವರ ಮಾತು ಕೇಳಿ...
ಸಿಹಿಯನ್ನು ಕಳೆದುಕೊಳ್ಳುವ ಭಯದಲ್ಲಿ ಸೀತಾ ಇದ್ರೆ, ಸಿಹಿ ನ್ಯಾಯಕ್ಕಾಗಿ ದೇವರ ಮೊರೆ ಹೋಗಿದ್ದಾಳೆ. ದೇವರಿಗೆ ತನ್ನ ನಿಜವಾದ ಅಪ್ಪ – ಅಮ್ಮನನ್ನು ತೋರಿಸಲು ದೇವಸ್ಥಾನಕ್ಕೆ ಕರೆದೊಯ್ದಿದ್ದಾಳೆ. ಈತ ಶ್ಯಾಮ್ ಹಾಗೂ ಶಾಲಿನಿ, ಚಾಂದನಿ ಮಾತು ಕೇಳಿ ರೊಚ್ಚಿಗೆದ್ದಿದ್ದು, ಸಿಹಿ ತಮಗೇಬೇಕು ಎನ್ನುವ ಹಠದಲ್ಲಿದ್ದಾರೆ. ಈಗಾಗಲೇ ಶ್ಯಾಮ್, ಸೀತಾ ಮನೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ಸೀತಾರಾಮನ ಜೊತೆ ಸಿಹಿ ಇರ್ತಾಳಾ ಅಥವಾ ಸಿಹಿ ಪಾತ್ರ ಅಂತ್ಯವಾಗುತ್ತಾ ಕಾದುನೋಡ್ಬೇಕಿದೆ.