ಮಾಡರ್ನ್​ ಡ್ರೆಸ್​ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ: ಪತಿ ಜೊತೆ ರೊಮಾಂಟಿಕ್​ ಡಾನ್ಸ್​ ವಿಡಿಯೋ ವೈರಲ್​

Published : Oct 23, 2024, 05:03 PM IST
ಮಾಡರ್ನ್​ ಡ್ರೆಸ್​ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ: ಪತಿ ಜೊತೆ ರೊಮಾಂಟಿಕ್​ ಡಾನ್ಸ್​ ವಿಡಿಯೋ ವೈರಲ್​

ಸಾರಾಂಶ

ಶ್ರೀರಸ್ತು ಶುಭಮಸ್ತು ಪೂರ್ಣಿ ಮಾಡರ್ನ್​ ಡ್ರೆಸ್​ ತೊಟ್ಟು ಅಮೃತಧಾರೆ ಜೀವಾ ಜೊತೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಈ ವಿಡಿಯೋ ನೋಡಿ ಉಫ್​ ಅಂತಿದ್ದಾರೆ ಫ್ಯಾನ್ಸ್​.    

ಈಕೆ ಶ್ರೀರಸ್ತು- ಶುಭಮಸ್ತು ಸೀರಿಯಲ್​ ಆದರ್ಶ ಸೊಸೆ ಪೂರ್ಣಿ. ಆತ ಅಮೃತಧಾರೆಯ ಆದರ್ಶ ಪತಿ ಜೀವನ್​. ಇವರಿಬ್ಬರೂ ಇದೀಗ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ! ಹೌದು. ಪೂರ್ಣಿ ಮತ್ತು ಜೀವನ್​ ಸೀರಿಯಲ್​ಗಳಲ್ಲಿ ಬೇರೆ ಬೇರೆಯವರ ಪತಿ ಮತ್ತು ಪತ್ನಿ. ಆದರೆ ರಿಯಲ್​ ಲೈಫ್​ನಲ್ಲಿ ಇವರಿಬ್ಬರೂ ದಂಪತಿ. ಅಷ್ಟಕ್ಕೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಅನಾಥೆ ಎನ್ನುವ ಕಾರಣಕ್ಕೆ ತಾತ್ಸಾರಕ್ಕೆ ಒಳಗಾಗಿರುವ ಈಕೆಯ ನಿಜ ತಂದೆ-ತಾಯಿ ಸಿಗುವ ಹೊತ್ತು ಬಂದಿದೆ. ಈಕೆ ತನ್ನ ಅತ್ತೆ ತುಳಸಿಗೆ  ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅದೇ ಇನ್ನೊಂದೆಡೆ ಜೀವನ್​.   ಮಾಡರ್ನ್​ ಹುಡುಗಿಯನ್ನು ಮದುವೆಯಾಗಿರೋ ಈ ಸಂಪ್ರದಾಯ ಕುಟುಂಬದ ಜೀವಾ, ಆಕೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹೆಣಗಾಡುವ ಕ್ಯಾರೆಕ್ಟರ್​ನವ. 

ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ ಭಾರಧ್ವಾಜ್​. ಜೀವಾನ ನಿಜವಾದ ಹೆಸರು  ಶಶಿ ಹೆಗ್ಡೆ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇತ್ತೀಚೆಗೆ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಅದ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ವೇದಿಕೆಯ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದವರು. ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಪತಿ ಶಶಿ ಜೊತೆ ಡಾನ್ಸ್​ ಮಾಡಿದ್ದು, ಪ್ರೇಮದ ಧಾರೆ ಹರಿಸಿದ್ದಾರೆ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಪೂರ್ಣಿಯ ಮಾಡರ್ನ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

 ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!
 
 ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ. 

ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಕಳೆದ ತಿಂಗಳಷ್ಟೇ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಅದರ ವಿಡಿಯೋ ಶೇರ್​  ಮಾಡಿಕೊಂಡಿದ್ದರು. ಲಾವಣ್ಯ ಕುರಿತು ಹೇಳುವುದಾದರೆ, ರಿಯಾಲಿಟಿ ಷೋ ಒಂದರಲ್ಲಿ ಇವರ ತಂದೆ,  ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು.  ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಹನಿಮೂನ್​ ಆಸೆಯೂ ನೆರವೇರಿದ್ದರಿಂದ ಬೇಗ ಮಗು ಮಾಡಿಕೊಳ್ಳಿ ಅಂತ ಕೆಲವು ಅಭಿಮಾನಿಗಳು ದಂಪತಿಗೆ ಸಲಹೆ ಕೊಟ್ಟಿದ್ದಾರೆ! ಬೇಗ ಮಗು ಮಾಡಿಕೊಂಡಷ್ಟು ಒಳ್ಳೆಯದು ಎಂದು ಇನ್ನು ಕೆಲವರು ಹೇಳುವ ಮೂಲಕ, ಮಗುವಿನ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ. 

ಶ್ವಾಸಕೋಶದ ಸಮಸ್ಯೆ ಮುಕ್ತಿಗೆ, ಮಕ್ಕಳಾಗೋದಕ್ಕೆ ಅರಳಿ ಮರನೇ ಯಾಕೆ? ಡಾ. ಗೌರಿಯಮ್ಮನವರ ಮಾತು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೆಟ್‌ನಲ್ಲಿ ವಾಟರ್‌ ಬ್ಯಾಗ್‌ ಒಡೀತು, ಜ್ಯೋತಿಷಿ ಹೇಳಿದಂತೆ ಖ್ಯಾತ ಹಾಸ್ಯನಟಿಗೆ ಮಗು ಜನನ;‌ 3ನೇಯದಕ್ಕೆ ಪ್ಲ್ಯಾನ್
Bigg Boss Kannada: ಬೇರೆಯವರಿಗೆ ಕೇಡು ಬಯಸಿದ Rakshita Shettyಗೆ ಮುಖಭಂಗ; ಮುಖಮುಚ್ಚಿ ಕೂತ ಗಿಲ್ಲಿ ವಂಶದ ಕುಡಿ